Richest Beggar: ಭಿಕ್ಷಾಟನೆಯಿಂದಲೇ ತಿಂಗಳಿಗೆ 75 ಸಾವಿರ ರೂ. ಆದಾಯ ಗಳಿಸುವ ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕ
'ಭಾರತದ ಶ್ರೀಮಂತ ಭಿಕ್ಷುಕ' ಎಂದೆ ಹೆಸರು ಗಳಿಸಿಕೊಂಡಿರುವ ಭರತ್ ಜೈನ್, ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿರುವ ಇವರು ಪುಣೆ ಹಾಗೂ ಮುಂಬೈನಲ್ಲಿ ಸ್ವಂತ ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೇ, ತನ್ನ ಮಕ್ಕಳನ್ನು ಮುಂಬೈನ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಕೋಟಿ ಕೋಟಿ ಹಣ, ಆಸ್ತಿ ಸಂಪಾದಿಸಿದ್ದರೂ ಕೂಡ ತನ್ನ ಭಿಕ್ಷಾಟನೆ ಮಾಡುವುದನ್ನು ಇನ್ನೂ ಬಿಟ್ಟಿಲ್ಲ.
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಭಿಕ್ಷೆ ಬೇಡುತ್ತಿರುವುದನ್ನು ಕಾಣಬಹುದು. ಆದರೆ ಅವರನ್ನು ಕಂಡಾಗ ಪಾಪ ಎರಡು ಹೊತ್ತಿನ ಊಟಕ್ಕೂ ಎಷ್ಟು ಕಷ್ಟಪಡುತ್ತಿದ್ದಾರೆ ಅಂತ ಅನಿಸುವುದು ಸಹಜ. ಹಾಗಂತ ನಮ್ಮಲ್ಲಿರುವ ದುಡ್ಡಿನಲ್ಲಿ 10 ಅಥವಾ 20 ರೂಪಾಯಿಯನ್ನು ಅವರು ತಟ್ಟೆಗೆ ಹಾಕಿ ಬರುವುದುಂಟು. ಆದರೆ ಇಲ್ಲೊಬ್ಬ ಭಿಕ್ಷುಕ ತನ್ನ ಭಿಕ್ಷಾಟನೆಯಿಂದಲೇ ಕೋಟಿ ಕೋಟಿ ಹಣ ಸಂಪಾದಿಸಿದ್ದಾನೆ. ಈ ಕೋಟ್ಯಾಧಿಪತಿ ಭಿಕ್ಷುಕನ ಹೆಸರು ಭರತ್ ಜೈನ್. ಆತನ ಒಟ್ಟು ಸಂಪತ್ತು ಏಳು ಕೋಟಿ ರೂಪಾಯಿ. ಮುಂಬೈನ ಪರಾಲ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಇವರು ಪುಣೆ ಹಾಗೂ ಮುಂಬೈನಲ್ಲಿ ಸ್ವಂತ ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೇ, ತನ್ನ ಮಕ್ಕಳನ್ನು ಮುಂಬೈನ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಭಿಕ್ಷಾಟನೆಯಿಂದ ತಿಂಗಳಿಗೆ 75 ಸಾವಿರ ರೂಪಾಯಿ ಸಂಪಾದಿಸುತ್ತಾರೆ. ಅಂದರೆ ಇವರ ವಾರ್ಷಿಕ ಆದಾಯ ರೂ.9 ಲಕ್ಷ.
ಕೋಟಿ ಕೋಟಿ ಹಣ, ಆಸ್ತಿ ಸಂಪಾದಿಸಿದ್ದರೂ ಕೂಡ ತನ್ನ ಭಿಕ್ಷಾಟನೆ ಮಾಡುವುದನ್ನು ಇನ್ನೂ ಬಿಟ್ಟಿಲ್ಲ. ಈಗಲೂ ಕೂಡ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾರೆ. ಇವರಿಗೆ ಪತ್ನಿ ಹಾಗು ಇಬ್ಬರು ಮಕ್ಕಳಿದ್ದಾರೆ. ಭರತ್ ಜೈನ್ 10 ರಿಂದ 12 ಗಂಟೆಗಳ ಒಳಗೆ ದಿನಕ್ಕೆ 2,000 ರಿಂದ 2,500 ರೂ. ಸಂಪಾದನೆ ಮಾಡುತ್ತಾರಂತೆ.
ಇದನ್ನೂ ಓದಿ: ಫ್ರೈಡ್ ಚಿಕನ್ ಖರೀದಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಂದ ಪತಿ
ಭರತ್ ಜೈನ್ ಅವರು ಮುಂಬೈನಲ್ಲಿ ಪ್ಯಾರಾಲ್‌ನಲ್ಲಿ 1.2 ಕೋಟಿ ರೂಪಾಯಿ ಮೌಲ್ಯದ 2BHK ಫ್ಲಾಟ್ ಹೊಂದಿದ್ದಾರೆ. ಇದಲ್ಲದೇ ಥಾಣೆಯಲ್ಲಿ ಅಂಗಡಿಯನ್ನು ಹೊಂದಿದ್ದಾರೆ. ಈ ಅಂಗಡಿಯಿಂದಲೇ ತಿಂಗಳಿಗೆ 30000 ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಆದಾಯ ಬರುವುದರಿಂದ ಅನೇಕ ಸಲ ಕುಟುಂಬಸ್ಥರು ಇನ್ನು ಭಿಕ್ಷೆಬೇಡುವುದು ಬೇಡ ಎಂದು ಹೇಳಿದರೂ ಕೂಡ ಭಿಕ್ಷಾಟನೆಯನ್ನು ಬಿಟ್ಟಿಲ್ಲ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕ ಎಂಬ ಹೆಸರು ಗಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: