IPL 2023: 4K ರೆಸಲ್ಯೂಶನ್​ನಲ್ಲಿ ಐಪಿಎಲ್ 2023 ವೀಕ್ಷಿಸಿ: ಜಿಯೋ ಬಳಕೆದಾರರಿಗೆ ಬಂಪರ್ ಸುದ್ದಿ

Reliance JIO: ಜಿಯೋ ಸಿನಿಮಾದಲ್ಲಿ ಐಪಿಎಲ್ 2023 ಲೈವ್ ಕಾಣಲಿದೆ. ಜಿಯೋ ಬಳಕೆದಾರರು ಉಚಿತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಐಪಿಎಲ್​ನ ಎಲ್ಲ ಪಂದ್ಯಗಳು 4K ರೆಸಲ್ಯೂಶನ್ (UltraHD) ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆಯಂತೆ.

Vinay Bhat
|

Updated on:Feb 23, 2023 | 12:00 PM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಇನ್ನೇನು ಒಂದು ತಿಂಗಳಷ್ಟೆ ಬಾಕಿಯಿದೆ. ಮಾರ್ಚ್ 31 ರಂದು ಈ ಬಹುನಿರೀಕ್ಷಿತ ಟೂರ್ನಿಗೆ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗಲಿದೆ.

1 / 7
ವಿಶೇಷ ಎಂದರೆ ಐಪಿಎಲ್ 2023 ರಿಲಯನ್ಸ್ ಜಿಯೋದ ಜಿಯೋ ಸಿನಿಮಾ ಆ್ಯಪ್​ನಲ್ಲಿ ಕೂಡ ನೇರಪ್ರಸಾರ ಕಾಣಲಿದೆ. ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ನಡುವಿನ ಜಂಟಿ ಉದ್ಯಮವಾಗಿರುವ ವಯೋಕಾಮ್‌18 ಮೀಡಿಯಾ ಪ್ರೈ. ಕಳೆದ ವರ್ಷದ ಹರಾಜಿನಲ್ಲಿ ಭಾರತದ ಉಪಖಂಡದಲ್ಲಿನ ಡಿಜಿಟಲ್‌ ಐಪಿಎಲ್‌ ಪ್ರಸಾರದ ಹಕ್ಕುಗಳನ್ನು 20,500 ಕೋಟಿ ರೂ.ಗೆ ಪಡೆದುಕೊಂಡಿತ್ತು.

2 / 7
ಹೀಗಾಗಿ ಜಿಯೋ ಸಿನಿಮಾದಲ್ಲಿ ಐಪಿಎಲ್ ಲೈವ್ ಕಾಣಲಿದೆ. ಜಿಯೋ ಬಳಕೆದಾರರು ಉಚಿತವಾಗಿ ವೀಕ್ಷಿಸಬಹುದು. ಇದರ ಜೊತೆಗೆ ಐಪಿಎಲ್​ನ ಎಲ್ಲ ಪಂದ್ಯಗಳು 4K ರೆಸಲ್ಯೂಶನ್ (UltraHD) ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆಯಂತೆ. ಇದುವರೆಗೆ ಐಪಿಎಲ್ ಅನ್ನು ದೇಶದಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಮಾತ್ರ ಸ್ಟ್ರೀಮ್ ಮಾಡಲಾಗುತ್ತಿತ್ತು. ಇದಕ್ಕಾಅಗಿ ಚಂದಾದಾರಿಕೆಯನ್ನು ಹೊಂದಿರುವುದು ಅಗತ್ಯವಿತ್ತು. ಆದರೀಗ ಜಿಯೋ ಎಲ್ಲವನ್ನು ಉಚಿತವಾಗಿ ನೀಡುತ್ತಿದೆ.

3 / 7
ಇದರ ಜೊತೆಗೆ ಜಿಯೋ ಸಿನಿಮಾ ಬಳಕೆದಾರರು ಪಂದ್ಯವನ್ನು 12 ಭಾಷೆಗಳಲ್ಲಿ ವೀಕ್ಷಿಸಬಹುದಂತೆ. ಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮರಾಠಿ, ಗುಜರಾತಿ, ಬೆಂಗಾಲಿ ಮತ್ತು ಭೋಜ್‌ಪುರಿ ಸೇರಿದಂತೆ ಬಹು ಭಾಷೆಗಳಲ್ಲಿ ಪಂದ್ಯವನ್ನು ನೋಡಬಹುದು. ಕಾಮೆಂಟ್ರಿ ಮಾತ್ರವಲ್ಲದೆ ಆಯ್ದ ಭಾಷೆಯಲ್ಲಿನ ಗ್ರಾಫಿಕ್ಸ್ ಮತ್ತು ಅಂಕಿಗಳನ್ನು ಸಹ ಬದಲಾಗುತ್ತಾ ಇರತ್ತದಂತೆ.

4 / 7
ಐಪಿಎಲ್ 2023ಕ್ಕೆ ಮಾರ್ಚ್ 31 ರಂದು ಚಾಲನೆ ಸಿಗಲಿದ್ದು ಮೇ 28 ಕ್ಕೆ ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಲಿದೆ. ಆರ್​ಸಿಬಿ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ.

5 / 7
10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಕೋಲ್ಕತ್ತಾ, ಡೆಲ್ಲಿ ಮತ್ತು ಲಕ್ನೋ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಚೆನ್ನೈ, ಪಂಜಾಬ್ ಕಿಂಗ್ಸ್, ಹೈದರಾಬಾದ್, ಆರ್​ಸಿಬಿ ಮತ್ತು ಗುಜರಾತ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ.

6 / 7
ಐಪಿಎಲ್-2023ರ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಮೂರು ಪ್ಲೇಆಫ್ ಪಂದ್ಯಗಳು ನಡೆಯಲಿದ್ದು, ನಂತರ ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಸುತ್ತಿನಲ್ಲಿ ಒಟ್ಟು 18 ಡಬಲ್ ಹೆಡರ್‌ ಪಂದ್ಯಗಳು ಇರುತ್ತವೆ.

7 / 7

Published On - 12:00 pm, Thu, 23 February 23

Follow us