ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಆಗಾಗ ವಿಶೇಷ ಫೀಚರ್ಗಳುಳ್ಳ ಮೊಬೈಲ್ (Mobile) ಅನ್ನು ಪರಿಚಯಿಸಿ ಸುದ್ದಿಯಲ್ಲಿರುವ ವಿವೋ (Vivo) ಸಂಸ್ಥೆ ಇದೀಗ ಹೊಸ ಫೋನೊಂದನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ತನ್ನ 5G ಸ್ಮಾರ್ಟ್‌ಫೋನ್‌ಗಳ (5G Smartphones) ಪಟ್ಟಿಗೆ ಮತ್ತೊಂದು ಹೊಸ ಫೋನ್ ಸೇರ್ಪಡೆ ಮಾಡಲು ವಿವೋ ಸಜ್ಜಾಗಿದೆ. ಅದುವೇ ವಿವೋ ವೈ76 5ಜಿ (Vivo Y76 5G) ಸ್ಮಾರ್ಟ್‌ಫೋನ್. ಇದೇ ನವೆಂಬರ್ 23 ರಂದು ಅಧಿಕೃತವಾಗಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದೆ. ಈ ಫೋನ್‌ನ ವಿನ್ಯಾಸ ಮತ್ತು ಪ್ರಮುಖ ಫೀಚರ್ಸ್‌ಗಳ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರುವ ವಿವೋ Y76 5G ಸ್ಮಾರ್ಟ್‌ಫೋನ್ 1,080 x 2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ LCD ಡಿಸ್‌ಪ್ಲೇಯಿಂದ ಕೂಡಿದೆ. ಆಂಡ್ರಾಯ್ಡ್ 11 ಆಧಾರಿತ ಫಂಟೌಚ್ ಓಎಸ್ 11 ಅನ್ನು ಚಾಲನೆ ಮಾಡುತ್ತದೆ ಎಂದು ಹೇಳಲಾಗಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 8GB RAM + 128GB ಮತ್ತು 8GB + 256GB ಆಂತರೀಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ. ಜೊತೆಗೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಇನ್ನು ಇದರೊಂದಿಗೆ ಫೋಟೊ ಎಡಿಟಿಂಗ್ ಆಯ್ಕೆಗಳನ್ನು ಈ ಕ್ಯಾಮೆರಾ ಹೊಂದಿರಲಿದೆ.
ಇನ್ನು 4,100mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿರಲಿದ್ದು, 44W ಫ್ಲ್ಯಾಶ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆಯಂತೆ. ಹಾಗೆಯೇ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಆಡಿಯೋ ಜ್ಯಾಕ್ ಆಯ್ಕೆ ಪಡೆದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್, ಜಿಪಿಎಸ್ ಸೇರಿದಂತೆ ನೂತನ ಆಯ್ಕೆಗಳೊಂದಿಗೆ ವಿವೋ Y76 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
Flipkart: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಹೊಸ ಮೇಳ: ಸ್ಮಾರ್ಟ್‌ಫೋನ್ ಮೇಲಂತು ಬಂಪರ್ ಡಿಸ್ಕೌಂಟ್
(Vivo Y76 5G launch date is November 23 the company has confirmed)