- Kannada News Photo gallery How to make your old smartphone look like a new one?: Here are the tricks
Tech Tips: ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ಹೊಸದರಂತೆ ಮಾಡಬೇಕೇ?: ಇಲ್ಲಿದೆ ನೋಡಿ ಟ್ರಿಕ್ಸ್
ಅನೇಕ ಬಾರಿ ಜನರು ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ದೀರ್ಘಕಾಲದವರೆಗೆ ಅಪ್ಡೇಟ್ ಕೊಟ್ಟೇ ಇರುವುದಿಲ್ಲ. ಈ ಕಾರಣದಿಂದಾಗಿ, ಫೋನ್ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುವುದಿಲ್ಲ. ಫೋನ್ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತದೆ. ಅಲ್ಲದೆ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.
Updated on:Mar 19, 2024 | 3:46 PM

ಸ್ಮಾರ್ಟ್ಫೋನ್ ಹಳೆಯದಾಗುತ್ತಿದ್ದಂತೆ, ಅದರಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೊರಗಡೆ ಎಷ್ಟೇ ಹೊಳೆಯುತ್ತಿದ್ದರೂ ಅಗತ್ಯವಿದ್ದಾಗ ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ, ಹ್ಯಾಂಗ್ ಆಗುತ್ತಿದ್ದರೆ ಕೆಟ್ಟ ಕೋಪ ಬರುತ್ತದೆ. ಆದ್ದರಿಂದ ನೀವು ಫೋನಿನ ಬಗ್ಗೆ ಜಾಗರೂಕರಾಗಿರಬೇಕು. ಮುಖ್ಯವಾಗಿ ಫೋನ್ ಹಳೆಯದಾದಂತೆ ಅದಕ್ಕೆ ವಿಶೇಷ ಕಾಳಜಿ ಬೇಕಾಗುತ್ತದೆ. ಇಲ್ಲಿ ನಾವು ತಿಳಿಸುವ ಕೆಲ ಅಂಶಗಳ ಮೇಲೆ ನಿಗಾ ಇಟ್ಟರೆ ನಿಮ್ಮ ಹಳೆಯ ಫೋನ್ ಹೊಚ್ಚ ಹೊಸ ರೀತಿಯಲ್ಲಿ ಕೆಲಸ ಮಾಡಲು ಶುರುಮಾಡುತ್ತದೆ.

ಅನೇಕ ಬಾರಿ ಜನರು ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅನ್ನು ದೀರ್ಘಕಾಲದವರೆಗೆ ಅಪ್ಡೇಟ್ ಕೊಟ್ಟೇ ಇರುವುದಿಲ್ಲ. ಈ ಕಾರಣದಿಂದಾಗಿ, ಫೋನ್ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ನವೀಕರಣಗಳನ್ನು ಪಡೆಯುವುದಿಲ್ಲ. ಫೋನ್ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತದೆ. ಅಲ್ಲದೆ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಫೋನ್ ನಿಧಾನವಾಗಿ ಹ್ಯಾಂಗ್ ಆದರೆ ಅದೊಂದು ದೊಡ್ಡ ಸಮಸ್ಯೆ. ಅಪ್ಡೇಟ್ ಕೊಟ್ಟರೆ ಹೆಚ್ಚಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ಆಂಡ್ರಾಯ್ಡ್ ಫೋನ್‌ಗಳ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ ನೀವು ಅವುಗಳಲ್ಲಿ ಸಾಕಷ್ಟು ಕಸ್ಟಮೈಸೇಶನ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ನಿಂದ ಹೊಸ ಲಾಂಚರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು. ಕೆಲವು ಉತ್ತಮ ಲಾಂಚರ್‌ಗಳಾದ ನೋವಾ ಲಾಂಚರ್, ಆಕ್ಷನ್ ಲಾಂಚರ್ ಮತ್ತು ಮೈಕ್ರೋಸಾಫ್ಟ್ ಲಾಂಚರ್ ಇದನ್ನು ಇನ್ಸ್ಟಾಲ್ ಮಾಡಿ. ಇದು ಫೋನ್ ಅನ್ನು ಹೊಚ್ಚ ಹೊಸ ರೀತಿಯಲ್ಲಿ ಕೆಲಸ ಮಾಡುತ್ತದೆ.

ಫೋನ್ ಅನ್ನು ದೀರ್ಘಕಾಲ ಬಳಸಿದ ನಂತರ ಸಾಕಷ್ಟು ಡೇಟಾ ಸಂಗ್ರಹವಾಗಿರುತ್ತದೆ. ಆದ್ದರಿಂದ ಫೋನ್‌ನಿಂದ ಅನಗತ್ಯ ಮೀಡಿಯಾ ಫೈಲ್‌ಗಳನ್ನು ಡಿಲೀಟ್ ಮಾಡಿ. ಬೇಡದ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಸೇವ್ ಮಾಡಿಟ್ಟ ಡೇಟಾವನ್ನು ಅಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಫೋನ್ ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ಫೋನ್ ಅನ್ನು ಹೊಸದಾಗಿ ಕಾಣುವಂತೆ ಮಾಡಲು, ನೀವು ಒಮ್ಮೆ ಫ್ಯಾಕ್ಟರಿ ರೀಸೆಟ್ ಮಾಡಬಹುದು. ಇದು ನಿಮ್ಮ ಫೋನ್‌ನಿಂದ ಎಲ್ಲಾ ಜಂಕ್ ಫೈಲ್‌ಗಳನ್ನು ಡಿಲೀಟ್ ಮಾಡುತ್ತದೆ. ಆದರೆ ಫ್ಯಾಕ್ಟರಿ ರೀಸೆಟ್ ಮಾಡುವ ಮೊದಲು, ಫೋನ್ ಡೇಟಾದ ಬ್ಯಾಕಪ್ ತೆಗೆದುಕೊಳ್ಳಿ. ಏಕೆಂದರೆ ಫ್ಯಾಕ್ಟರಿ ರೀಸೆಟ್‌ನಲ್ಲಿ ಕಾಂಟೆಕ್ಟ್, ಫೋಟೋ, ವಿಡಿಯೋ ಎಲ್ಲಾ ಡೇಟಾವು ಡಿಲೀಟ್ ಆಗುತ್ತದೆ.
Published On - 3:45 pm, Tue, 19 March 24
























