Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಗಮನಿಸಿ ಕೆಲಸಗಾರರು ಬೇಕಾಗಿದ್ದಾರೆ, ಸೂಪರ್​​ ಆಫರ್ ಕೂಡ ಇದೆ

ಕೊಡಗಿನಲ್ಲಿ ಕಾಫಿ ಕೊಯ್ಲು ಮಾಡಲು ಕೂಡಾ ಕೆಲಸಗಾರರು ಸಿಗುತ್ತಿಲ್ಲವಂತೆ, ಅದಕ್ಕಾಗಿ ಕಾಫಿ ಬೆಳೆಗಾರರೊಬ್ಬರು, ಕಾಫಿ ಕೊಯ್ಲು ಮಾಡಲು ಬರುವ   ದಿನಗೂಲಿ ಕಾರ್ಮಿಕರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಅಷ್ಟಕ್ಕೂ ಒಂದು ದಿನದ ಕೂಲಿ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ.

ಇಲ್ಲಿ ಗಮನಿಸಿ ಕೆಲಸಗಾರರು ಬೇಕಾಗಿದ್ದಾರೆ, ಸೂಪರ್​​ ಆಫರ್ ಕೂಡ ಇದೆ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 24, 2024 | 2:20 PM

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರೂ ದಿನಗೂಲಿ ಕೆಲಸಗಾರರ ಕೊರತೆ ಎದ್ದು ಕಾಣುತ್ತಿದೆ. ಯಾರು ನೋಡಿದ್ರೂ,  ನಾನು ಹೆಚ್ಚು ಹಣ ಕೊಡ್ತೀನಿ ಅಂದ್ರೂ ತೋಟಕ್ಕೆ ಗೊಬ್ಬರ ಹಾಕಲು, ಅಡಿಕೆ ಕೀಳಲು ಇತ್ಯಾದಿ  ದಿನಗೂಲಿ ಕೆಲಸಗಳಿಗೆ ಕಾರ್ಮಿಕರೆ ಸಿಗ್ತಿಲ್ಲ,  ಇದೊಳ್ಳೆ ತಲೆ ಬಿಸಿಯಾಗಿದೆ ಕಣ್ರಿ ಅಂತ ಹೇಳ್ತಿರ್ತಾರೆ. ಅದೇ ರೀತಿ ಇಲ್ಲೊಬ್ಬರು ಕೊಡಗಿನ ಕಾಫಿ ಬೆಳೆಗಾರ ಕೂಡಾ, ಕಾಫಿ ಕೊಯ್ಲಿಗೆ   ಕೆಲಸಗಾರರು ಸಿಗದೆ ಕಂಗಾಲಾಗಿದ್ದಾರೆ. ಹೌದು ಇದೀಗ ಕಾಫಿ ಕೊಯ್ಲಿನ ಕೆಲಸ ಆರಂಭವಾಗಿದ್ದು, ಆದ್ರೆ ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಸಿಗುತ್ತಿಲ್ಲ, ಸರಿಯಾದ ಸಮಯಕ್ಕೆ ಕೊಯ್ಲು ಮಾಡದಿದ್ರೆ, ಕಾಫಿ ಹಣ್ಣುಗಳು ಸಹ ಉದುರಿ ಹೋಗುತ್ತವೆ, ಅದಕ್ಕಾಗಿ ಸರಿಯಾದ ಸಮಯಕ್ಕೆ ಕೊಯ್ಲು ಮಾಡಬೇಕು, ಆದ್ರೆ ಹೆಚ್ಚು ಸಂಬಳ ಕೊಡ್ತೀವಿ ಅಂದ್ರೂ ಕೆಲಸಗಾರರೇ ಸಿಗುತ್ತಿಲ್ವೇ ಅಂತ ಚಿಂತೆಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಮಿಕರನ್ನು ಆಕರ್ಷಿಸಲು ಹೆಚ್ಚು ಸಂಬಳ ನೀಡುತ್ತೇವೆ ಅನ್ನೋ ವಿನೂತನ ಜಾಹಿರಾತೊಂದನ್ನು ನೀಡಿದ್ದಾರೆ. ಈ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

@KodaguConnect ಎಂಬ X ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು, “ಕೂಲಿ ಹೆಚ್ಚಿದ್ದರೂ ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಈ ಸಮಯದಲ್ಲಿ ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಈ ಪರಿಸ್ಥಿತಿ ಹದಗೆಡುತ್ತಿದ್ದಂತೆ, ಕೊಡಗಿನ ಕಾಫಿ ಬೆಳೆಗಾರರೊಬ್ಬರು  ವಿನೂತನ ಜಾಹಿರಾತು ನೀಡಿ ಕಾರ್ಮಿಕರನ್ನು ಸೆಳೆಯುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಈ ವೈರಲ್ ಫೋಟೋದಲ್ಲಿ ಕಾಫಿ ಬೆಳೆಗಾರರೊಬ್ಬರು, ಕಾರ್ಮಿಕರನ್ನು ಕೆಲಸಕ್ಕೆ ಬರುವಂತೆ ಮಾಡಲು ವಿನೂತನ ಜಾಹಿರಾತನ್ನು ನೀಡಿದ್ದಾರೆ. ಆ ಚಿತ್ರದಲ್ಲಿ  ಅವರು ಕೈಯಲ್ಲಿ ಪೋಸ್ಟರ್ ಒಂದನ್ನು ಹಿಡಿದಿದ್ದಾರೆ, ಆ ಪೋಸ್ಟರ್ ಅಲ್ಲಿ ʼಕೆಲಸಗಾರರು ಬೇಕಾಗಿದ್ದಾರೆ! ರೊಬೆಸ್ಟಾ ಕಾಫಿ ಕೊಯ್ಲು- ಕೆ.ಜಿ ಗೆ 4.22 ರೂ. ಮಹಿಳಾ ಕಾರ್ಮಿಕರ ದಿನದ ವೇತನ 415+OT ಪುರುಷ ಕಾರ್ಮಿಕರ ದಿನದ ವೇತನ 615+OT ʼ ಭರ್ಜರಿ ವೇತನದ ಆಫರ್ ಬಗ್ಗೆ ಬರೆದಿದ್ದಾರೆ.

ಇದನ್ನೂ ಓದಿ: ಅಮ್ಮನ ಮಡಿಲು ಸೇರಿದ ಕಂದಮ್ಮ, ಆನೆಗಳ ಭಾವನಾತ್ಮಕ ಚಿತ್ರ ಹೇಗಿದೆ? ನೋಡಿ 

ಈ ವಿಶಿಷ್ಟ ಜಾಹಿರಾತಿನ ಕುರಿತ ಫೊಸ್ಟ್ ಇದೀಗ ವೈರಲ್ ಆಗಿದ್ದು,  71 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.  ಹಾಗೂ ಹಲವಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಾಫಿ ಕೊಯ್ಲು ಕೆಲಸವನ್ನು ಸ್ಟ್ರೆಸ್ಟ್ ಬಸ್ಟರ್ ಎಂದು ಪ್ರಚಾರ ಮಾಡಿ, ಆಗ ನಗರದಲ್ಲಿರುವವರೆಲ್ಲರೂ ಬಂದು ಉಚಿತವಾಗಿ ಈ ಕೆಲಸವನ್ನು ಮಾಡುತ್ತಾರೆʼ ಎಂದು ಹೊಸ ಐಡಿಯಾವನ್ನು ಹೇಳಿಕೊಟ್ಟಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಮಾನವ ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತಿದೆʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಜನರು ನಿರುದ್ಯೋಗ ಇದೆ ಅಂತಾ ಕಿರಿಚಾಡುತ್ತಾರೆ, ಆದ್ರೆ ಈ ರೀತಿ ಉತ್ತಮ ವೇತನವನ್ನು ನೀಡುವಾಗ ಯಾರು ಈ ಕೆಲಸಗಳಿಗೆ ಬರೊಲ್ಲʼ ಅಂತ ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ