Noisefit Crew: ₹1,499ಕ್ಕೆ ದೊರೆಯುತ್ತಿದೆ ಆಕರ್ಷಕ ವಿನ್ಯಾಸದ ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್
ಯುವಜನತೆಗೆ ಇಂದು ಸ್ಮಾರ್ಟ್ಫೋನ್ನಷ್ಟೇ ಅಗತ್ಯ ಇರುವ ಮತ್ತೊಂದು ಗ್ಯಾಜೆಟ್ ಎಂದರೆ ಅದು ಸ್ಮಾರ್ಟ್ವಾಚ್. ಯುವಜನತೆ ಮಾತ್ರವಲ್ಲದೆ, ಶಾಲಾ ಕಾಲೇಜು ಮಕ್ಕಳು, ಹಿರಿಯರು ಕೂಡ ಸ್ಮಾರ್ಟ್ವಾಚ್ನ ಕಾರ್ಯವೈಖರಿಗೆ ಬೆರಗಾಗಿದ್ದಾರೆ. ಹೀಗಾಗಿ, ಭಾರತದಲ್ಲಿ ವಿವಿಧ ಕಂಪನಿಗಳ, ಆಕರ್ಷಕ ಮಾದರಿಯ ಸ್ಮಾರ್ಟ್ವಾಚ್ ಬಿಡುಗಡೆಯಾಗುತ್ತಿದೆ. ನಾಯ್ಸ್ ಕಂಪನಿ, ನಾಯ್ಸ್ಫಿಟ್ ಕ್ರೂ ಎಂಬ ನೂತನ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ಹೊಸ ಸ್ಮಾರ್ಟ್ವಾಚ್ ₹1,499ಕ್ಕೆ ಲಭ್ಯವಾಗುತ್ತಿದೆ.
ಯುವಜನತೆ ಇಂದು ಹೆಚ್ಚಾಗಿ ಇಷ್ಟಪಡುವುದು ಸ್ಮಾರ್ಟ್ಗ್ಯಾಜೆಟ್ಗಳನ್ನು. ಅದರಲ್ಲೂ, ಸ್ಮಾರ್ಟ್ಫೋನ್ ಬಿಟ್ಟರೆ, ನಂತರದ ಸ್ಥಾನ ಇರುವುದು ಸ್ಮಾರ್ಟ್ವಾಚ್ಗಳಿಗೆ. ಬಗೆಬಗೆಯ ವಿನ್ಯಾಸ, ವಿವಿಧ ಆಕರ್ಷಕ ವಾಚ್ ಫೇಸ್, ಫೀಚರ್ಸ್ ಮತ್ತು ಆ್ಯಕ್ಟಿವಿಟಿ ಟ್ರ್ಯಾಕಿಂಗ್ನ ವಿಶೇಷತೆಗಳನ್ನು ಗಮನಿಸಿ, ಬಜೆಟ್ ಅನುಸಾರ ಖರೀದಿಸುತ್ತಾರೆ. ಈ ಬಾರಿ ನಾಯ್ಸ್, ಭಾರತದ ಗ್ಯಾಜೆಟ್ ಮಾರುಕಟ್ಟೆಗೆ, ಬಜೆಟ್ ದರದ ನೂತನ ಸ್ಮಾರ್ಟ್ವಾಚ್ ಪರಿಚಯಿಸಿದೆ. ₹1,499ಕ್ಕೆ ನಾಯ್ಸ್ಫಿಟ್ (Noisefit) ಕಂಪನಿ ಕ್ರೂ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ.
ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್ನಲ್ಲಿ ಬ್ಲೂಟೂತ್ ಕಾಲಿಂಗ್
ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್(Noisefit Crew Smartwatch) ನಲ್ಲಿ 1.38 ಇಂಚಿನ ಡಿಸ್ಪ್ಲೇ ಇದ್ದು, ಬ್ಲೂಟೂತ್ ಕಾಲಿಂಗ್ ಫೀಚರ್ ಇದರ ವಿಶೇಷತೆಯಾಗಿದೆ. ಬಜೆಟ್ ದರಕ್ಕೆ ಆಕರ್ಷಕ ಫೀಚರ್ಗಳನ್ನು ನೀಡುವ ಮೂಲಕ ನಾಯ್ಸ್ಫಿಟ್, ಯುವಜನತೆಯ ಮನಗೆಲ್ಲಲು ಹೊರಟಿದೆ. ಅದರಲ್ಲೂ, ಈ ಬಾರಿ ಸಾಂಪ್ರದಾಯಿಕ ವೃತ್ತಾಕಾರದ ವಿಶೇಷ ಡಯಲ್ ಹೊಂದಿರುವ ವಿನ್ಯಾಸದಲ್ಲಿ ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್ ಬಿಡುಗಡೆಯಾಗಿದೆ. ಹೀಗಾಗಿ, ರೌಂಡ್ ಶೇಪ್ ಇರುವ ಡಯಲ್ನ ಸ್ಮಾರ್ಟ್ವಾಚ್ ಬೇಕು ಎನ್ನುವವರಿಗೆ ನಾಯ್ಸ್ ಹೊಸ ಆಯ್ಕೆ ಪರಿಚಯಿಸಿದೆ.
ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್ ಬೆಲೆ ಮತ್ತು ಲಭ್ಯತೆ
ಹೊಸ ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್ ಭಾರತದಲ್ಲಿ ₹1,499 ದರ ಹೊಂದಿದೆ. ಫ್ಲಿಪ್ಕಾರ್ಟ್ ಮತ್ತು ಕಂಪನಿಯ ಅಧಿಕೃತ ಗೊನಾಯ್ಸ್.ಕಾಂ ವೆಬ್ಸೈಟ್ ಮೂಲಕ ಲಭ್ಯವಾಗುತ್ತಿದೆ. ಕಪ್ಪು, ನೀಲಿ, ಬೂದು, ಹಸಿರು ಮತ್ತು ಗುಲಾಬಿ ಬಣ್ಣಗಳಲ್ಲಿ ಹೊಸ ಸ್ಮಾರ್ಟ್ವಾಚ್ ದೊರೆಯಲಿದೆ ಎಂದು ಕಂಪನಿ ಹೇಳಿದೆ. ಜತೆಗೆ, ಆ್ಯಪಲ್ ಐಫೋನ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಜತೆ ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್ ಬಳಸಬಹುದು ಎಂದು ಕಂಪನಿ ಹೇಳಿದೆ.
ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್ ವಿಶೇಷತೆ
ಫಿಟ್ನೆಸ್ ಮತ್ತು ಆ್ಯಕ್ಟಿವಿಟಿ ಟ್ರ್ಯಾಕಿಂಗ್ ಜತೆಗೆ ಹೃದಯ ಬಡಿತ ಮಾಪನ ವೈಶಿಷ್ಟ್ಯವನ್ನು ನಾಯ್ಸ್ಫಿಟ್ ಕ್ರೂ ಸ್ಮಾರ್ಟ್ವಾಚ್ ಹೊಂದಿದೆ. ಅಲ್ಲದೆ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಏಳು ದಿನ ಬ್ಯಾಟರಿ ಬಾಳಿಕೆ ಬರಲಿದೆ ಎಂದು ನಾಯ್ಸ್ ತಿಳಿಸಿದೆ. 100ಕ್ಕೂ ಅಧಿಕ ಆಕರ್ಷಕ ವಾಚ್ ಫೇಸ್, 100ಕ್ಕೂ ಅಧಿಕ ಸ್ಫೋರ್ಟ್ಸ್, ಫಿಟ್ನೆಸ್ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ನಾಯ್ಸ್ ಕಂಪನಿ ಹೊಸ ಕ್ರೂ ಸ್ಮಾರ್ಟ್ವಾಚ್ನಲ್ಲಿ ಪರಿಚಯಿಸಿದೆ.