Tech Tips: ಯೂಟ್ಯೂಬ್​ನಲ್ಲಿ​ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಹೇಗೆ ಮಾಡುವುದು?

Youtube Tricks: ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ ಮಧ್ಯ ಮಧ್ಯ ಬರುವ ಜಾಹೀರಾತುಗಳನ್ನು ಕಾಣಿಸದಂತೆ ಬ್ಲಾಕ್ ಮಾಡಬಹುದಾಗಿದೆ. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್ (Tech Tips).

Tech Tips: ಯೂಟ್ಯೂಬ್​ನಲ್ಲಿ​ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಹೇಗೆ ಮಾಡುವುದು?
Youtube
Follow us
|

Updated on: Feb 25, 2023 | 6:50 PM

ಈಗ ಯೂಟ್ಯೂಬ್‌ನಲ್ಲಿ (YouTube) ವಿಡಿಯೋಗಳನ್ನು ನೋಡುವುದು ಎಂದರೆ ಅದು ಒಂದು ರೀತಿ ಟಿವಿಯನ್ನು ನೋಡಿದ ಹಾಗೆ. ಯಾಕೆಂದರೆ ಅಷ್ಟೊಂದು ಜಾಹೀರಾತುಗಳು ಒಂದರ ಹಿಂದೆ ಒಂದರಂತೆ ಬರುತ್ತಾ ಇರುತ್ತವೆ. ವಿಡಿಯೋವನ್ನು ಸತತವಾಗಿ ನೋಡಲು ಸಾಧ್ಯವೇ ಇಲ್ಲ. ಏನಾದರು ಅಗತ್ಯವಾದ ಅಥವಾ ಕುತೂಹಲಕಾರಿ ವಿಡಿಯೋವನ್ನು ನೋಡುತ್ತಿರುವಾಗ ಜಾಹೀರಾತು (Advertisement) ಬಂದರೆ ಮೂಡ್‌ ಆಫ್‌ ಆಗಿ ಬಿಡುತ್ತದೆ. ಇಷ್ಟೇಲ್ಲಾ ಇರುವ ಯೂಟ್ಯೂಬ್‌ನ ಆದಾಯದ ಪ್ರಮುಖ ಮೂಲ ಜಾಹೀರಾತುಗಳೇ. ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ ಮಧ್ಯ ಮಧ್ಯ ಬರುವ ಜಾಹೀರಾತುಗಳನ್ನು ಕಾಣಿಸದಂತೆ ಬ್ಲಾಕ್ ಮಾಡಬಹುದಾಗಿದೆ. ಹಾಗಾದ್ರೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬಂದೇ ಇಲ್ಲ ಎಂದರೆ ಹೇಗೆ..?. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್ (Tech Tips).

ಆ್ಯಡ್ ಬ್ಲಾಕರ್ ಉಪಯೋಗಿಸಿ:

ಬ್ರೌಸರ್‌ನಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಗುಣಮಟ್ಟದ ಜಾಹೀರಾತು ಬ್ಲಾಕರ್‌ಗಳನ್ನು ಉಪಯೋಗಿಸಿದರೆ ನಿಮಗೆ ಆ್ಯಡ್‌ಫ್ರೀ ಯೂಟ್ಯೂಬ್‌ ವೀಕ್ಷಣೆ ಸಿಗುತ್ತದೆ. ಆಡ್‌ಬ್ಲಾಕ್‌, ಸ್ಟಾಪ್‌ ಆಡ್‌ಗಳಂತಹ ಆಡ್‌ ಬ್ಲಾಕರ್‌ಗಳು ಬ್ರೌಸರ್‌ ಎಕ್ಸಟೆನ್ಷನ್‌ ಆಗಿ ದೊರೆಯುತ್ತವೆ. ಇನ್‌ಸ್ಟಾಲ್‌ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ಆನಂದಿಸಬಹುದು. ಆ್ಯಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆಡ್‌ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್‌ ಇಂಜಿನ್‌ಗಳಲ್ಲಿ ನೀವು ಜಾಹೀರಾತಯ ಮುಕ್ತ ವಿಡಿಯೋಗಳನ್ನು ನೋಡಬಹುದು.

ಇದನ್ನೂ ಓದಿ
Image
Nokia C02: ಅತಿ ಕಡಿಮೆ ಬೆಲೆಯ ನೋಕಿಯಾ C02 ಸ್ಮಾರ್ಟ್​ಫೋನ್ ಬಿಡುಗಡೆ: ಏನೆಲ್ಲ ಫೀಚರ್ಸ್ ಇದೆ ನೋಡಿ
Image
Tech Tips: ಸ್ಮಾರ್ಟ್​ಫೋನ್ ಡಿಸ್ ಪ್ಲೇ ಮೇಲೆ ಸ್ಕ್ರಾಚ್​ಗಳಿದ್ದರೆ ಸುಲಭವಾಗಿ ಹೇಗೆ ತೆಗೆಯುವುದು?
Image
Tech Tips: ಮೊಬೈಲ್ ಚಾರ್ಜರ್​ಗಳ ಬಣ್ಣ ಕಪ್ಪು ಮತ್ತು ಬಿಳಿ ಮಾತ್ರ ಇರುತ್ತದೆ ಯಾಕೆ ಗೊತ್ತೇ?; ಇಲ್ಲಿದೆ ಸೀಕ್ರೆಟ್
Image
Smule App: ಸ್ಮ್ಯೂಲ್ ಕರೋಕೆ ಆ್ಯಪ್​ಗೆ ಹವ್ಯಾಸಿ ಹಾಡುಗಾರರು ಫಿದಾ: ಇದನ್ನು ಹೇಗೆ ಬಳಸುವುದು?

Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡಬೇಡಿ

ಯೂಟ್ಯೂಬ್ ಪರ್ಯಾಯ ಆ್ಯಪ್​ಗಳನ್ನು ಬಳಸಿ:

ಜಾಹೀರಾತು ಬೇಡ ಎಂದರೆ ಯೂಟ್ಯೂಬ್‌ನಂತೆಯೇ ಇರುವ ಪರ್ಯಾಯ ಆ್ಯಪ್‌ಗಳನ್ನು ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ವಿಡಿಯೋಗಳನ್ನು ನೋಡಬಹುದು. ಬೇಕಾದಲ್ಲಿ ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದು. ಸ್ವತಃ ಯೂಟ್ಯೂಬ್ ಡೌನ್ಲೋಡ್ ಆಯ್ಕೆ ನೀಡಿದ್ದು, ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇಲ್ಲ ಎಂದಾದರು ಡೌನ್ಲೋಡ್ ಮಾಡಿದ್ದರೆ ಆರಾಮವಾಗಿ ಯಾವುದೇ ಜಾಹೀರಾತು ಇಲ್ಲದೆ ವೀಕ್ಷಿಸಬಹುದು.

ಅಂತೆಯೆ ಕೇವಲ ಒಂದು ಡಾಕ್ ಹಾಕುವುದರಿಂದ ಯೂಟ್ಯೂಬ್​ನಲ್ಲಿ ಬರುವ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಯಾವುದೇ ಯೂಟ್ಯೂಬ್‌ ಲಿಂಕ್‌ನಲ್ಲಿ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.) ಹಾಕಿ ಪ್ಲೇ ಮಾಡಿದರೆ, ಆ ವಿಡಿಯೋದಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಎಲ್ಲ ಜಾಹೀರಾತುಗಳನ್ನು ಬ್ಲಾಕ್‌ ಮಾಡುತ್ತದೆ. ಇದು ಕೇವಲ ಡೆಸ್ಕ್‌ಟಾಪ್‌ ಬ್ರೌಸರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.

ಚಂದಾದಾರಿಕೆ ಪಡೆದುಕೊಳ್ಳಿ:

ಜಾಹೀರಾತುಗಳ ಕಿರಿಕಿರಿ ಬೇಡ ಎನ್ನುವವರು, ಹಣ ತೆತ್ತು ಯೂಟ್ಯೂಬ್‌ ಪ್ರೀಮಿಯಂ ಖಾತೆಯ ಚಂದಾದಾರಿಕೆ ಪಡೆದುಕೊಳ್ಳಬಹುದು. ಫ್ರೀ ಖಾತೆಯಲ್ಲಿ ಇಲ್ಲದ ಸವಲತ್ತುಗಳು, ಯೂಟ್ಯೂಬ್‌ ಪ್ರೀಮಿಯಂನಲ್ಲಿವೆ. ಇದುವರೆಗೂ ಅದಕ್ಕೆ ಹಣ ತೆರಲು ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ಆಯ್ಕೆಗಳು ಮಾತ್ರವೇ ಇದ್ದವು. ಆದರೆ ಈಗ ಯುಪಿಐ ಮೂಲಕವೂ ಶುಲ್ಕ ಸಂದಾಯ ಮಾಡಬಹುದಾಗಿದೆ. ಇದರಲ್ಲಿ ಯೂಟ್ಯೂಬ್‌ ಮ್ಯೂಸಿಕ್‌ನ ಭಂಡಾರದಲ್ಲಿರುವ ಹಾಡುಗಳನ್ನು ಕೇಳಬಹುದು. ಜೊತೆಗೆ ಯೂಟ್ಯೂಬ್‌ ಒರಿಜಿನಲ್ಸ್‌ ಸರಣಿಯಲ್ಲಿರುವ ಧಾರಾವಾಹಿಗಳನ್ನು ವೀಕ್ಷಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ