Smule App: ಸ್ಮ್ಯೂಲ್ ಕರೋಕೆ ಆ್ಯಪ್​ಗೆ ಹವ್ಯಾಸಿ ಹಾಡುಗಾರರು ಫಿದಾ: ಇದನ್ನು ಹೇಗೆ ಬಳಸುವುದು?

Best Karaoke App: ಸ್ಮ್ಯೂಲ್ ಆ್ಯಪ್ 2012 ರಲ್ಲಿ ಐಒಎಸ್ ಬಳಕೆದಾರರಿಗೆ ಮೊದಲು ನೀಡಲಾಯಿತು. ನಂತರ 2013 ರಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿತು. ಆರಂಭದಲ್ಲಿ ಹೆಚ್ಚೇನು ಸದ್ದು ಮಾಡದ ಈ ಆ್ಯಪ್ ನಂತರ ವಿಶೇಷ ಫೀಚರ್​ಗಳನ್ನೆಲ್ಲ ಪರಿಚಯಿಸಿ ಪ್ರಸಿದ್ಧಿ ಪಡೆಯಿತು.

Smule App: ಸ್ಮ್ಯೂಲ್ ಕರೋಕೆ ಆ್ಯಪ್​ಗೆ ಹವ್ಯಾಸಿ ಹಾಡುಗಾರರು ಫಿದಾ: ಇದನ್ನು ಹೇಗೆ ಬಳಸುವುದು?
Smule App
Follow us
|

Updated on:Feb 24, 2023 | 2:32 PM

ಹಾಡು ಎಂದ ಮೇಲೆ ಅಲ್ಲಿ ಮ್ಯೂಸಿಕ್‌ (Music) ವಾದ್ಯಗಳ ತನನ ಇದ್ದೇ ಇರುತ್ತದೆ. ಆದರೆ ಈಗ ಕಾಲ ಹಿಂದಿನಂತಿಲ್ಲ. ಇಂದು ಕೇವಲ ಮ್ಯೂಸಿಕ್‌ ಟ್ರ್ಯಾಕ್‌ ಪ್ಲೇ ಮಾಡಿ ಹಾಡುವ ಸಂಗೀತಗಾರರು ಅಂದರೆ ಕರೋಕೆ ಸಿಂಗರ್ಸ್‌ ಹೆಚ್ಚಾಗಿದ್ದಾರೆ. ಇದಕ್ಕಾಗಿ ಅದೆಷ್ಟೋ ಕರೋಕೆ ಆ್ಯಪ್​ಗಳು ಹುಟ್ಟಿಕೊಂಡಿವೆ. ಕೆಲವರಿಗೆ ಉತ್ತಮ ಕಂಠ ಇದ್ದರೂ ಹಾಡಲು ಹಿಂಜರಿಯುತ್ತಾರೆ. ಅಥವಾ ಸರಿಯಯಾದ ಪ್ರೋತ್ಸಾಹ ಸಿಗದೆ ಮೂಲೆಗುಂಪಾಗಿರುತ್ತಾರೆ. ಇಂಥವರಿಗೆ ಈ ಕರೋಕೆ ಆ್ಯಪ್​ಗಳು (Karaoke) ಬಹಳಷ್ಟು ಸಹಕಾರಿ ಆಗಿದೆ. ಇದರಲ್ಲಿ ಸದ್ಯ ಟ್ರೆಂಡಿಂಗ್​ನಲ್ಲಿರುವುದು ಸ್ಮ್ಯೂಲ್ (Smule App). ಇದು ಹವ್ಯಾಸಿ ಹಾಡುಗಾರರಿಗೆ ನಿರ್ಮಾಣವಾದ ಆ್ಯಪ್. ಯಾವುದೇ ಸಂಗೀತ ಉಪಕರಣಗಳ ಅಗತ್ಯ ಇಲ್ಲದೆ ಹಾಡುವ ಈ ಆ್ಯಪ್​ನಲ್ಲಿ ಅನೇಕ ವೈಶಿಷ್ಟ್ಯಗಳು ಕೂಡ ಇದೆ.

ಸ್ಮ್ಯೂಲ್ ಆ್ಯಪ್ 2012 ರಲ್ಲಿ ಐಒಎಸ್ ಬಳಕೆದಾರರಿಗೆ ಮೊದಲು ನೀಡಲಾಯಿತು. ನಂತರ 2013 ರಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿತು. ಆರಂಭದಲ್ಲಿ ಹೆಚ್ಚೇನು ಸದ್ದು ಮಾಡದ ಈ ಆ್ಯಪ್ ನಂತರ ವಿಶೇಷ ಫೀಚರ್​ಗಳನ್ನೆಲ್ಲ ಪರಿಚಯಿಸಿ ಪ್ರಸಿದ್ಧಿ ಪಡೆಯಿತು. ಇಂದು ಇದನ್ನು 100 ಮಿಲಿಯನ್​ಗೂ ಅಧಿಕ ಜನರು ಉಪಯೋಗಿಸುತ್ತಿದ್ದಾರೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್​ ಸೇರಿದಂತೆ ಬಹುತೇಕೆ ಎಲ್ಲ ಭಾಷೆಯ 10 ಮಿಲಿಯನ್​ಗೂ ಅಧಿಕ ಹಾಡುಗಳ ಕರೋಕೆ ಇದರಲ್ಲಿದೆ.

POCO C55: ಕೇವಲ 9,499 ರೂ. ಗೆ ಹೊಸ ಸ್ಮಾರ್ಟ್​ಫೋನ್ ರಿಲೀಸ್ ಮಾಡಿದ ಪೋಕೋ: ಖರೀದಿಗೆ ಕ್ಯೂ ಗ್ಯಾರಂಟಿ

ಇದನ್ನೂ ಓದಿ
Image
UPI LITE: ಪೇಟಿಎಂ ಆ್ಯಪ್ ಬಳಸುವವರಿಗೆ ಬಂಪರ್ ಸುದ್ದಿ: ಬಿಡುಗಡೆ ಆಗಿದೆ ಹೊಸ ಆ್ಯಪ್
Image
Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡಬೇಡಿ
Image
WhatsApp Edit Message: ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು: ಹೇಗೆ ಗೊತ್ತೇ?
Image
Mobile Lost: ಮೊಬೈಲ್ ಕಳೆದುಹೋದರೆ ಸುಲಭದಲ್ಲಿ ನೀವೇ ಹುಡುಕುವುದು ಹೇಗೆ?

ಸ್ಮ್ಯೂಲ್ ಆ್ಯಪ್ ಮೂಲಕ ನೀವು ಒಬ್ಬರೇ ಹಾಡಬಹುದು, ಬೇಕಿದ್ದಲ್ಲಿ ಸ್ನೇಹಿತರ ಜೊತೆ ಅಥವಾ ಹಾಡುಗರರ ಜೊತೆಗೂ ಧ್ವನಿಗೂಡಿಸಬಹುದು. ಕೇವಲ ಕರೋಕೆ ಮಾತ್ರವಲ್ಲದೆ ನಿಮಗೆ ಹಾಡಲು ಸುಲಭವಾಗಲು ಲಿರಿಕ್ಸ್ ಕಾಣಿಸುವ ಆಯ್ಕೆ ಕೂಡ ಇದರಲ್ಲಿದೆ. ಇದು ಬೇಸಿಕ್ ಆಯ್ಕೆಗಳೊಂದಿಗೆ ಉಚಿತವಾಗಿ ಲಭ್ಯವಿದೆ. ಅದೇ ವರ್ಷಕ್ಕೆ 3,359 ರೂ. ನೀಡಿ ವಿಐಪಿ ಚಂದಾದಾರಿಕೆ ಪಡೆದುಕೊಂಡರೆ ಅನೇಕ ಆಯ್ಕೆಗಳೊಂದಿಗೆ ಉಪಯೋಗಿಸಬಹುದು. ವಿಐಪಿ ಚಂದಾದಾರಿಕೆಯಲ್ಲಿ ನಿಮಗೆ ಅನಿಯಮಿತ ಹಾಡು ಸಿಗುತ್ತದೆ. ಈ ಹಾಡು 30 ಸೆಕೆಂಡ್ ಅಥವಾ 1ನಿಮಿಷದ ವರೆಗೆ ಅಲ್ಲದೆ ಸಂಪೂರ್ಣ ಹಾಡು ಸಿಗಲಿದೆ. ಯಾವುದೇ ಜಾಹಿರಾತುಗಳ ಕಿರಿಕಿರಿ ಇರುವುದಿಲ್ಲ. ಉತ್ತಮ ಕ್ವಾಲಿಟಿಯ ಆಡಿಯೋ ಅನುಭವ ಪಡೆಯಬಹುದು. ನಿಮ್ಮ ಪ್ರೊಫೈಲ್ ಅನ್ನು ಇನ್ನಷ್ಟು ಚಂದಗಾಣಿಸಲು ಅನೇಕ ಆಯ್ಕೆಗಳಿವೆ.

ಸ್ಮ್ಯೂಲ್ ಆ್ಯಪ್ ಉಪಯೋಗಿಸುವುದು ಹೇಗೆ?:

  • ಆಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್​ನಿಂದ ಆ್ಯಪಲ್ ಬಳಕೆದಾರರು ಆ್ಯಪ್ ಸ್ಟೋರ್​ನಿಂದ ಸ್ಮ್ಯೂಲ್ ಆ್ಯಪ್ ಡೌನ್​ಲೋಡ್ ಮಾಡಿ
  • ಸ್ಮ್ಯೂಲ್ ಆ್ಯಪ್ ಓಪನ್ ಮಾಡಿ ಫೇಸ್​ಬುಕ್, ಗೂಗಲ್ ಅಥವಾ ಮೊಬೈಲ್ ನಂಬರ್ ನಮೋದಿಸುವ ಮೂಲಕ ಅಕೌಂಟ್ ತೆರೆಯಿರಿ
  • ಲಾಗಿನ್ ಆದ ಕೂಡಲೇ ನಿಮಗೆ ಯಾವ ಶೈಲಿಯ ಹಾಡು ಇಷ್ಟ ಎಂಬ ಆಯ್ಕೆ ಕೇಳಲಾಗುತ್ತದೆ, ನಿಮ್ಮಿಷ್ಟದ ಹಾಡನ್ನು ಸೆಲೆಕ್ಟ್ ಮಾಡಿ
  • ನಂತರ ಯಾವ ಹಾಡು ಹಾಡಬೇಕು ಎಂಬುದನ್ನು ಸರ್ಚ್ ಬಾರ್​ನಲ್ಲಿ ಬರೆದು ಹುಡುಕಬೇಕು
  • ನೀವು ಆಯ್ಕೆ ಮಾಡಿದ ಹಾಡಿನ ಕರೋಕೆ ಸಿಕ್ಕ ನಂತರ ಬಲ ಬದಿಯಲ್ಲಿ ಸಿಂಗ್ ಎಂಬ ಬಟನ್ ಒತ್ತಿ
  • ಇಲ್ಲಿ ನಿಮಗೆ ಸೋಲೋ, ಡುಯೆಟ್ ಹಾಗೂ ಗ್ರೂಪ್ ಎಂಬ ಮೂರು ಆಯ್ಕೆ ಕಾಣಿಸುತ್ತದೆ
  • ನಿಮ್ಮ ಆಯ್ಕೆಯನ್ನು ಒತ್ತಿದ ತಕ್ಷಣ ಕರೋಕೆ ಆರಂಭವಾಗುತ್ತದೆ, ನೀವು ಹಾಡಲು ಶುರು ಮಾಡಬಹುದು
  • ಹಾಡು ಹಾಡುವುದಕ್ಕೂ ಮುನ್ನ ಈಯರ್ ಫೋನ್ ಹಾಕಿದ್ದರೆ ಒಳ್ಳೆಯ ಕ್ವಾಲಿಟಿಯಲ್ಲಿ ಹಾಡು ರೆಕಾರ್ಡ್ ಆಗುತ್ತದೆ

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Fri, 24 February 23

ತಾಜಾ ಸುದ್ದಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ