Vivo X70: ಬಹುನಿರೀಕ್ಷಿತ ವಿವೋ X70 ಸರಣಿ ಸ್ಮಾರ್ಟ್​ಫೋನ್ ಅನಾವರಣಕ್ಕೆ ದಿನಾಂಕ ಫಿಕ್ಸ್: ಭರ್ಜರಿ ಫೀಚರ್ಸ್

ಮೂಲಗಳ ಪ್ರಕಾರ ವಿವೋ X70 ಸ್ಮಾರ್ಟ್‌ಫೋನ್‌ 6.56-ಇಂಚಿನ ಡಿಸ್​ ಪ್ಲೇ ಹೊಂದಿರದ್ದು ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ನಿಂದ ಕೂಡಿರಲಿದೆ.

Vivo X70: ಬಹುನಿರೀಕ್ಷಿತ ವಿವೋ X70 ಸರಣಿ ಸ್ಮಾರ್ಟ್​ಫೋನ್ ಅನಾವರಣಕ್ಕೆ ದಿನಾಂಕ ಫಿಕ್ಸ್: ಭರ್ಜರಿ ಫೀಚರ್ಸ್
Vivo X70
Follow us
TV9 Web
| Updated By: Vinay Bhat

Updated on: Aug 31, 2021 | 2:24 PM

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಫೋನುಗಳನ್ನು ಪರಿಯಿಸಿ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ವಿವೋ ಕಂಪೆನಿ ಇದೀಗ ತನ್ನ ಹೊಸ ವಿವೋ X70 (Vivo X70) ಸರಣಿಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಕಂಪೆನಿ ಖಚಿತ ಪಡಿಸಿದ್ದು, ವಿವೋ X70 ಹಾಗೂ ವಿವೋ X70 ಪ್ರೊ (Vivo X70 Pro) ಮತ್ತು ವಿವೋ X70 ಪ್ರೊ+ (Vivo X70 Pro+) ಸ್ಮಾರ್ಟ್​ಫೋನ್ ಸೆಪ್ಟೆಂಬರ್ 9 ರಂದು ಅನಾವರಣಗೊಳ್ಳಲಿದೆ. ಈಗಾಗಲೇ ಈ ಫೋನಿನ ಕೆಲ ಫೋಟೋಗಳು ಸೋರಿಕೆಯಾಗಿದ್ದು ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ.

ಮೂಲಗಳ ಪ್ರಕಾರ ವಿವೋ X70 ಸ್ಮಾರ್ಟ್‌ಫೋನ್‌ 6.56-ಇಂಚಿನ ಡಿಸ್​ಪ್ಲೇ ಹೊಂದಿರಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ನಿಂದ ಕೂಡಿರಲಿದ್ದು, ಭವಿಷ್ಯದ ರೂಪಾಂತರವು ಸ್ಯಾಮ್‌ಸಂಗ್ ಎಕ್ಸಿನೋಸ್ 1080 ಚಿಪ್‌ಸೆಟ್ ಅನ್ನು ಸ್ವೀಕರಿಸಬಹುದು ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರ ಸೆಟಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 40 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಇದು 4,400mAh ಬ್ಯಾಟರಿಯನ್ನು 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಹೊಂದಿರುವ ಸಾಧ್ಯತೆ ಇದೆ.

ಇನ್ನು ವಿವೋ X70 ಪ್ರೊ ಸ್ಮಾರ್ಟ್‌ಫೋನ್‌ 6.5 ಡಿಸ್‌ಪ್ಲೇ ಹೊಂದಿದರಲಿದೆ. ಸ್ಯಾಮ್‌ಸಂಗ್ ಎಕ್ಸಿನೋಸ್ 1080 ಪ್ರೊಸೆಸರ್ ಇರಲಿದ್ದು, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ, 13 ಮೆಗಾಪಿಕ್ಸೆಲ್ ತೃತೀಯ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ 5x ಆಪ್ಟಿಕಲ್ ಜೂಮ್ ಇರುತ್ತದೆ. ಸಾಧನವು ಕಪ್ಪು, ಬಿಳಿ ಮತ್ತು ಅರೋರಾ ಬಣ್ಣಗಳಲ್ಲಿ ಬರಬಹುದು. ಇದು 4,400mAh ಬ್ಯಾಟರಿ 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಇನ್ನೂ ವಿವೋ X70 ಪ್ರೊ+ ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿರಲಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಲಿದೆ. ಜೊತೆಗೆ 8GB RAM ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಮೂರೂ ಸ್ಮಾರ್ಟ್​ಫೋನ್​ಗಳ ಬೆಲೆ ಎಷ್ಟಿರಬಹುದೆಂದು ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ ವಿವೋ X70 ಭಾರತೀಯ ಮಾರುಕಟ್ಟೆಗೆ 70,000 ರೂ. ಅಸುಪಾಸಿನ ಬೆಲೆಯೊಂದಿಗೆ ಬರುವ ಸಾದ್ಯತೆ ಇದೆ. ಹಾಗೆಯೇ ವಿವೋ X70 ಪ್ರೊ ಸ್ಮಾರ್ಟ್‌ಫೋನ್‌ ಬೆಲೆ ಸುಮಾರು 50,000ರೂ ಬೆಲೆ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ರಿಯಲ್ ಮಿಯ ಬರೋಬ್ಬರಿ 5 ಸ್ಮಾರ್ಟ್​ಫೋನ್ ಬೆಲೆಯಲ್ಲಿ ದಿಢೀರ್ ಏರಿಕೆ: ನೂತನ ದರ ಇಲ್ಲಿದೆ

WhatsApp ಬಳಕೆದಾರರೇ ಎಚ್ಚರ: ಈ ಒಂದು ಸೆಟ್ಟಿಂಗ್ಸ್ ಬದಲಿಸದಿದ್ರೆ ನಿಮ್ಮ ಖಾತೆ ಕೂಡ ಹ್ಯಾಕ್ ಆಗುತ್ತೆ

(Vivo X70 Series Launch Date Set for September 9 Expected Price in India and Specifications here)