Updated on:Feb 23, 2023 | 12:53 PM
ಮುಂದಿನ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳು ತಯಾರಿಯಲ್ಲಿ ತೊಡಗಿಕೊಂಡಿವೆ. ಇದರಡಿಯಲ್ಲಿ ಕೆಲವು ತಂಡಗಳಲ್ಲಿ ಖಾಲಿ ಆಗಿದ್ದ ನಾಯಕರ ಸ್ಥಾನವನ್ನು ಭರ್ತಿ ಮಾಡಲಾಗುತ್ತಿದ್ದು, ಇದರಡಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ ತನ್ನ ತಂಡಕ್ಕೆ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ನಾಯಕನಾಗಿ ನೇಮಿಸಿದೆ ಎಂದು ವರದಿಯಾಗಿದೆ.
ಅಲ್ಲದೆ ಇವರೊಂದಿಗೆ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ.
ಕಾರು ಅಪಘಾತಕ್ಕೊಳಗಾಗಿ ಕ್ರಿಕೆಟ್ನಿಂದ ದೂರ ಉಳಿದಿರುವ ರಿಷಬ್ ಪಂತ್ ಸುಮಾರು ತಿಂಗಳು ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿ ಡೆಲ್ಲಿ ತಂಡದ ಖಾಯಂ ನಾಯಕ ಪಂತ್ ಅಲಭ್ಯತೆಯನ್ನು ಸರಿದೂಗಿಸಲು ಡೆಲ್ಲಿ ತಂಡ ಅನುಭವಿ ವಾರ್ನರ್ಗೆ ಮಣೆ ಹಾಕಿದೆ.
ಈಗ ತಂಡದ ನಾಯಕನಾಗಿ ಆಯ್ಕೆಯಾಗಿರುವ ವಾರ್ನರ್ಗೆ ಈಗಾಗಲೇ ಐಪಿಎಲ್ನಲ್ಲಿ ನಾಯಕತ್ವವಹಿಸಿರುವ ಅನುಭವವಿದ್ದು, ಅವರ ನಾಯಕತ್ವದಲ್ಲಿಯೇ 2016 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.
ಏಪ್ರಿಲ್ 1 ರಂದು ಲಕ್ನೋದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುವ ಮೂಲಕ ದೆಹಲಿ ತನ್ನ ಐಪಿಎಲ್ 2023 ರ ಅಭಿಯಾನವನ್ನು ಪ್ರಾರಂಭಿಸಲಿದೆ.
Published On - 12:38 pm, Thu, 23 February 23