Mobile Lost: ಮೊಬೈಲ್ ಕಳೆದುಹೋದರೆ ಸುಲಭದಲ್ಲಿ ನೀವೇ ಹುಡುಕುವುದು ಹೇಗೆ?

ನಮ್ಮ ದೇಶದಲ್ಲಿ ಸ್ಮಾರ್ಟ್​ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆಯೇ, ಮೊಬೈಲ್ ಕಳ್ಳತನವೂ ಹೆಚ್ಚಾಗುತ್ತಿದೆ. ಅಲ್ಲದೆ, ಜನರು ಗಡಿಬಿಡಿಯಲ್ಲಿ ಮೊಬೈಲ್ ಕಳೆದುಕೊಳ್ಳುವುದೂ ನಡೆಯುತ್ತಿದೆ. ಫೋನ್ ಕಳವಾದರೆ ಇಲ್ಲವೇ ಕಳೆದುಹೋದರೆ, ಹಲವರಿಗೆ ತಕ್ಷಣಕ್ಕೆ ಏನು ಮಾಡಬೇಕೆಂದೇ ತೋಚುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಮಾಡಬೇಕಾಗಿರುವುದೇನು? ಸ್ಮಾರ್ಟ್​ಫೋನ್​ನಲ್ಲಿರುವ IMEI ನಂಬರ್ ಬಳಸಿಕೊಂಡು, ಫೋನ್ ಹುಡುಕುವುದು ಹೇಗೆ? ಪೊಲೀಸರಿಗೆ ದೂರು ನೀಡಿದ ಬಳಿಕ ಏನು ಮಾಡಬೇಕು? ಆನ್​ಲೈನ್​ನಲ್ಲಿ ನಾವು ಅನುಸರಿಸಬೇಕಾದ ಹಂತಗಳು ಯಾವುದು? ಎನ್ನುವ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

Mobile Lost: ಮೊಬೈಲ್ ಕಳೆದುಹೋದರೆ ಸುಲಭದಲ್ಲಿ ನೀವೇ ಹುಡುಕುವುದು ಹೇಗೆ?
ದೂರು ನೀಡಲು ಅಗತ್ಯವಾಗಿ ಬೇಕು ಐಎಂಇಐ ನಂಬರ್
Follow us
|

Updated on:Feb 23, 2023 | 7:26 PM

ನಮ್ಮ ಜೀವನದ ಒಂದು ಭಾಗವಾಗಿ ಬದಲಾಗಿರುವ ಸ್ಮಾರ್ಟ್​ಫೋನ್ ಅಕಸ್ಮಾತ್ ಆಗಿ ಕಳೆದು ಹೋದಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ಕೇವಲ ದುಬಾರಿ ಬೆಲೆ ವಸ್ತು ಎನ್ನುವುದಕ್ಕಿಂತಲೂ ಅದರಲ್ಲಿರುವ ಸಂಪರ್ಕ ಸಂಖ್ಯೆಗಳು, ಒಡನಾಡಿಗಳ ಜೊತೆಗಿರುವ ಫೋಟೋಗಳು ಮತ್ತು ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭಯ ಸಾಕಷ್ಟು ಕಾಡುತ್ತಿರುತ್ತದೆ. ಆದರೆ ಇದಕ್ಕೆ ಇದೀಗ ನೀವು ಹೆದರಬೇಕಿಲ್ಲ.. ಸ್ಮಾರ್ಟ್​ಫೋನ್ ಕಳೆದುಹೋದ ತಕ್ಷಣವೇ ಸಿಇಐಆರ್ ವೆಬ್​ಸೈಟ್​ನಲ್ಲಿ (https://www.ceir.gov.in/) ನಿಮ್ಮ ಫೋನ್​ನ ಐಎಂಇಐ ನಂಬರ್ (IMEI Number) ದಾಖಲಿಸುವ ಮೂಲಕ ದೂರು ನೀಡಿ. ಸಿಇಐರ್ ಅನ್ನು ದೆಹಲಿ ಪೊಲೀಸ್, ಟೆಲಿಕಾಂ ಸಚಿವಾಲಯ ಮತ್ತು ಟೆಲಿಮ್ಯಾಟಿಕ್ಸ್ ಕೇಂದ್ರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ದೂರು ನೀಡಲು ನಿಮಗೆ ಕಳೆದುಹೋದ ಫೋನ್​ನ ಐಎಂಇಐ ನಂಬರ್ ಮಾತ್ರ ಸಾಕಾಗುತ್ತದೆ. ಫೋನ್​ನ ಬಿಲ್, ಬಾಕ್ಸ್​ನಲ್ಲಿ ಐಎಂಇಐ ಎನ್ನುವ 15 ಅಂಕಿಗಳ ನಂಬರ್ ಇರುತ್ತದೆ.

IMEI ನಂಬರ್ ಎಂದರೆ ಏನು?

ಇಂಟರ್​ನ್ಯಾಶನಲ್ ಮೊಬೈಲ್ ಇಕ್ವಿಪ್​ಮೆಂಟ್ ಐಡೆಂಟಿಟಿ ಅಂದರೆ, ಐಎಂಇಐ ನಂಬರ್ ಪ್ರತಿಯೊಂದು ಫೋನ್​ಗೆ ಇರುವ ವಿಶಿಷ್ಟ ಸಂಖ್ಯೆ. ಈ ಸಂಖ್ಯೆಯನ್ನು ಬಳಸಿಕೊಂಡು, ಪೊಲೀಸರು ನಿಮ್ಮ ಕಳವಾದ ಸ್ಮಾರ್ಟ್​ಫೋನ್ (Smartphone) ಅನ್ನು ಹುಡುಕಲು ಸಾಧ್ಯವಾಗುತ್ತದೆ. ಈ ನಂಬರ್ ಅನ್ನು ನಾವು ನೋಟ್ ಮಾಡಿಟ್ಟುಕೊಳ್ಳುವುದು, ಇಲ್ಲವೇ ಬಿಲ್ ಅಥವಾ ಫೋನ್ ಬಾಕ್ಸ್ ಅನ್ನು ತೆಗೆದಿರಿಸುವುದು ಕೂಡ ಅಗತ್ಯವಾಗಿರುತ್ತದೆ.

ದೂರು ನೀಡಲು ಅಗತ್ಯವಾಗಿ ಬೇಕು ಐಎಂಇಐ ನಂಬರ್

ಫೋನ್ ಕಳ್ಳತನದ ಬಳಿಕ ಅದರಲ್ಲಿನ ಸಿಮ್ ತೆಗೆದು ಬೇರೆ ಸಿಮ್ ಬಳಕೆ ಮಾಡಿದಲ್ಲಿ ತಕ್ಷಣವೇ ಪೊಲೀಸರಿಗೆ ಪತ್ತೆ ಹಚ್ಚಲು ಐಎಂಇಐ ನಂಬರ್ ನೆರವಾಗುತ್ತದೆ. ಕಳವಾದ ಫೋನ್​ನಲ್ಲಿ​, ಬೇರೆ ಸಿಮ್​ ಬಳಸಿದಾಗ ಸಮೀಪದ ಟವರ್ ನೆಟ್​ವರ್ಕ್ ಮೂಲಕ ಪೊಲೀಸರು ಫೋನ್ ಇರುವ ಸ್ಥಳವನ್ನು ಪತ್ತೆಮಾಡುತ್ತಾರೆ. ಅದಕ್ಕಾಗಿ ಪೊಲೀಸರಿಗೆ ದೂರು ನೀಡುವಾಗ ಮತ್ತು ಸಿಇಐರ್ ಮೂಲಕ ದೂರು ನೀಡುವ ಸಂದರ್ಭದಲ್ಲಿ ಐಎಂಇಐ ನಂಬರ್ ಅಗತ್ಯವಾಗಿ ಇರಬೇಕಾಗುತ್ತದೆ.

IMEI ನಂಬರ್ ತಿದ್ದಲು ಸಾಧ್ಯವೇ?

ಸ್ಮಾರ್ಟ್​ಫೋನ್ ಕಳ್ಳತನವಾದ ತಕ್ಷಣ ಖದೀಮರು ಅದರಲ್ಲಿನ ಐಎಂಇಐ ನಂಬರ್ ಅನ್ನು ತಿದ್ದಲು ಫ್ಲ್ಯಾಶ್ ತಂತ್ರಜ್ಞಾನ ಬಳಸುವ ಸಾಧ್ಯತೆಯಿರುತ್ತದೆ. ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳ ಐಎಂಇಐ ನಂಬರ್ ಅನ್ನು ತಿರುಚಿದ್ದಲ್ಲಿ ಅವುಗಳನ್ನು ಪತ್ತೆ ಹಚ್ಚುವುದು ಅಸಾಧ್ಯವಾಗುತ್ತದೆ. ಅದಕ್ಕಾಗಿಯೇ ಸ್ಮಾರ್ಟ್​ಫೋನ್ ಕಳವಾದ ಮತ್ತು ಮಿಸ್ ಆದ ಕೂಡಲೇ ಪೊಲೀಸರಿಗೆ ದೂರು ನೀಡುವುದರ ಜೊತೆಗೆ ಸಿಇಐರ್ ವೆಬ್​ಸೈಟ್​ನಲ್ಲಿ ದೂರು ದಾಖಲಿಸುವುದು ಅಗತ್ಯವಾಗಿದೆ. ಸಿಇಐರ್ ಮೂಲಕ ದೂರು ದಾಖಲಿಸಿ ನಿಮ್ಮ ಸ್ಮಾರ್ಟ್​ಫೋನ್ ಅನ್ನು ಬ್ಲಾಕ್ ಮಾಡಿಸಬಹುದು. ಇದರಿಂದ ಫೋನ್ ಅನ್ಯರ ಕೈಸೇರಿದರೂ ಅವರಿಗೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ನಿಮ್ಮ ಫೋನ್ ವಾಪಸ್ ಪಡೆದ ಬಳಿಕ ಐಎಂಇಐ ಅನ್​ಬ್ಲಾಕ್ ಮಾಡಲು ಆಯ್ಕೆಗಳಿವೆ. ಸಿಇಐರ್ ಮೂಲಕ ದೂರು ನೀಡಿದ ಬಳಿಕ ದೂರಿನ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಅಲ್ಲದೆ, ಪೊಲೀಸ್ ತನಿಖೆಯಲ್ಲಿ ಯಾವ ರೀತಿ ಪ್ರಗತಿಯಾಗಿದೆ ಎನ್ನುವ ಮಾಹಿತಿ ಕೂಡಾ ದೊರೆಯುತ್ತದೆ.

ಈ ರೀತಿಯಾಗಿ, ಯಾರದ್ದಾದರೂ ಸ್ಮಾರ್ಟ್​ಫೋನ್ ಕಳ್ಳತನವಾದರೆ ಇಲ್ಲವೇ ಮಿಸ್ ಆಗಿದ್ದರೆ, ತಕ್ಷಣವೇ ಮೇಲೆ ಸೂಚಿಸಿರುವ ಕ್ರಮಗಳನ್ನು ಅನುಸರಿಸಿ, ನಿಮ್ಮ ಸ್ಮಾರ್ಟ್​ಫೋನ್ ಅನ್ನು ಮರಳಿ ಪಡೆಯಬಹುದು. ಜತೆಗೆ ನಿಮ್ಮ ದೂರಿನ ಸ್ಥಿತಿಗತಿಯನ್ನು ಟ್ರ್ಯಾಕ್ ಮಾಡಬಹುದು. ಇದರಿಂದ ನಿಮ್ಮ ಮೊಬೈಲ್ ಬೇರೆಯವರ ಪಾಲಾಗುವುದನ್ನು ತಡೆಯಬಹುದು.

Published On - 5:38 pm, Thu, 23 February 23

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ