Vivo Y36 5G Vs Oppo A78 5G: ವಿವೋ Y36 5G ಮತ್ತು ಒಪ್ಪೋ A78 5G ಸ್ಮಾರ್ಟ್​ಫೋನ್​ನಲ್ಲಿ ಯಾವುದು ಬೆಸ್ಟ್?: ಇಲ್ಲಿದೆ ಫುಲ್ ಡೀಟೇಲ್ಸ್

|

Updated on: Jun 26, 2023 | 12:24 PM

ಕಳೆದ ವಾರ ಭಾರತದಲ್ಲಿ ವಿವೋ Y36 5G ಸ್ಮಾರ್ಟ್​ಫೋನ್ ಬಿಡುಗಡೆ ಆಗಿತ್ತು. ಕೆಳ ತಿಂಗಳ ಹಿಂದೆ ಒಪ್ಪೋ A78 5G ಫೋನ್ ಲಾಂಚ್ ಆಗಿತ್ತು. ಹಾಗಾದರೆ, ಈ ಎರಡು ಸ್ಮಾರ್ಟ್​ಫೋನ್​ನಲ್ಲಿ ಯಾವುದು ಬೆಸ್ಟ್ ಎಂಬುದನ್ನು ನೋಡೋಣ.

Vivo Y36 5G Vs Oppo A78 5G: ವಿವೋ Y36 5G ಮತ್ತು ಒಪ್ಪೋ A78 5G ಸ್ಮಾರ್ಟ್​ಫೋನ್​ನಲ್ಲಿ ಯಾವುದು ಬೆಸ್ಟ್?: ಇಲ್ಲಿದೆ ಫುಲ್ ಡೀಟೇಲ್ಸ್
Vivo Y36 5G Vs Oppo A78 5G
Follow us on

ಚೀನಾ ಮೂಲದ ಪ್ರಸಿದ್ಧ ಟೆಕ್ನಾಲಜಿ ಕಂಪನಿ ವಿವೋ ಕಳೆದ ವಾರ ಭಾರತದಲ್ಲಿ ವಿವೋ Y36 5G (Vivo Y36 5G) ಸ್ಮಾರ್ಟ್​ಫೋನನ್ನು (Smartphone) ಬಿಡುಗಡೆ ಮಾಡಿತ್ತು. ಈ ಫೋನ್ ಬಜೆಟ್ ಬೆಲೆಯಿಂದ ಕೂಡಿದ್ದರೂ ಸ್ನಾಪ್​ಡ್ರಾಗನ್ ಪ್ರೊಸೆಸರ್, 50 ಮೆಗಾ ಪಿಕ್ಸೆಲ್ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್​ನಿಂದ ಆವೃತ್ತವಾಗಿದೆ. ಅತ್ತ ಒಪ್ಪೋ ಕಂಪನಿ ಕೂಡ ಇದೇ ಪ್ರೈಸ್ ರೇಂಜ್​ನಲ್ಲಿ ಕೆಳ ತಿಂಗಳ ಹಿಂದೆ ಒಪ್ಪೋ A78 5G (Oppo A78 5G) ಫೋನನ್ನು ಲಾಂಚ್ ಮಾಡಿತ್ತು. ಇದರಲ್ಲಿ ಕೂಡ ಮೀಡಿಯಾಟೆಕ್ ಪ್ರೊಸೆಸರ್, ಫಾಸ್ಟ್ ಚಾರ್ಜರ್, ಬಲಿಷ್ಠ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಕೂಡಿದೆ. ಹಾಗಾದರೆ, ಈ ಎರಡು ಸ್ಮಾರ್ಟ್​ಫೋನ್​ನಲ್ಲಿ ಯಾವುದು ಬೆಸ್ಟ್ ಎಂಬುದನ್ನು ನೋಡೋಣ.

ವಿವೋ Y36 5G:

  • ವಿವೋ Y36 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು 8GB RAM ನೊಂದಿಗೆ ಬರುತ್ತದೆ.
  • Y ಸರಣಿಯ ಈ ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
  • 16-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
  • ಈ ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
  • ವಿವೋ Y36 ಬೆಲೆ 16,999 ರೂ. ಆಗಿದೆ. ಇದು ಎರಡು ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ – ಮೆಟಿಯರ್ ಬ್ಲ್ಯಾಕ್ ಮತ್ತು ವೈಬ್ರೆಂಟ್ ಗೋಲ್ಡ್.
  • ಈ ಸ್ಮಾರ್ಟ್​ಫೋನ್ ಡ್ಯುಯಲ್ ಸಿಮ್ (ನ್ಯಾನೋ) ಬೆಂಬಲವನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 13-ಆಧಾರಿತ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ರನ್ ಆಗುತ್ತದೆ.
  • ಡಿಸ್ ಪ್ಲೇ ವಿಚಾರಕ್ಕೆ ಬರುವುದಾದರೆ 6.64-ಇಂಚಿನ ಪೂರ್ಣHD+ (1,080×2,388 ಪಿಕ್ಸೆಲ್‌ಗಳು) LCD ಡಿಸ್ ಪ್ಲೇ ಹೊಂದಿದೆ.

Mobile Camera Cleaning Tips: ಮನೆಯಲ್ಲೇ ಕುಳಿತು ಸ್ಮಾರ್ಟ್​ಫೋನ್ ಕ್ಯಾಮೆರಾ ಕ್ಲೀನ್ ಮಾಡುವುದು ಹೇಗೆ?

ಇದನ್ನೂ ಓದಿ
WhatsApp Tricks: ವಾಟ್ಸ್​ಆ್ಯಪ್​ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಬಹುದು: ಇದು ಹೇಗೆ ಗೊತ್ತೇ?
Unihertz Jelly Star: ಬಿಡುಗಡೆ ಆಯಿತು ವಿಶ್ವದ ಅತ್ಯಂತ ಚಿಕ್ಕ ಸ್ಮಾರ್ಟ್‌ಫೋನ್: ಬೆಲೆ 17,000 ರೂ.
Smartphone: ಸ್ಮಾರ್ಟ್​ಫೋನ್ ಚಾರ್ಜ್​ಗೆ ಇಟ್ಟಾಗ ಬಿಸಿ ಬಿಸಿ ಆಗುತ್ತಾ?: ಹೀಗಾದಲ್ಲಿ ಕಡೆಗಣಿಸಬೇಡಿ
Galaxy S20 FE: 74,999 ರೂ. ವಿನ ಗ್ಯಾಲಕ್ಸಿ S20 FE ಫೋನ್ ಈಗ ಕೇವಲ 27,999 ರೂ. ಗೆ ಮಾರಾಟ ಆಗುತ್ತಿದೆ

ಒಪ್ಪೋ A78 5G:

  • ಈ ಸ್ಮಾರ್ಟ್​ಫೋನ್ ಮೀಡಿಯಾಟೆಕ್ ಹೀಲಿಯೊ 700 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ.
  • 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 33W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ.
  • ಒಪ್ಪೋ A78 5G 8GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿದ್ದು, ಇದರ ಬೆಲೆ 18,999 ರೂ. ಆಗಿದೆ.
  • ಇದು ಗ್ಲೋಯಿಂಗ್ ಬ್ಲ್ಯಾಕ್ ಮತ್ತು ಗ್ಲೋಯಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತದೆ.
  • ಒಪ್ಪೋ A78 ಡ್ಯುಯಲ್ ಸಿಮ್ (ನ್ಯಾನೋ) ಬೆಂಬಲವನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 13-ಆಧಾರಿತ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ರನ್ ಆಗುತ್ತದೆ.
  • ಇದು 6.56-ಇಂಚಿನ HD+ (720×1,1612 ಪಿಕ್ಸೆಲ್‌ಗಳು) IPS LCD ಡಿಸ್ ಪ್ಲೇಯನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ