ರೋಚಕತೆ ಸೃಷ್ಟಿಸಿದ್ದ ವಿವೋ V29, V29 ಪ್ರೊ ಭಾರತದಲ್ಲಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ

|

Updated on: Oct 10, 2023 | 3:09 PM

Vivo V29 Pro and Vivo V29 Launched: ವಿವೋ V29 ಪ್ರೊ ಮತ್ತು ವಿವೋ V29 ಹೆಚ್ಚಿನ ಫೀಚರ್ಸ್​ ಒಂದೇ ರೀತಿಯಲ್ಲಿದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ, ವಿವೋ V29 ಪ್ರೊ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. 12-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಇದೆ.

ರೋಚಕತೆ ಸೃಷ್ಟಿಸಿದ್ದ ವಿವೋ V29, V29 ಪ್ರೊ ಭಾರತದಲ್ಲಿ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
Vivo V29 Pro and Vivo V29
Follow us on

ಕಳೆದ ಕೆಲವು ದಿನಗಳಿಂದ ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಬಹುನಿರೀಕ್ಷಿತ ವಿವೋ V29 ಮತ್ತು ವಿವೋ V29 ಪ್ರೊ (Vivo V29 Pro) ಸ್ಮಾರ್ಟ್​ಫೋನ್ ಇದೀಗ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ ಪ್ರೊಸೆಸರ್, ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳು, 80W ವೇಗದ ಚಾರ್ಜಿಂಗ್ ಬೆಂಬಲ, ಬಲಿಷ್ಠ ಬ್ಯಾಟರಿ ಹೀಗೆ ಈ ಫೋನ್ ಅದ್ಭುತವಾಗಿದೆ. ಇದು ಭರ್ಜರಿ ಮಾರಾಟ ಆಗುವುದು ಖಚಿತ ಎನ್ನಲಾಗುತ್ತಿದೆ. ಹಾಗಾದರೆ, ವಿವೋ V29 ಮತ್ತು ವಿವೋ V29 ಪ್ರೊ ಫೋನಿನ ಸಂಪೂರ್ಣ ಫೀಚರ್ಸ್, ಬೆಲೆ ಬಗ್ಗೆ ನೋಡೋಣ.

ಭಾರತದಲ್ಲಿ ವಿವೋ V29, ವಿವೋ V29 ಪ್ರೊ ಬೆಲೆ, ಲಭ್ಯತೆ:

ಭಾರತದಲ್ಲಿ ವಿವೋ V29 ಪ್ರೊ ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರಕ್ಕೆ 39,999 ರೂ. ಇದೆ. ಅಂತೆಯೆ 12GB RAM + 256GB ಸ್ಟೋರೇಜ್​ಗೆ 42,999 ರೂ. ಇದನ್ನು ಹಿಮಾಲಯನ್ ಬ್ಲೂ ಮತ್ತು ಸ್ಪೇಸ್ ಬ್ಲ್ಯಾಕ್ ಶೇಡ್‌ಗಳಲ್ಲಿ ನೀಡಲಾಗುತ್ತದೆ.

ವಿವೋ V29 ಬೆಲೆ 8GB RAM + 128GB ಸ್ಟೋರೇಜ್ ಮಾದರಿಗೆ 32,999 ರೂ. ಮತ್ತು 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 36,999 ರೂ. ನಿಗದಿ ಮಾಡಲಾಗಿದೆ. ಇದು ಹಿಮಾಲಯನ್ ಬ್ಲೂ, ಮೆಜೆಸ್ಟಿಕ್ ರೆಡ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇದನ್ನೂ ಓದಿ
ಬಹು ನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023
ಭಾರತಕ್ಕಿಂದು ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8 ಸರಣಿ ಎಂಟ್ರಿ
ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕೆ ಕೆಲವೇ ದಿನ ಬಾಕಿ
50MP ಕ್ಯಾಮೆರಾ, 5000mAh ಬ್ಯಾಟರಿ: ವಿವೋ Y17s ಸ್ಮಾರ್ಟ್‌ಫೋನ್ ಬಿಡುಗಡೆ

ದೇಶೀಯ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್ ಪ್ರೊ 5G ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಕೇವಲ 12,499 ರೂ.

ವಿವೋ V29, ವಿವೋ V29 ಪ್ರೊ ಸ್ಮಾರ್ಟ್​ಫೋನ್ ಫ್ಲಿಪ್​ಕಾರ್ಟ್​, ವಿವೋ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಚಿಲ್ಲರೆ ಪಾಲುದಾರರ ಮೂಲಕ ದೇಶದಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ವಿವೋ V29 ಪ್ರೊ ಅಕ್ಟೋಬರ್ 10 ರಿಂದ ಖರೀದಿಗೆ ಸಿಗಲಿದ್ದರೆ, ವಿವೋ V29 ಅಕ್ಟೋಬರ್ 17 ರಿಂದ ಮಾರಾಟ ಶುರುಮಾಡಲಿದೆ.

ವಿವೋ V29 ಪ್ರೊ ಫೀಚರ್ಸ್:

ವಿವೋ V29 ಪ್ರೊ ಮತ್ತು ವಿವೋ V29 ಹೆಚ್ಚಿನ ಫೀಚರ್ಸ್​ ಒಂದೇ ರೀತಿಯಲ್ಲಿದೆ. ಡ್ಯುಯಲ್ ಸಿಮ್ (ನ್ಯಾನೊ) ವಿವೋ V29 ಪ್ರೊ ಆಂಡ್ರಾಯ್ಡ್ 13 ಆಧಾರಿತ FunTouch OS 13 ಮೂಲಕ ರನ್ ಮಾಡುತ್ತದೆ. 6.78-ಇಂಚಿನ 1.5K (1,260×2,800 ಪಿಕ್ಸೆಲ್‌ಗಳು) 3D ಕರ್ವ್ಡ್ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರ, 1,300 ನೈಟ್ಸ್ ಬ್ರೈಟ್‌ನೆಸ್ ಮತ್ತು ಗರಿಷ್ಠ 1,300 ನೈಟ್‌ಗಳನ್ನು ಹೊಂದಿದೆ. ಇದು 4nm ಮೀಡಿಯಾಟೆಕ್ ಡೈಮೆನ್ಸಿಟಿ 8200 SoC ಮತ್ತು 12GB RAM ನಿಂದ ಚಾಲಿತವಾಗಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ವಿವೋ V29 ಪ್ರೊ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. 12-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಇದೆ. ಹಿಂಬದಿಯ ಕ್ಯಾಮರಾ ಸ್ಲೋ ಮೋಷನ್, ಮೈಕ್ರೋ ಮೂವ್, ಸೂಪರ್‌ಮೂನ್, ಡ್ಯುಯಲ್ ವ್ಯೂ, ಲೈವ್ ಫೋಟೋ, ಪನೋರಮಾ ಮತ್ತು ಟೈಮ್-ಲ್ಯಾಪ್ಸ್ ಫೋಟೋಗ್ರಫಿ ಸೇರಿದಂತೆ ವಿಭಿನ್ನ ವಿಡಿಯೋ ಮತ್ತು ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ. ಮುಂಭಾಗದಲ್ಲಿ, ಇದು ಆಟೋಫೋಕಸ್​ನೊಂದಿಗೆ 50-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈ-ಫೈ, ಬ್ಲೂಟೂತ್ v5.3, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ವಿವೋ V29 ಪ್ರೊ 80W ವೇಗದ ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ವೇಗದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 50 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ ಎಂದು ಹೇಳಲಾಗಿದೆ.

ವಿವೋ V29 ಫೀಚರ್ಸ್:

ವಿವೋ V29 ಸ್ಮಾರ್ಟ್​ಫೋನ್ ವಿವೋ V29 ಪ್ರೊನಲ್ಲಿರುವ ಡಿಸ್ ಪ್ಲೇ ವಿಶೇಷತೆಗಳನ್ನು ಒಳಗೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ನಿಂದ ಚಾಲಿತವಾಗಿದೆ, ಜೊತೆಗೆ 12GB RAM ಮತ್ತು 256GB ಸಂಗ್ರಹಣೆಯನ್ನು ಹೊಂದಿದೆ. ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವು OIS ಗೆ ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಒಳಗೊಂಡಿದೆ, 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಇದು 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಇದು ಬ್ಲೂಟೂತ್ 5.3 ಕನೆಕ್ಟಿವಿಟಿಯೊಂದಿಗೆ ಬರುತ್ತದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಪ್ಯಾಕ್ ಮಾಡುತ್ತದೆ. ಇದು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,600mAh ಬ್ಯಾಟರಿಯನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 am, Thu, 5 October 23