UPI LITE: ಪೇಟಿಎಂ ಆ್ಯಪ್ ಬಳಸುವವರಿಗೆ ಬಂಪರ್ ಸುದ್ದಿ: ಬಿಡುಗಡೆ ಆಗಿದೆ ಹೊಸ ಆ್ಯಪ್
Paytm: ನೀವು ಪೇಟಿಎಂ ಆ್ಯಪ್ ಬಳಸುತ್ತಿದ್ದರೆ ಇನ್ಮುಂದೆ ನೀವು ಯುಪಿಐ ಲೈಟ್ (UPI LITE) ಸೇವೆಗಳನ್ನು ಸಹ ಬಳಸಲು ಸಾಧ್ಯವಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಪೇಟಿಎಂ ಸಹಯೋಗದಲ್ಲಿ ಪೇಟಿಎಂ ಅಪ್ಲಿಕೇಶನ್‌ನಲ್ಲಿ ನೂತನವಾಗಿ ಯುಪಿಐ ಲೈಟ್ ಸೇವೆಗಳನ್ನು ಆರಂಭಿಸಲಾಗಿದೆ.
ಇಂದಿನ ಸ್ಮಾರ್ಟ್ ಯುಗದಲ್ಲಿ ಹೆಚ್ಚಿನ ಜನರು ಸ್ಮಾರ್ಟ್ಫೋನ್ (Smartphon) ಮೂಲಕವೇ ಅರ್ಧ ಕೆಲಸ ಮುಗಿಸಿಬಿಡುತ್ತಾರೆ. ಅದರಲ್ಲೂ ಆನ್ಲೈನ್ ಪೇಮೆಂಟ್ ವಿಚಾರಕ್ಕೆ ಬರುವುದಾದರೆ ಕ್ಯಾಶ್ ಕೊಟ್ಟು ಏನಾದರು ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಬಹುತೇಕರು ಸ್ಮಾರ್ಟ್ಫೋನ್ನಲ್ಲಿ ಫೋನ್ ಪೇ (PhonePe), ಗೂಗಲ್ ಪೇ, ಪೇಟಿಎಂ ನಂತರ ಯುಪಿಐ ಆ್ಯಪ್ ಇನ್ಸ್ಟಾಲ್ ಮಾಡಿ ಅದರ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಾರೆ. ಇದರಲ್ಲಿ ನೀವು ಪೇಟಿಎಂ ಆ್ಯಪ್ ಬಳಸುತ್ತಿದ್ದರೆ ಇನ್ಮುಂದೆ ನೀವು ಯುಪಿಐ ಲೈಟ್ (UPI LITE) ಸೇವೆಗಳನ್ನು ಸಹ ಬಳಸಲು ಸಾಧ್ಯವಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಪೇಟಿಎಂ ಸಹಯೋಗದಲ್ಲಿ ಪೇಟಿಎಂ ಅಪ್ಲಿಕೇಶನ್‌ನಲ್ಲಿ ನೂತನವಾಗಿ ಯುಪಿಐ ಲೈಟ್ ಸೇವೆಗಳನ್ನು ಆರಂಭಿಸಲಾಗಿದೆ.
ಇದರ ಮೂಲಕ ಪೇಟಿಎಂ ಗ್ರಾಹಕರು ಸಣ್ಣ ಪಾವತಿಗಳು, ಇಂಟರ್‌ನೆಟ್ ಇಲ್ಲದೆ ಹಣ ಪಾವತಿ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆಯಬಹುದು. ಇದರೊಂದಿಗೆ ಈಗ ಪೇಟಿಎಮ್ ಯುಪಿಐ ಲೈಟ್ ಬಳಕೆದಾರರಿಗೆ ಪಿನ್ ನಮೂದಿಸಿ ಎಂದು ಕೇಳದೆ ಹಣ ಪಾವತಿಗೆ ಅನುಕೂಲ ಮಾಡಿಕೊಡುತ್ತಿದೆ. ಯುಪಿಐ ಲೈಟ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ವಿನ್ಯಾಸಗೊಳಿಸಿದ್ದು, ಸೆಪ್ಟೆಂಬರ್ 2022 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಲಾಂಚ್ ಮಾಡಲಾಗಿತ್ತು. ಅದರಂತೆ ಬ್ಯಾಂಕ್ ವಹಿವಾಟುಗಳ ಸಂಖ್ಯೆಯ ಬಗ್ಗೆ ಚಿಂತಿಸದೆ ಸಣ್ಣ ಮೌಲ್ಯದ ವಹಿವಾಟುಗಳನ್ನು ಇದು ಅನುಮತಿಸಲಿದ್ದು, ಈ ಫೀಚರ್ಸ್ ದೇಶಾದ್ಯಂತ ಡಿಜಿಟಲ್ ಪಾವತಿಗಳ ಇನ್ನಷ್ಟು ಬಳಕೆಗೆ ಅನುವು ಮಾಡಿಕೊಡಲಿದೆ.
IPL 2023: 4K ರೆಸಲ್ಯೂಶನ್ನಲ್ಲಿ ಐಪಿಎಲ್ 2023 ವೀಕ್ಷಿಸಿ: ಜಿಯೋ ಬಳಕೆದಾರರಿಗೆ ಬಂಪರ್ ಸುದ್ದಿ
ಪಿನ್ ನಮೂದಿಸಬೇಕಾದ ಅವಶ್ಯಕತೆಯಿಲ್ಲ:
ವಿಶೇಷ ಎಂದರೆ ಇದರಲ್ಲಿ ನೀವು ಹಣ ಪಾವತಿ ಮಾಡುವಾಗ ಯುಪಿಐ ಪಿನ್ ನಮೂದಿಸಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ, ಇದು ನಿಮ್ಮ ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುವುದಿಲ್ಲ. ಬದಲಾಗಿ ನಿಮ್ಮ ಹಣವನ್ನು ವಾಲೆಟ್‌ನಲ್ಲಿ ಇಟ್ಟುಕೊಂಡು, ಹಣವನ್ನು ಕಳುಹಿಸುತ್ತದೆ ಅಥವಾ ಸ್ವೀಕರಿಸುತ್ತದೆ. ಆಂದರೆ, ಇದಕ್ಕಾಗಿ ನೀವು ಮೊದಲೇ ಹಣವನ್ನು ಸೇರಿಸಬೇಕು. ಈ ಫೀಚರ್ಸ್ ಮೂಲಕ ಬಳಕೆದಾರರು ಒಂದು ದಿನದಲ್ಲಿ 200 ರೂ. ಗಳನ್ನು ಪಾವತಿ ಮಾಡಬಹುದಾಗಿದೆ. ಪಾವತಿ ಪ್ರಕ್ರಿಯೆಯು ತ್ವರಿತ ಮತ್ತು ತಡೆರಹಿತ ವಹಿವಾಟಾಗಿದ್ದು, ಇದರೊಂದಿಗೆ ಬಳಕೆದಾರರು ತಮ್ಮ ಈ ಲೈಟ್ ವ್ಯಾಲೆಟ್‌ಗೆ ದಿನಕ್ಕೆ ಎರಡು ಬಾರಿ 2,000 ರೂ. ಗಳನ್ನು ಆಡ್ ಮಾಡಬಹುದಾಗಿದ್ದು, ಈ ಮೂಲಕ ದಿನವೂ 4,000 ರೂ. ಗಳ ವರೆಗೆ ಉಪಯೋಗಿಸಬಹುದು.
ಇದು ಥೇಟ್ ಯುಪಿಐ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಆದರೆ, ಇದಕ್ಕಿಂತಲೂ ಸರಳವಾಗಿ ಸೇವೆಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿರುವ ಹೊಸ ಪೇಮೆಂಟ್ ತಂತ್ರಜ್ಞಾನ ಇದಾಗಿದೆ. ಮುಖ್ಯವಾಗಿ ಇಂಟರ್‌ನೆಟ್ ಇಲ್ಲದಿದ್ದರೂ ಕೂಡ ವೇಗವಾಗಿ ಮತ್ತು ಸರಳವಾಗಿ ಹಣ ಪಾವತಿ ಮಾಡಬಹುದು ಎಂಬುದು ಪ್ಲಸ್ ಪಾಯಿಂಟ್. ಆನ್-ಡಿವೈಸ್ ವ್ಯಾಲೆಟ್ ಆಗಿರುವ ಯುಪಿಐ ಲೈಟ್ನಲ್ಲಿ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ವಾಲೆಟ್‌ಗೆ ಹಣವನ್ನು ಸೇರಿಸಬೇಕಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 am, Fri, 24 February 23