Viral Video: ವಂದೇ ಭಾರತ್ ಎಕ್ಸ್​​ಪ್ರೆಸ್​ ಟ್ರೈನ್ ಬರುವ ವೇಳೆ ಹಳಿ ದಾಟಿದ ವ್ಯಕ್ತಿ, ಮುಂದೆನಾಯ್ತು ನೋಡಿ? 

ರೈಲು ಇನ್ನೇನೂ ಬರುತ್ತಿದೆ ಎನ್ನುವ ಸಂದರ್ಭದಲ್ಲಿ  ಆ ಸ್ಥಳದಲ್ಲಿ ರೈಲ್ವೆ ಹಳಿಯನ್ನು ದಾಟುವುದು ದೊಡ್ಡ ಅಪಾಯ ಅಂತಾನೇ ಹೇಳ್ಬಹುದು. ಏಕೆಂದ್ರೆ ರೈಲು ತುಂಬಾನೇ ವೇಗವಾಗಿ ಬರುತ್ತಿರುತ್ತೆ,  ಹೀಗೆ ರೈಲು ಅಲ್ಲೆಲ್ಲೋ ದೂರದಲ್ಲಿ ಬರುತ್ತಿರೋದಲ್ವಾ, ಆ ಕಡೆ ದಾಟಿದ್ರೆ ಏನು ಆಗಲ್ಲ ಅಂತ ಹೇಳಿ, ರೈಲು ಬರುವ ಸಂದರ್ಭದಲ್ಲಿ ರೈಲ್ವೆ ಹಳಿಯನ್ನು ದಾಟಲು ಹೋಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ರು  ವ್ಯಕ್ತಿ ವಂದೇ ಭಾರತ್ ಟ್ರೈನ್ ವೇಗವಾಗಿ ಬರುತ್ತಿರುವ  ಸಂದರ್ಭದಲ್ಲಿ  ಭಂಡ ಧೈರ್ಯದಿಂದ ರೈಲ್ವೆ ಹಳಿ ದಾಟಲು ಹೋಗಿ, ಕೂದಲೆಳೆಯುವ ಅಂತರದಲ್ಲಿ  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Viral Video: ವಂದೇ ಭಾರತ್ ಎಕ್ಸ್​​ಪ್ರೆಸ್​ ಟ್ರೈನ್ ಬರುವ ವೇಳೆ ಹಳಿ ದಾಟಿದ ವ್ಯಕ್ತಿ, ಮುಂದೆನಾಯ್ತು ನೋಡಿ? 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 05, 2024 | 2:40 PM

ರೈಲ್ವೆ ಹಳಿಯನ್ನು ದಾಟುವಾಗ ಎಷ್ಟು ಎಚ್ಚರಿಕೆ ವಹಿಸಿದ್ರೂ ಕಮ್ಮೀನೆ, ಯಾಕೆಂದ್ರೆ ಕೆಲವೊಮ್ಮೆ ಅಲ್ಲೆಲ್ಲೋ ದೂರದಲ್ಲಿ ರೈಲು ಬರ್ತಿರೋದು ಅಲ್ವಾ, ಧಾರಾಳವಾಗಿ ಈಗ ರೈಲ್ವೆ ಹಳಿ ದಾಟಬಹುದು ಅಂತ ಭಾವಿಸಿ ರೈಲ್ವೆ ಹಳಿ ದಾಟುವಷ್ಟರಲ್ಲಿ, ರೈಲು ಅವರ ಮುಂದೆ ಪಾಸ್ ಆಗಿರುತ್ತೆ, ಇದೇ ರೀತಿ ತರಾತುರಿಯಲ್ಲಿ  ರೈಲು ವೇಗವಾಗಿ ಬರುತ್ತಿರುವ ವೇಳೆಯಲ್ಲಿ ರೈಲ್ವೇ ಹಳಿ ದಾಟಲು ಹೋಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ವಂದೇ ಭಾರತ್ ಟ್ರೈನ್ ಬರುತ್ತಿರುವ ವೇಳೆಯಲ್ಲಿ ರಸ್ತೆ ದಾಟಲು ಹೋಗಿ, ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ನಡೆದಿರುವುದು, ಕೇರಳದ ತಿರೂರ್ ಎಂಬಲ್ಲಿ. ತಿರೂರು ರೈಲ್ವೆ ಸ್ಟೇಷನ್​​ನಲ್ಲಿ ಮಧ್ಯ ವಯಸ್ಸಿನ  ವ್ಯಕ್ತಿಯೊಬ್ಬ್ರು ಸರಿಸುಮಾರು ಸಂಜೆ 5 ಗಂಟೆಯ ವೇಳೆಯಲ್ಲಿ, ರೈಲು ಬರುವಂತಹ ಸಂದರ್ಭದಲ್ಲಿ ರೈಲ್ವೆ ಹಳಿ ದಾಟುವಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಘಟನೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಪ್ರವೀಶ್ ಶೊರನೂರ್ (@praveeshshoranurphotography) ಎಂಬವರು ಈ ವಿಡಿಯೋನ್ನು ತಮ್ಮ  ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಂದೇ ಭಾರತ್ ಟ್ರೈನ್ ಬರುತ್ತಿರುವ ವೇಳೆಯಲ್ಲಿ, ರೈಲ್ವೆ ಹಳಿ ದಾಟಲು ಹೋಗಿ ವ್ಯಕ್ತಿಯೊಬ್ಬರು ಕೂದಲೆಳೆಯುವ ಅಂತರದಲ್ಲಿ ಅಪಘಾತದಿಂದ ಪಾರಾಗುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

ವಿಡಿಯೋದಲ್ಲಿ  ತಿರೂರ್ ರೈಲ್ವೆ ಫ್ಲಾಟ್ಫಾರ್ಮ್ಗೆ ವಂದೇ ಭಾರತ್ ಟ್ರೈನ್ ವೇಗವಾಗಿ ಆಗಮಿಸುತ್ತಿರುತ್ತೆ, ಆ ಸಂದರ್ಭದಲ್ಲಿ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ತರಾತುರಿಯಲ್ಲಿ ರೈಲ್ವೆ ಹಳಿಯನ್ನು ದಾಟಿದ್ದಾರೆ, ದೇವರ ದಯೆಯಿಂದ ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಆ ವ್ಯಕ್ತಿ ಪಾರಾಗುವ ದೃಶ್ಯವನನು ಕಾಣಬಹುದು.

ಇದನ್ನೂ ಓದಿ: ಕೆಲಸಗಾರರು ಬೇಕಾಗಿದ್ದಾರೆ; ಕಾಫಿ ಕೊಯ್ಲು ಮಾಡುವ ಕಾರ್ಮಿಕರಿಗೆ ಭರ್ಜರಿ ಆಫರ್ ನೀಡಿದ ಕೂಡಗಿನಲ್ಲಿ ಕಾಫಿ ಬೆಳೆಗಾರ

ನವೆಂಬರ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ  5.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಅನೇಕರು ಆ ವ್ಯಕ್ತಿಗೆ ಅಷ್ಟು ಅರ್ಜೆಂಟ್ ಆಗಿ ರೈಲ್ವೆ ಹಳಿ ದಾಟುವಂತಹದ್ದು ಏನಿದೆ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು