ಇಂದು ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಮುಖ್ಯ ದಾಖಲೆ ಆಗಿದೆ. ಹೆಚ್ಚಿನ ಸಂದರ್ಭದಲ್ಲಿ ದಾಖಲೆ ನೀಡುವಾದ ಅದರಲ್ಲಿ ಆಧಾರ್ ಬೇಕೇ ಬೇಕು. ನಮ್ಮ ಗುರುತನ್ನು ತಿಳಿಸಲು ಇದು ಮುಖ್ಯವಾದ ದಾಖಲೆ ಆಗಿದೆ. ಆದರೆ, ನೀಲಿ ಆಧಾರ್ ಕಾರ್ಡ್ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ಅಥವಾ ಓದಿದ್ದೀರಾ?. ನೀಲಿ ಆಧಾರ್ ಕಾರ್ಡ್ ಸಾಮಾನ್ಯ ಆಧಾರ್ ಕಾರ್ಡ್‌ಗಿಂತ ಹೇಗೆ ಭಿನ್ನವಾಗಿದೆ ಎಂಬಂತಹ ಹಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು?. ಇದಲ್ಲದೆ, ನೀಲಿ ಆಧಾರ್ ಕಾರ್ಡ್ ಎಂದರೇನು ಮತ್ತು ಪ್ರತಿಯೊಬ್ಬರೂ ನೀಲಿ ಆಧಾರ್ ಕಾರ್ಡ್ ಮಾಡಬಹುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ನಿಮಗೆ ಮೂಡಬಹುದು?.
ಸಾಮಾನ್ಯ ಆಧಾರ್ ಕಾರ್ಡ್‌ನಲ್ಲಿ, ಬಯೋಮೆಟ್ರಿಕ್ ಡೇಟಾಕ್ಕಾಗಿ ಫಿಂಗರ್‌ಪ್ರಿಂಟ್ ಮತ್ತು ಕಣ್ಣುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಆದರೆ ಬ್ಲೂ ಆಧಾರ್ ಕಾರ್ಡ್‌ಗೆ ಬಯೋಮೆಟ್ರಿಕ್ ಅಗತ್ಯವಿಲ್ಲ. ಹಾಗಾದರೆ ಈ ಬ್ಲೂ ಆಧಾರ್ ಕಾರ್ಡ್ ಏನು?.
ಭಾರತದಲ್ಲಿಂದು ಬಹುನಿರೀಕ್ಷಿತ ವಿವೋ T3 5G ಫೋನ್ ಬಿಡುಗಡೆಗೆ: ಬೆಲೆ ಎಷ್ಟು?, ಏನಿದೆ ಫೀಚರ್ಸ್?
ನೀಲಿ ಆಧಾರ್ ಕಾರ್ಡ್ ಅಥವಾ ಬಾಲ್ ಆಧಾರ್ ಕಾರ್ಡ್ ಅನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. ಅಂದರೆ ಎಲ್ಲರೂ ನೀಲಿ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ಚಿಕ್ಕ ಮಗುವಿನ ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್ ತೆಗೆದುಕೊಳ್ಳುವುದು ಸುಲಭವಲ್ಲ, ಅದಕ್ಕಾಗಿಯೇ ಮಗುವಿನ ಬಯೋಮೆಟ್ರಿಕ್ ಡೇಟಾವನ್ನು ಬಾಲ್ ಆಧಾರ್ ಕಾರ್ಡ್ ಅಥವಾ ಬ್ಲೂ ಆಧಾರ್‌ಗೆ ತೆಗೆದುಕೊಳ್ಳುವುದಿಲ್ಲ. ಮಗುವಿನ ಪೋಷಕರು ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್ ಮೂಲಕ ನವಜಾತ ಶಿಶುವಿಗೆ ಬಾಲ್ ಆಧಾರ್‌ಗೆ ಅರ್ಜಿ ಸಲ್ಲಿಸಬಹುದು. ಇಷ್ಟು ಮಾತ್ರವಲ್ಲದೆ ಮಕ್ಕಳ ಶಾಲಾ ಐಡಿಯನ್ನು ಮಕ್ಕಳ ಆಧಾರ್ ಕಾರ್ಡ್‌ಗೂ ಬಳಸಬಹುದು.
ಮೊದಲನೆಯದಾಗಿ ನೀವು UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು, ನಂತರ ನೀವು ನಿಮ್ಮ ಮನೆಯ ಹತ್ತಿರದ ಆಧಾರ್ ಕೇಂದ್ರದಲ್ಲಿ ಆಧಾರ್ ಕಾರ್ಡ್ ನೋಂದಣಿಗಾಗಿ ಆನ್‌ಲೈನ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು. ಅಪಾಯಿಂಟ್‌ಮೆಂಟ್ ತೆಗೆದುಕೊಂಡ ನಂತರ, ಆಧಾರ್ ಕೇಂದ್ರಕ್ಕೆ ಹೋಗಿ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆಧಾರ್ ಕೇಂದ್ರಕ್ಕೆ ಹೋಗುವ ಮೊದಲು, ನಿಮ್ಮ ಆಧಾರ್ ಕಾರ್ಡ್, ವಿಳಾಸದ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರದಂತಹ ಪ್ರಮುಖ ದಾಖಲೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ಹೊಸದರಂತೆ ಮಾಡಬೇಕೇ?: ಇಲ್ಲಿದೆ ನೋಡಿ ಟ್ರಿಕ್ಸ್
ಆಧಾರ್ ಕೇಂದ್ರಕ್ಕೆ ಭೇಟಿ ನೀಡಿದ ನಂತರ, ನಿಮ್ಮ ಮಗುವಿನ ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಪರಿಶೀಲನೆಯ 60 ದಿನಗಳಲ್ಲಿ ನಿಮ್ಮ ಮಗುವಿನ ಹೆಸರಿನಲ್ಲಿ ನೀಲಿ ಆಧಾರ್ ಕಾರ್ಡ್ ನೀಡಲಾಗುತ್ತದೆ.
ಈ ಕಾರ್ಡ್ ನೀಡಲು ಮಗುವಿನ ಬಯೋಮೆಟ್ರಿಕ್ ಡೇಟಾ ಅಗತ್ಯವಿಲ್ಲ. ಏಕೆಂದರೆ UID ಅನ್ನು ಪೋಷಕರ UID ಮಾಹಿತಿ ಮತ್ತು ಛಾಯಾಚಿತ್ರದ ಆಧಾರದ ಮೇಲೆ ಪ್ರಕ್ರಿಯೆಗೊಳಿಸಲಾಗುತ್ತದೆ.
ನೀವು ಆಧಾರ್ ಕೇಂದ್ರಕ್ಕೆ ಹೋಗಿ ನಿಮ್ಮ ಮಗುವಿಗೆ ನೀಲಿ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ತಕ್ಷಣ, ನಿಮಗೆ ಆಧಾರ್ ಕೇಂದ್ರದಿಂದ ಸ್ಲಿಪ್ ನೀಡಲಾಗುತ್ತದೆ, ಅದರಲ್ಲಿ ಮಗುವಿನ ನೋಂದಣಿ ಐಡಿ ಬರೆಯಲಾಗುತ್ತದೆ. ಈ ID ಯ ಸಹಾಯದಿಂದ, UIDAI ನ ಅಧಿಕೃತ ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಆಧಾರ್ ಕಾರ್ಡ್ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
ವರದಿಗಳ ಪ್ರಕಾರ, ಬ್ಲೂ ಆಧಾರ್ ಕಾರ್ಡ್ ಅಥವಾ ಬಾಲ್ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇದು ಉಚಿತ ಪ್ರಕ್ರಿಯೆ ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ