Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡಬೇಡಿ

ಹೆಚ್ಚಿನವರು ಯಾವುದೇ ಸ್ಮಾರ್ಟ್‌ಪೋನ್‌ ಖರಿದೀಸುವ ಮುನ್ನ ಆ ಪೋನಿನ ಡಿಸ್‌ಪ್ಲೇ ಎಷ್ಟು ಅಗಲ ಮತ್ತು ಉದ್ದ ಇದೆ ಎಂದು ನೋಡಿ ಪೋನ್ ಖರೀದಿಸುತ್ತಾರಂತೆ. ಆದರೆ, ನಿಮಗೆ ಗೊತ್ತಾ? 100 ಜನ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ 90 ಜನರಿಗೆ ತಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗುಣಮಟ್ಟ ಎಷ್ಟಿದೆ ಎಂಬುದೇ ತಿಳಿದಿರುವುದಿಲ್ಲ.

Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡಬೇಡಿ
Smatphones
Follow us
Vinay Bhat
|

Updated on: Feb 24, 2023 | 6:59 AM

ಇಂದಿನ ದಿನಗಳಲ್ಲಿ ಮೊಬೈಲ್ (Mobile) ಎಂಬುದು ದೊಡ್ಡ ವಿಷಯವೇ ಅಲ್ಲ. ಎಲ್ಲದರೂ ಸ್ಮಾರ್ಟ್​ಫೋನ್ (Smartphone) ಕಳೆದು ಹೋದಲ್ಲಿ, ಕಳುವಾದರೆ ಅದನ್ನು ಹುಡುಕುವ ಕೆಲಸಕ್ಕೆಲ್ಲ ಯಾರು ಹೋಗುವುದಿಲ್ಲ. ಮತ್ತೊಂದು ಹೊಸ ಫೋನನ್ನು ಖರೀದಿ ಮಾಡುತ್ತಾರೆ. ಯಾಕೆಂದರೆ ಈಗ ಕೈಗೆಟಕುವ ದರದಲ್ಲಿ ಮೊಬೈಲ್​ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಲವು ವರದಿಗಳ ಪ್ರಕಾರ ಹೆಚ್ಚಿನವರು ಯಾವುದೇ ಸ್ಮಾರ್ಟ್‌ಪೋನ್‌ ಖರಿದೀಸುವ ಮುನ್ನ ಆ ಸ್ಮಾರ್ಟ್‌ಪೋನಿನ ಡಿಸ್‌ಪ್ಲೇ (Display) ಎಷ್ಟು ಅಗಲ ಮತ್ತು ಉದ್ದ ಇದೆ ಎಂದು ನೋಡಿ ಪೋನ್ ಖರೀದಿಸುತ್ತಾರಂತೆ. ಇನ್ನು ಸ್ವಲ್ಪ ಹೆಚ್ಚು ತಿಳಿದವರಾದರೆ, ಆ ಪೋನಿನ ವೇಗ ಎಷ್ಟು, ಸಾಫ್ಟ್‌ವೇರ್ ಯಾವುದು ಎಂದೆಲ್ಲ ಚೆಕ್ ಮಾಡುತ್ತಾರಂತೆ. ಆದರೆ, ನಿಮಗೆ ಗೊತ್ತಾ? 100 ಜನ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ 90 ಜನರಿಗೆ ತಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗುಣಮಟ್ಟ ಎಷ್ಟಿದೆ ಎಂಬುದೇ ತಿಳಿದಿರುವುದಿಲ್ಲ.

ಹೌದು, ಇತ್ತೀಚಿನ ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇ. ಆ ಫೋನಿನ ಡಿಸ್‌ಪ್ಲೇಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಆ ಸ್ಮಾರ್ಟ್‌ಫೋನ್ ಉಪಯೋಗಕ್ಕೆ ಬರುವುದಿಲ್ಲ ಎನ್ನುವುದು ತಿಳಿದಿದೆ. ಆದರೂ, ಯಾವೋರ್ವರು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲೀಸದೇ ಸ್ಮಾರ್ಟ್‌ಪೋನ್ ಖರೀದಿಸುತ್ತಿದ್ದಾರೆ ಎಂದರೆ, ಅವರು ಖಂಡಿತವಾಗಿಯೂ ಮೋಸ ಹೋಗುತ್ತಿದ್ದಾರೆ ಎಂದರ್ಥ.

ಈಗಿನ ಡಿಜಿಟಲ್ ಯುಗದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಫೋನ್‌ಗಳು ಲಭ್ಯವಿದ್ದು ಅವುಗಳ ಡಿಸ್‌ಪ್ಲೇ ಬದಲಾಗುತ್ತಲೇ ಇರುತ್ತದೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ. ಅಂತೆಯೇ ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ. ಹಾಗಾಗಿ, ನಿಮ್ಮ ಸ್ಕ್ರೀನ್ ಡೆನ್ಸಿಟಿ ವ್ಯಾಲ್ಯೂವನ್ನು ಕಂಡುಕೊಳ್ಳುವುದು ಹೇಗೆ ಎಂಬ ಅಂಶವನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಇದನ್ನೂ ಓದಿ
Image
Infinix Smart 7: 6000mAh ಬ್ಯಾಟರಿ: ಭಾರತದಲ್ಲಿ ಕೇವಲ 7,299 ರೂ. ಗೆ ರಿಲೀಸ್ ಆಗಿದೆ ಹೊಸ ಫೋನ್: ಯಾವುದು?
Image
Best 2 TB Hard Disks In India: ಕಡಿಮೆ ಬೆಲೆಗೆ ಸಿಗುತ್ತಿರುವ 2TB ಸ್ಟೋರೇಜ್ ಸಾಮರ್ಥ್ಯದ ಬೆಸ್ಟ್ ಹಾರ್ಡ್ ಡಿಸ್ಕ್ ಇಲ್ಲಿದೆ ನೋಡಿ
Image
IPL 2023: 4K ರೆಸಲ್ಯೂಶನ್​ನಲ್ಲಿ ಐಪಿಎಲ್ 2023 ವೀಕ್ಷಿಸಿ: ಜಿಯೋ ಬಳಕೆದಾರರಿಗೆ ಬಂಪರ್ ಸುದ್ದಿ
Image
Noisefit Crew: ₹1,499ಕ್ಕೆ ದೊರೆಯುತ್ತಿದೆ ಆಕರ್ಷಕ ವಿನ್ಯಾಸದ ನಾಯ್ಸ್​ಫಿಟ್ ಕ್ರೂ ಸ್ಮಾರ್ಟ್​ವಾಚ್

Tech Tips: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆ​ಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಪಿಪಿಐ ಎಂದರೇನು?: ಪಿಪಿಐ ಎಂದರೆ ಪಿಕ್ಸೆಲ್ಸ್ ಪರ್ ಇಂಚ್. ಇಲೆಕ್ಟ್ರಾನಿಕ್ ಇಮೇಜ್ ಸಾಧನದಲ್ಲಿರುವ ಪಿಕ್ಸೆಲ್ ಡೆನ್ಸಿಟಿಯ ಅಳತೆಯನ್ನು ಇದು ಒಳಗೊಂಡಿದೆ. ಕಂಪ್ಯೂಟರ್ ಮಾನಿಟರ್ ಅಥವಾ ಟಿವಿ ಡಿಸ್‌ಪ್ಲೇ, ಕ್ಯಾಮೆರಾ ಅಥವಾ ಇಮೇಜ್ ಸ್ಕ್ಯಾನರ್‌ನಲ್ಲಿ ಪಿಪಿಐ ಯನ್ನು ಕಂಡುಕೊಳ್ಳಬಹುದು. ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿರುವ ಪಾಯಿಂಟ್‌ಗಳ ತೀಕ್ಷ್ಣತೆಯ ಅಳತೆಯನ್ನು ಪಿಪಿಐ ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಡಿಪಿಐ ಎಂದರೇನು?: ಡಿಪಿಐ ಎಂದರೆ ಡಾಟ್ಸ್ ಪರ್ ಇಂಚ್. ಇದು ಸ್ಕ್ರೀನ್ ಮತ್ತು ಇನ್ ಪ್ರಿಂಟ್‌ ಇವೆರಡರಲ್ಲೂ ಇರುವ ಇಮೇಜ್‌ನ ರೆಸಲ್ಯೂಶನ್ ಅನ್ನು ಅಳತೆ ಮಾಡುತ್ತದೆ. ನೀವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಹೆಚ್ಚಿನ ಎಪಿಕೆ ಫೈಲ್‌ಗಳನ್ನು ಇಂಟರ್ನೆಟ್‌ನಲ್ಲಿ ಕಂಡಿರುತ್ತೀರಿ. ಈ ಎಪಿಕೆ ಫೈಲ್‌ಗಳನ್ನು ಬೇರೆ ಬೇರೆ ಅಂಶಗಳ ಮೂಲಕ ವರ್ಗೀಕರಿಸಲಾಗುತ್ತದೆ ಅಂದರೆ ಪ್ರೊಸೆಸರ್ ಪ್ರಕಾರಗಳು ಮತ್ತು ಡಿಪಿಐ ಮೌಲ್ಯಗಳು ಎಂದಾಗಿದೆ. ಇದು ಡಿವೈಸ್‌ನ ಡಿಸ್‌ಪ್ಲೇ ಡೆನ್ಸಿಟಿಯನ್ನು ಪ್ರತಿನಿಧಿಸುತ್ತಿದ್ದು ಇದರಿಂದ ಬಳಕೆದಾರರು ಸ್ಕ್ರೀನ್ ಮೇಲೆ ಯಾವ ಬಗೆಯ ಅಂಶ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಡಿಪಿಐ ಮೌಲ್ಯ ತಿಳಿಯುವುದು ಹೇಗೆ?: ನಿಮ್ಮ ಫೋನ್‌ನ ಡಿಪಿಐ ಮೌಲ್ಯವನ್ನು ಕಂಡುಕೊಳ್ಳಲು, ನೀವು “ಡಿಸ್‌ಪ್ಲೇ ಇನ್‌ಫೋ” ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಈಗ ಡೆನ್ಸಿಟಿ ಕ್ಷೇತ್ರದತ್ತ ಗಮನಹರಿಸಿ ಮತ್ತು ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೈಟ್‌ಗೆ ಹೋಗಿ. ನಂತರ ಮೊಬೈಲ್​ನ ಹೆಸರಿನಲ್ಲಿರುವ ಡಿಪಿಐ ಮೌಲ್ಯವನ್ನು ಪರಿಶೀಲಿಸಿಕೊಳ್ಳಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ