Video Viral: ಹಸಿ ಮೆಣಸಿನ ಕಾಯಿ ಹಲ್ವಾ; ಹೇಗೆ ತಯಾರಿಸುತ್ತಿದ್ದಾರೆ ನೋಡಿ!
ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಫ್ಯಾಕ್ಟರಿಯೊಂದರಲ್ಲಿ ಮೆಣಸಿನಕಾಯಿಯನ್ನು ನುಣ್ಣಗೆ ಕತ್ತರಿಸಿ ಹಲ್ವಾ ತಯಾರಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹಲ್ವಾ ಪ್ರಿಯರು ಈ ವಿಡಿಯೋ ನೋಡಿದರೆ ಶಾಕ್ ಆಗುವುದಂತೂ ಖಂಡಿತಾ.
ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬಗ್ಗೆ ಅನೇಕ ಅಪಾಯಕಾರಿ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋ ನೋಡಿದಾಗ ಅಸಹ್ಯ ಅನಿಸುವುದು ಸಹಜ. ಇದೀಗ ಅಂತದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಹಲ್ವಾ ಪ್ರಿಯರು ಈ ವಿಡಿಯೋ ನೋಡಿದರೆ ಶಾಕ್ ಆಗುವುದಂತೂ ಖಂಡಿತಾ.
ಫ್ಯಾಕ್ಟರಿಯೊಂದರಲ್ಲಿ ಹಲ್ವಾ ತಯಾರಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.ಮೊದಲು ಹಸಿರು ಮೆಣಸಿನಕಾಯಿಯನ್ನು ನುಣ್ಣಗೆ ಕತ್ತರಿಸಲಾಗುತ್ತದೆ. ಇದರ ನಂತರ, ಮೆಣಸಿನಕಾಯಿಯನ್ನು ಕುಲುಮೆಯಲ್ಲಿ ಬಾಣಲೆಯಲ್ಲಿ ಹಾಕಲಾಗುತ್ತದೆ. ಅದರ ನಂತರ ಸಕ್ಕರೆ, ಹಸಿರು ಬಣ್ಣ, ಹಾಲು ಮತ್ತು ಅಂತಿಮವಾಗಿ ತೆಂಗಿನ ನೀರನ್ನು ಸೇರಿಸಲಾಗುತ್ತದೆ. ಇದನ್ನೆಲ್ಲ ಸೇರಿಸಿದ ನಂತರ ಹಲ್ವಾ ಬೇಯಿಸುತ್ತಾರೆ. ಇದರ ನಂತರ, ಅದು ಸಿದ್ಧವಾದಾಗ, ಅದನ್ನು ಅಚ್ಚಿನಲ್ಲಿ ಸುರಿದು, ಹಲ್ವಾ ರೀತಿಯಲ್ಲಿ ಕತ್ತರಿಸುವುದನ್ನು ಕಾಣಬಹುದು.
View this post on Instagram
ಇದನ್ನೂ ಓದಿ: ಭಿಕ್ಷಾಟನೆಯಿಂದಲೇ ತಿಂಗಳಿಗೆ 75 ಸಾವಿರ ರೂ. ಆದಾಯ ಗಳಿಸುವ ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕ
ಈ ವೀಡಿಯೊವನ್ನು @indian_street_food_5 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೇ 20ರಂದು ಹಂಚಿಕೊಂಡಿರುವ ವಿಡಿಯೋ ಕೇವಲ ನಾಲ್ಕು ದಿನದಲ್ಲಿ 10ಲಕ್ಷಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ 14 ಸಾವಿರಕ್ಕೂ ಹೆಚ್ಚಿನ ಜನರು ಲೈಕ್ ಮಾಡಿದ್ದಾರೆ. ಸಾಕಷ್ಟು ಹಲ್ವಾ ಪ್ರಿಯರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: