Vivo Y75s: 64MP ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಬಂತು ವಿವೋ Y75s ಹೊ ಸ್ಮಾರ್ಟ್​​ಫೋನ್

| Updated By: Vinay Bhat

Updated on: Sep 09, 2022 | 6:45 AM

ಕಳೆದ ಮಾರ್ಚ್​ನಲ್ಲಿ ವಿವೋ Y75 ಎಂಬ ಆಕರ್ಷಕ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಬಾಗವಾಗಿ ವಿವೋ ವೈ 75ಎಸ್ (Vivo Y75s) ಫೋನನ್ನು ರಿಲೀಸ್ ಮಾಡಿದೆ.

Vivo Y75s: 64MP ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಬಂತು ವಿವೋ Y75s ಹೊ ಸ್ಮಾರ್ಟ್​​ಫೋನ್
Vivo Y75s 5G
Follow us on

ಪ್ರಸಿದ್ಧ ವಿವೋ (Vivo) ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್​ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಕಳೆದ ಮಾರ್ಚ್​ನಲ್ಲಿ ವಿವೋ Y75 ಎಂಬ ಆಕರ್ಷಕ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಬಾಗವಾಗಿ ವಿವೋ ವೈ 75ಎಸ್ (Vivo Y75s) ಫೋನನ್ನು ರಿಲೀಸ್ ಮಾಡಿದೆ. ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು ಇದರಲ್ಲಿರುವ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. ಮೀಡಿಯಾಟೆಕ್ ಡೈಮನ್ಸಿಟಿಯ ಬಲಿಷ್ಠ ಪ್ರೊಸೆಸರ್ ಅಳವಡಿಸಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.

ವಿವೋ Y75s ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ್ದು, ಇದರ 8GB RAM ಮತ್ತು 256GB ಇಂಟರ್‌ ಸ್ಟೋರೇಜ್ ಸಾಮರ್ಥ್ಯಕ್ಕೆ CNY 1,899, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 22,000 ರೂ. ಇರಬಹುದು. ಅಂತೆಯೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್ ಸಾಮರ್ಥ್ಯಕ್ಕೆ CNY 2,199, ಭಾರತದಲ್ಲಿ ಸುಮಾರು 25,000 ರೂ. ಆಗುತ್ತದೆ. ಸದ್ಯದಲ್ಲೇ ಈ ಫೋನ್ ಭಾರತಕ್ಕೂ ಕಾಲಿಡಲಿದೆಯಂತೆ.

ವಿವೋ Y75s 5G ಸ್ಮಾರ್ಟ್‌ಫೋನ್‌ 1,080*2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.57 ಇಂಚಿನ ಫುಲ್‌ ಹೆಚ್‌ಡಿ+ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ
iPhone 14: ಆ್ಯಪಲ್ ಸಹ-ಸಂಸ್ಥಾಪಕರ ಮಗಳಿನಿಂದಲೇ ಐಫೋನ್ 14 ಬಗ್ಗೆ ಟ್ರೋಲ್: ವೈರಲ್ ಆಗ್ತಿದೆ ಫೋಟೋ
iPhone 13 vs iPhone 14: ಐಫೋನ್ 13 ಹಾಗೂ ಐಫೋನ್ 14 ನಡುವೆ ಏನು ವ್ಯತ್ಯಾಸ?: ಯಾವುದು ಬೆಸ್ಟ್?
iPhone 14 Series: ಆ್ಯಪಲ್ ಐಫೋನ್ 14 ಸರಣಿ ಹೇಗಿದೆ?: ಫೋಟೋ ನೋಡಿ
Apple Smart Watch: ಕಾರು ಅಪಘಾತವಾದ್ರೆ ತಕ್ಷಣವೇ ಎಚ್ಚರಿಸುತ್ತೆ ಹೊಸ ಐಫೋನ್ 14 ಹಾಗೂ ಆ್ಯಪಲ್ ವಾಚ್

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳು ಡ್ಯುಯೆಲ್ ಸಿಮ್ 5G, ಬ್ಲೂಟೂತ್ V5.1, Wi-Fi, GPS, ಯುಎಸ್​ಬಿ ಟೈಪ್ಸಿ ಮತ್ತು FM ರೇಡಿಯೋ ಬೆಂಬಲವನ್ನು ಒಳಗೊಂಡಿದೆ. ಫಿಂಗರ್​ಪ್ರಿಂಟ್ ಸೆನ್ಸಾರ್​ನಿಂದ ಕೂಡಿದೆ.