Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಹೈಡ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ನೋಡಿ ಟ್ರಿಕ್

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ವೈಯಕ್ತಿಕವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಆದರೆ ಕೆಲ ಟ್ರಿಕ್​ಗಳ ಮೂಲಕ ನಿಮ್ಮ ಪರ್ಸನಲ್ ಚಾಟ್ ಮರೆ ಮಾಡಬಹುದು.

Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಹೈಡ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ನೋಡಿ ಟ್ರಿಕ್
WhatsApp Tricks
Follow us
|

Updated on: Feb 26, 2023 | 7:43 PM

ಇಂದು ವಿಶ್ವದ ಮೂಲೆಮೂಲೆಯಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಅನ್ನು ಬಳಸುತ್ತಿದ್ದು ಕೋಟಿ ಗಟ್ಟಲೆ ಬಳಕೆದಾರರನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಜನರಿಗೆ ಅನುಕೂಲ ಆಗುವಂತಹ ಫೀಚರ್​ಗಳನ್ನು ಮೆಟಾ (Meta) ಒಡೆತನದ ಈ ಪ್ರಸಿದ್ಧ ಆ್ಯಪ್ ನೀಡುತ್ತಿರುವುದು. ಆಂಡ್ರಾಯ್ಡ್, ಐಒಎಸ್ ಹಾಗೂ ವೆಬ್ ಆವೃತ್ತಿಗೆ ನೂತನ ಆಯ್ಕೆಗಳನ್ನು ನೀಡುವ ವಾಟ್ಸ್​ಆ್ಯಪ್​ನಲ್ಲಿ (WhatsApp) ಈಗಾಗಲೇ ಸಾಲು ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ.  ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಅನೇಕ ಆಯ್ಕೆಗಳನ್ನು ನೀಡಿದೆ. ಆದರೆ, ಕೆಲವೊಂದು ತೀರಾ ವೈಯಕ್ತಿಕವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ (Hide) ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಆದರೆ ಕೆಲ ಟ್ರಿಕ್​ಗಳ ಮೂಲಕ ನಿಮ್ಮ ಪರ್ಸನಲ್ ಚಾಟ್ ಮರೆ ಮಾಡಬಹುದು.

ವಾಟ್ಸ್​ಆ್ಯಪ್​ನಲ್ಲಿ ಆರ್ಕೈವ್ಡ್ ಎಂಬ ಆಯ್ಕೆ ಇದೆ. ಈ ರೀತಿ ಆರ್ಕೈವ್ ಮಾಡಿದ ಚಾಟ್​​ಗಳು ಡಿಲೀಟ್ ಆಗುವುದಿಲ್ಲ. ಅವುಗಳು ನಿಮ್ಮ ಫೋನ್​ನಲ್ಲಿಯೇ ಇರುತ್ತವೆ. ಆದರೆ ಚಾಟ್ ಲಿಸ್ಟ್​​ನಲ್ಲಿ ಇವು ಕಾಣಿಸುವುದಿಲ್ಲ. ಈ ಆಯ್ಕೆಯ ನೆರವಿನಿಂದ ಬಳಕೆದಾರರು ಅನಗತ್ಯ ಚಾಟ್‌ಗಳನ್ನು ಹಾಗೂ ಸಂಭಾಷಣೆಗಳನ್ನು ಶಾಶ್ವತವಾಗಿ ಕೂಡ ಮರೆಮಾಡಬಹುದು.

ಆರ್ಕೈವ್ಡ್ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ಅನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ಅನ್​ಹೈಡ್ ಮಾಡಿ ನೋಡುವುದಕ್ಕೂ ಅವಕಾಶವಿರುತ್ತದೆ. ಕೇವಲ ನಿಮ್ಮ ವೈಯಕ್ತಿಕ ಚಾಟ್ ಮಾತ್ರವಲ್ಲದೆ ಗ್ರೂಪ್ ಚಾಟ್ ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.

ಇದನ್ನೂ ಓದಿ
Image
Whatsapp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಬಹುನಿರೀಕ್ಷಿತ ಶೆಡ್ಯುಲ್‌ ಫೀಚರ್: ಬಳಕೆದಾರರು ಫುಲ್ ಖುಷ್
Image
iQOO Z7: ಕೇವಲ ಫೋಟೋದಿಂದಲೇ ರೋಚಕತೆ ಸೃಷ್ಟಿಸಿದ ಐಕ್ಯೂ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಯಾವುದು?
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಚಾರ್ಜ್​ಗೆ ಹಾಕಿದಾಗ ಬಿಸಿಯಾಗುತ್ತಾ?: ನಿರ್ಲಕ್ಷಿಸದಿರಿ
Image
Tech Tips: ಯೂಟ್ಯೂಬ್​ನಲ್ಲಿ​ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಹೇಗೆ ಮಾಡುವುದು?

Realme GT 3: 10 ನಿಮಿಷಗಳ ಒಳಗೆ ಫುಲ್ ಚಾರ್ಜ್: ಮಾರುಕಟ್ಟೆಗೆ ಅಪ್ಪಳಿಸಲು ತಯಾರಾದ ರಿಯಲ್‌ ಮಿ GT 3 ಫೋನ್

ವಾಟ್ಸ್​ಆ್ಯಪ್​​ನಲ್ಲಿ ಶಾಶ್ವತವಾಗಿ ಚಾಟ್‌ ಹೈಡ್‌ ಮಾಡುವುದು ಹೇಗೆ?:

  • ವಾಟ್ಸ್​ಆ್ಯಪ್​​ ತೆರೆಯಿರಿ, ನೀವು ಆರ್ಕೈವ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆಮಾಡಿ.
  • ಮೇಲಿನ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಪಿನ್ ಮಾಡಿ, ಮ್ಯೂಟ್ ಮಾಡಿ ಮತ್ತು ಆರ್ಕೈವ್ ಮಾಡಿ.
  • ಆರ್ಕೈವ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಈ ಆರ್ಕೈವ್ ವಿಭಾಗವು ನಿಮ್ಮ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಕಾಣಿಸುತ್ತದೆ. ನೀವು ವಿಭಾಗಕ್ಕೆ ಹೋಗಬಹುದು ಮತ್ತು ನಿಮ್ಮ ಖಾಸಗಿ ಚಾಟ್‌ಗಳನ್ನು ಯಾವುದೇ ಸಮಯದಲ್ಲಿ ವೀಕ್ಷಿಸಬಹುದು.
  • ಅನ್ ಆರ್ಕೈವ್ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಆ ಚಾಟ್ ಅನ್ನು ಅನ್ ಆರ್ಕೈವ್ ಮಾಡಬಹುದು.
  • ನೀವು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಲು ಬಯಸಿದರೆ, ಚಾಟ್ಸ್ ಟ್ಯಾಬ್‌ಗೆ ಹೋಗಿ.
  • ಇನ್ನಷ್ಟು ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಚಾಟ್ಸ್ ಮೇಲೆ ಟ್ಯಾಪ್ ಮಾಡಿ.
  • ಈಗ ಚಾಟ್ ಹಿಸ್ಟರಿಗೆ ಹೋಗಿ ಮತ್ತು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಿ.

ಗಮನಿಸಿ: ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳು ಆ ವ್ಯಕ್ತಿ ಅಥವಾ ಗುಂಪು ಚಾಟ್‌ನಿಂದ ಹೊಸ ಸಂದೇಶವನ್ನು ಸ್ವೀಕರಿಸಿದಾಗ ಆರ್ಕೈವ್ ಆಗಿರುತ್ತವೆ. ಆರ್ಕೈವ್ ಮಾಡಿದ ಚಾಟ್‌ಗಳಲ್ಲಿ ಮೆನ್ಶನ್ ಮಾಡಿದರೆ ಅಥವಾ ಉತ್ತರಿಸಿದರೆ ಮಾತ್ರ ನೋಟಿಫಿಕೇಶನ್ ಬರುತ್ತದೆ. ಇಲ್ಲದಿದ್ದರೆ ಬರುವುದಿಲ್ಲ.

ತಾತ್ಕಾಲಿಕವಾಗಿ ಚಾಟ್ ಮರೆ ಮಾಡುವುದು ಹೇಗೆ?:

ನಿಮ್ಮ ವಾಟ್ಸ್​ಆ್ಯಪ್ ತೆರೆಯಿರಿ. ಯಾವ ವ್ಯಕ್ತಿಯ ಚಾಟ್​ನ್ನು ನೀವು ಮರೆ ಮಾಡಬೇಕೆಂದಿದ್ದೀರೋ ಆ ಚಾಟ್ ಮೇಲೆ ಒತ್ತಿ ಹಿಡಿಯಿರಿ. ಚಾಟ್ ಸೆಲೆಕ್ಟ್ ಆದ ಕೂಡಲೇ ಮೇಲ್ಭಾಗದಲ್ಲಿ ಆರ್ಕೈವ್ ಬಾಕ್ಸ್ (ಚಿಕ್ಕ ಬಾಣದ ಗುರುತು ಕೆಳಮುಖ ಮಾಡಿರುವ ಪುಟ್ಟ ಬಾಕ್ಸ್ ) ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ. ಈಗ ನಿಮ್ಮ ಚಾಟ್ ಲಿಸ್ಟ್ ನಿಂದ ಆ ವ್ಯಕ್ತಿಯ ಚಾಟ್ ಮರೆಯಾಗುತ್ತದೆ. ವೈಯಕ್ತಿಕ ಖಾತೆ ಮಾತ್ರ ಅಲ್ಲ ಗ್ರೂಪ್ ಚಾಟ್ ಕೂಡಾ ಇದೇ ರೀತಿ ಯಾರಿಗೂ ಕಾಣದಂತೆ ಹೈಡ್ ಮಾಡಬಹುದಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ