ದೇವಸ್ಥಾನಕ್ಕೆ ಹೋಗಲು ಶಿವರಾಜ್ ಸಿಂಗ್ ಚೌಹಾನ್ ನಿನ್ನೆ ಆಗಮಿಸಿದ್ದರು, ಬೇರೆ ಚರ್ಚೆಗಳಾಗಿಲ್ಲ: ಯಡಿಯೂರಪ್ಪ
ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ವಹಿಸಿದ್ದಾರೆ. ಅವರು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು ಮತ್ತು ಯಡಿಯೂರಪ್ಪರನ್ನು ಭೇಟಿಯಾಗಿದ್ದರು. ಯಡಿಯೂರಪ್ಪ, ಚೌಹಾನ್ ಅವರು ಪುಟಪರ್ತಿಗೆ ಹೋಗಿದ್ದನ್ನು ಮಾತ್ರ ಹೇಳುತ್ತಾರೆ. ನಿಸ್ಸಂದೇಹವಾಗಿ ಅವರಿಬ್ಬರ ನಡುವೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿರುತ್ತದೆ, ಬಿಎಸ್ವೈ ಅದನ್ನು ಹಂಚಿಕೊಳ್ಳಲು ತಯಾರಿಲ್ಲ.
ಬೆಂಗಳೂರು, ಜುಲೈ 10: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ (CM Siddaramaiah) ಮುಂದುವರಿಯುತ್ತಾರಾ? ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾರಾ?-ಕಳೆದ ಕೆಲ ತಿಂಗಳುಗಳಿಂದ ಕನ್ನಡಿಗರನ್ನು ಎಡೆಬಿಡದೆ ಕಾಡುತ್ತಿರುವ ಪ್ರಶ್ನೆಗಳಿವು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮಾಧ್ಯಮಗಳು ವಿಜಯೇಂದ್ರ ಮುಂದುವರಿಯುವ ಬಗ್ಗೆ ಕೇಳಿದಾಗ, ನಂಗೊತ್ತಿಲ್ಲ ಅಂತ ಉತ್ತರಿಸಿದರು! ನಿಮಗೆ ನೆನಪಿರಬಹುದು, ತಮ್ಮ ಮಗನನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಲು ಯಡಿಯೂರಪ್ಪ ಸಾಕಷ್ಟು ಕಸರತ್ತು ಮಾಡಿದ್ದರು. ಹಾಗಾಗಿ ವರಿಷ್ಠರ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ಅವರಿಗೆ ಗೊತ್ತಿರಬಹುದು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇದೆ ಎಂದಿದ್ಯಾರು: ವಿಜಯೇಂದ್ರ ಪ್ರಶ್ನೆ, ವಿರೋಧಿ ಬಣಕ್ಕೆ ಸಂದೇಶ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

