ಭಾರತೀಯ ರೈಲ್ವೆಯು ಆರಾಮದಾಯಕ ಮತ್ತು ದೂರದ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಜನರು ದೂರದೂರಿಗೆ ಪ್ರಯಾಣಿಸುವಾಗ ರೈಲಿನಲ್ಲಿ ಹೋಗಲು ಬಯಸುತ್ತಾರೆ. ಸುಮಾರು ಗಂಟೆಗಳ ಕಾಲ ಟ್ರೈನ್ನಲ್ಲಿ ಇರಬೇಕಾಗಿರುವುದರಿಂದ ಜನರು ತಮ್ಮ ಸಮಯವನ್ನು ಕಳೆಯಲು ಮೊಬೈಲ್ (Mobile) ಬಳಸುತ್ತಾ ಇರುತ್ತಾರೆ. ಆದರೆ ಚಲಿಸುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ ಏನು ಗತಿ?. ಸಾಮಾನ್ಯ ಜನರು ನನ್ನ ಮೊಬೈಲ್ ಕಳೆದುಹೋಯಿತು ಎಂದು ಮೌನವಾಗಿ ಕುಳಿತು ಬಿಡುತ್ತಾರೆ. ಕೆಲವು ಜನರು ರೈಲಿನ ಚೈನ್ ಅನ್ನು ಎಳೆಯುತ್ತಾರೆ. ಆದರೆ ಈ ವಿಧಾನವು ಸರಿಯಾಗಿದೆಯೇ?. ನಿಮ್ಮ ಫೋನ್ ಅನ್ನು ಮರಳಿ ಪಡೆಯಲು ನೀವು ಏನು ಮಾಡಬೇಕು?.
ಚಲಿಸುವ ರೈಲಿನಿಂದ ಫೋನ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಅಥವಾ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಬೇಕು. ಇದರ ನಂತರ, ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಆರ್‌ಪಿಎಫ್ ಮತ್ತು ಸಂಖ್ಯೆ 182 ಕ್ಕೆ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಅಥವಾ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂದು ತಿಳಿಸಿ.
Budget Smartphones: ಜನವರಿಯಲ್ಲಿ 10,000 ರೂ. ಒಳಗೆ ಖರೀದಿಸಬಹುದಾದ 5 ಬೆಸ್ಟ್ ಸ್ಮಾರ್ಟ್ಫೋನ್ಸ್ ಇಲ್ಲಿದೆ ನೋಡಿ
ಹೀಗೆ ಮಾಡಿದರೆ ರೈಲ್ವೆ ಪೊಲೀಸರಿಗೆ ನಿಮ್ಮ ಫೋನ್ ಪತ್ತೆ ಮಾಡುವುದು ಸುಲಭವಾಗುತ್ತದೆ. ಅಲ್ಲದೆ ನಿಮ್ಮ ಫೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಪೊಲೀಸರು ತಕ್ಷಣ ಅದೇ ಸ್ಥಳಕ್ಕೆ ತಲುಪಿ ಫೋನ್ ಹುಡುಕಲು ಪ್ರಾರಂಭಿಸುತ್ತಾರೆ. ಈ ಪ್ರಕ್ರಿಯೆಯ ನಂತರ ನಿಮ್ಮ ಫೋನ್ ಅನ್ನು ಕಾನೂನುಬದ್ಧವಾಗಿ ಮರಳಿ ಪಡೆಯಬಹುದು.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ನ ಅಖಿಲ ಭಾರತ ಭದ್ರತಾ ಸಹಾಯವಾಣಿ ಸಂಖ್ಯೆ 182 ಆಗಿದೆ. ನೀವು ಯಾವುದೇ ಸಮಯದಲ್ಲಿ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಬಳಸಬಹುದು. ಅದೇ ರೀತಿ, GRP ಯ ಸಹಾಯವಾಣಿ ಸಂಖ್ಯೆ 1512 ಆಗಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು. ರೈಲ್ ಪ್ಯಾಸೆಂಜರ್ ಸಹಾಯವಾಣಿ ಸಂಖ್ಯೆ 138. ರೈಲು ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, 1512 ಅನ್ನು ಡಯಲ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ