Tech Tips: ಮೊಬೈಲ್ ಚಾರ್ಜರ್​ಗಳ ಬಣ್ಣ ಕಪ್ಪು ಮತ್ತು ಬಿಳಿ ಮಾತ್ರ ಇರುತ್ತದೆ ಯಾಕೆ ಗೊತ್ತೇ?; ಇಲ್ಲಿದೆ ಸೀಕ್ರೆಟ್

Mobile Charger: ಮೊಬೈಲ್​ ಚಾರ್ಜರ್​ಗಳು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಇದು ಯಾಕೆ ಗೊತ್ತೇ?. ಇದರ ಹಿಂದೆ ಯಾವುದೇ ಕಾರಣವಿಲ್ಲ ಎಂದು ನೀವು ಭಾವಿಸಿದರೆ ಅದು ಸಂಪೂರ್ಣವಾಗಿ ತಪ್ಪು.

Tech Tips: ಮೊಬೈಲ್ ಚಾರ್ಜರ್​ಗಳ ಬಣ್ಣ ಕಪ್ಪು ಮತ್ತು ಬಿಳಿ ಮಾತ್ರ ಇರುತ್ತದೆ ಯಾಕೆ ಗೊತ್ತೇ?; ಇಲ್ಲಿದೆ ಸೀಕ್ರೆಟ್
Smartphone Chargers
Follow us
|

Updated on: Feb 24, 2023 | 7:20 PM

ಮಾರುಕಟ್ಟೆಯಲ್ಲಿ ಅನೇಕ ಬಣ್ಣಗಳ ಸ್ಮಾರ್ಟ್​ಫೋನ್​ಗಳಿವೆ (Smartphones). ಒಂದೇ ಫೋನ್​ಗಳು ವಿವಿಧ ಕಲರ್​ನಲ್ಲಿ ಬಿಡುಗಡೆ ಆಗುತ್ತವೆ. ಇತ್ತೀಚೆಗಷ್ಟೆ ವಿವೋ ಕಂಪನಿ ತನ್ನ ಫೋನ್ ಹಿಂಭಾಗದಲ್ಲಿ ಸೂರ್ಯನ ಕಿರಣಕ್ಕೆ ಬಣ್ಣ ಬದಲಾಗುವ ವಿಭಿನ್ನ ಪ್ರಯತ್ನ ನಡೆಸಿ ಯಶಸ್ವಿಯಾಗಿತ್ತು. ಹೀಗೆ ಸ್ಮಾರ್ಟ್​ಫೋನ್​ಗಳು ಅನೇಕ ರೀತಿಯಲ್ಲಿವೆ. ಆದರೆ, ಈ ಸ್ಮಾರ್ಟ್​ಫೋನ್​ಗಳ ಜೊತೆ ಬರುವ ಚಾರ್ಜರ್​ಗಳು (Charger) ಮಾತ್ರ ಕೇವಲ ಎರಡು ಮಾದರಿಯಲ್ಲಿ ಮಾತ್ರ ಇರುತ್ತದೆ. ಹೌದು, ಮೊಬೈಲ್​ಗಳ ರೀತಿ ಕೆಂಪು, ಹಸಿರು, ನೀಲಿ ಹೀಗೆ ಅನೇಕ ಬಣ್ಣಗಳಲ್ಲಿ ಮೊಬೈಲ್​ ಚಾರ್ಜರ್​ಗಳು ಇರುವುದಿಲ್ಲ. ಅವು ಕಪ್ಪು (Black Color Charger) ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಇದು ಯಾಕೆ ಗೊತ್ತೇ?.

ಇದರ ಹಿಂದೆ ಯಾವುದೇ ಕಾರಣವಿಲ್ಲ ಎಂದು ನೀವು ಭಾವಿಸಿದರೆ ಅದು ಸಂಪೂರ್ಣವಾಗಿ ತಪ್ಪು. ಏಕೆಂದರೆ ಕಂಪನಿಗಳು ಸ್ಮಾರ್ಟ್‌ಫೋನ್ ಚಾರ್ಜರ್‌ಗಳನ್ನು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ತಯಾರಿಸುವುದಕ್ಕೆ ಒಂದು ಬಲವಾದ ಕಾರಣವಿದೆ. ಮೊಬೈಲ್ ಕಂಪನಿಗಳು ಕೆಂಪು, ಹಳದಿ, ನೀಲಿ ಅಥವಾ ಇತರೆ ಬಣ್ಣಗಳಲ್ಲಿ ಚಾರ್ಜರ್‌ಗಳನ್ನು ತಯಾರಿಸದಿರಲು ಕಾರಣ ಬಾಳಿಕೆ ಮತ್ತು ವೆಚ್ಚ. ಕಪ್ಪು ಮತ್ತು ಬಿಳಿ ಬಣ್ಣಗಳು ಚಾರ್ಜರ್‌ನ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಇತರ ಬಣ್ಣಗಳಿಗೆ ಹೋಲಿಸಿದರೆ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಚಾರ್ಜರ್‌ಗಳನ್ನು ತಯಾರಿಸಲು ಕಂಪನಿಗಳಿಗೆ ವೆಚ್ಚವೂ ಕಡಿಮೆ ಆಗುತ್ತದೆ.

Infinix Smart 7: 6000mAh ಬ್ಯಾಟರಿ: ಭಾರತದಲ್ಲಿ ಕೇವಲ 7,299 ರೂ. ಗೆ ರಿಲೀಸ್ ಆಗಿದೆ ಹೊಸ ಫೋನ್: ಯಾವುದು?

ಇದನ್ನೂ ಓದಿ
Image
UPI LITE: ಪೇಟಿಎಂ ಆ್ಯಪ್ ಬಳಸುವವರಿಗೆ ಬಂಪರ್ ಸುದ್ದಿ: ಬಿಡುಗಡೆ ಆಗಿದೆ ಹೊಸ ಆ್ಯಪ್
Image
Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡಬೇಡಿ
Image
WhatsApp Edit Message: ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು: ಹೇಗೆ ಗೊತ್ತೇ?
Image
Mobile Lost: ಮೊಬೈಲ್ ಕಳೆದುಹೋದರೆ ಸುಲಭದಲ್ಲಿ ನೀವೇ ಹುಡುಕುವುದು ಹೇಗೆ?

ಕಪ್ಪು ಬಣ್ಣದ ಚಾರ್ಜರ್ ಪ್ರಯೋಜನ:

ಕೆಲವು ವರ್ಷಗಳ ಹಿಂದಿನವರೆಗೂ ಸ್ಮಾರ್ಟ್‌ಫೋನ್ ಚಾರ್ಜರ್‌ಗಳು ಕಪ್ಪು ಬಣ್ಣಗಳಲ್ಲಿ ಮಾತ್ರ ಇದ್ದವು. ಕಪ್ಪು ಬಣ್ಣದ ವಿಶೇಷತೆ ಎಂದರೆ ಅದು ಇತರ ಬಣ್ಣಗಳಿಗಿಂತ ಚೆನ್ನಾಗಿ ಶಾಖವನ್ನು ಹೀರಿಕೊಳ್ಳುತ್ತದೆ. ಕಪ್ಪು ಬಣ್ಣಕ್ಕೆ ಈ ವಿಶೇಷವಾದ ಶಕ್ತಿಯಿದೆ. ಇದು ಚಾರ್ಜಿಂಗ್ ಸಮಯದಲ್ಲಿ ಉಂಟಾಗುವ ಶಾಖದಿಂದ ಚಾರ್ಜರ್ ಅನ್ನು ರಕ್ಷಿಸುತ್ತದೆ. ಕಪ್ಪು ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್‌ಗೆ ಪ್ರವೇಶಿಸದಂತೆ ತಡೆ ಹಿಡಿಯುತ್ತದೆ. ಎರಡನೆಯದಾಗಿ, ಕಪ್ಪು ವಸ್ತುವು ಇತರ ಬಣ್ಣಗಳಿಗಿಂತ ಅಗ್ಗವಾಗಿದೆ. ಇದು ಚಾರ್ಜರ್ ತಯಾರಿಕೆಯ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ.

ಬಿಳಿ ಬಣ್ಣದ ಚಾರ್ಜರ್ ಪ್ರಯೋಜನ:

ಕಳೆದ ಕೆಲವು ವರ್ಷಗಳಿಂದ ಕಂಪನಿಗಳು ಮೊಬೈಲ್ ಜೊತೆ ಬಿಳಿ ಬಣ್ಣದ ಚಾರ್ಜರ್ ನೀಡುತ್ತಿವೆ. ಬಿಳಿ ಚಾರ್ಜರ್ ಉಪಯೋಗ ಮಾಡಲು ಮೂರು ಕಾರಣಗಳಿವೆ. ಮೊದಲನೆಯದಾಗಿ, ಬಿಳಿ ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್ ಒಳಗೆ ಪ್ರವೇಶಿಸದಂತೆ ತಡೆಹಿಡಿಯುತ್ತದೆ. ಎಲ್ಲರಿಗೂ ತಿಳಿದಿರುವಂತೆ ಬಿಳಿ ಬಣ್ಣ ಹೆಚ್ಚು ಶಾಖದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಡಿಮೆ ಶಾಖ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಚಾರ್ಜರ್ ಕಡಿಮೆ ಬಿಸಿಯಾಗುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಕಪ್ಪು ಬಣ್ಣದ ಚಾರ್ಜರ್‌ಗಳ ಸಮಸ್ಯೆಯೆಂದರೆ ರಾತ್ರಿಯ ಕತ್ತಲೆಯಲ್ಲಿ ಅವುಗಳನ್ನು ಕಂಡುಹಿಡಿಯುವುದು ಕಷ್ಟ. ಅದೇ ಬಿಳಿ ಬಣ್ಣದ ಚಾರ್ಜರ್ ಕತ್ತಲೆಯಲ್ಲಿಯೂ ಸುಲಭವಾಗಿ ಗೋಚರಿಸುತ್ತದೆ. ಬಿಳಿ ಬಣ್ಣವು ಸೌಮ್ಯತೆಯ ಸಂಕೇತವಾಗಿದ್ದು ಎಲ್ಲರಿಗೂ ಇಷ್ಟವಾಗುತ್ತದೆ. ಅದಕ್ಕಾಗಿಯೇ ಈಗ ಕಂಪನಿಗಳು ಹೆಚ್ಚು ಬಿಳಿ ಬಣ್ಣದ ಚಾರ್ಜರ್‌ಗಳನ್ನು ತಯಾರಿಸಲು ಪ್ರಾರಂಭಿಸಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​