Viral: ನೀರಿನೊಳಗೆ ಕಲಾವಿದನ ಅದ್ಭುತ ನೃತ್ಯ ಪ್ರದರ್ಶನ; ವಿಡಿಯೋ ವೈರಲ್
ನವರಾತ್ರಿ ಹಬ್ಬದ ಪ್ರಯುಕ್ತ ನೀರಿನೊಳಗೆ ಗುಜರಾತ್‍ನ ಸಾಂಪ್ರದಾಯಿಕ ಜಾನಪದ ನೃತ್ಯವಾದ ದಾಂಡಿಯಾ ನೃತ್ಯ ಮಾಡುತ್ತಿರುವ ಯುವಕ. ನೀರಿನೊಳಗೆ ಕಲಾವಿದನ ಅದ್ಭುತವಾಗಿ ನೃತ್ಯ ಪ್ರದರ್ಶನ ಕಂಡು ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ದಿನ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತದೆ. ಕಲಾವಿದರಿಗಂತೂ ಸೋಶಿಯಲ್ ಮೀಡಿಯಾ ತಮ್ಮ ಕಲೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆ. ಇದರಿಂದ ಸಾಕಷ್ಟು ಜನರು ತಮ್ಮ ನೃತ್ಯ, ಹಾಡುಗಾರಿಕೆ ಹೀಗೆ ನಾನಾ ವಿವಿಧ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿರುತ್ತಾರೆ. ಇದಲ್ಲದೇ ಪುಟ್ಟ ಮಕ್ಕಳ ಅಥವಾ ಪ್ರಾಣಿಗಳ ವಿಡಿಯೋಗಳು ಸಾಕಷ್ಟು ವೈರಲ್ ಆಗುವುದುಂಟು. ಇತ್ತೀಚಿಗಷ್ಟೇ ಅದ್ಭುತ ನೃತ್ಯ ಪ್ರದರ್ಶನ ನೆಟ್ಟಿಗರ ಮನ ಕದ್ದಿದ್ದು, ಇದೀಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಹೌದು ನೀರಿನೊಳಗೆ ಕಲಾವಿದನ ಅದ್ಭುತವಾಗಿ ನೃತ್ಯ ಪ್ರದರ್ಶನ ಕಂಡು ನೆಟ್ಟಿಗರು ಕಾಮೆಂಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.
ವಿಡಿಯೋವನ್ನು @hydroman_333 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೃತ್ಯಗಾರನ ಹೆಸರು ಜೈದೀಪ್ ಗೋಹಿಲ್. ನೀರಿನ ಒಳಗೆ ನೃತ್ಯ ಪ್ರದರ್ಶನ ಮಾಡುವುದು ಇದೇ ಮೊದಲೇನಲ್ಲಾ. ನೀರಿನೊಳಗೆ ನೃತ್ಯ ಮಾತ್ರವಲ್ಲ, ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಡುತ್ತಾನೆ. ಇದಲ್ಲದೇ ಸ್ಕೂಟರ್ ಓಡಿಸಿದ್ದಾನೆ. ಸಾಮಾನ್ಯರಿಗೆ ನೀರಿನೊಳಗೆ ಉಸಿರುಗಟ್ಟಿ ಹೋಗುತ್ತದೆ. ಆದರೆ ಈತ ನೀರಿನೊಳಗೆ ಇಷ್ಟೆಲ್ಲಾ ಸಾಹಸ ಮಾಡುವುದರಿಂದ ಇತನನ್ನು ಹೈಡ್ರೋಮ್ಯಾನ್ ಎಂದು ಕರೆಯಲಾಗುತ್ತದೆ.
View this post on Instagram
ಇದನ್ನೂ ಓದಿ: ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಹೋಗುವಂತೆ ಹೇಳಿದ ಶಿಕ್ಷಕಿ
ಜೈದೀಪ್ ಗೋಹಿಲ್ ನೀಲಿ ಬಣ್ಣದ ಡ್ರೆಸ್ ಧರಿಸಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಗುಜರಾತ್‍ನ ಸಾಂಪ್ರದಾಯಿಕ ಜಾನಪದ ನೃತ್ಯ ದಾಂಡಿಯಾ ಆಡುವುದನ್ನು ಕಾಣಬಹುದು. ನೀರಿನೊಳಗೆ ಕಲಾವಿದನ ಅದ್ಭುತವಾಗಿ ನೃತ್ಯ ಪ್ರದರ್ಶನ ಕಂಡು ನೆಟ್ಟಿಗರು ಕಾಮೆಂಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:58 pm, Sun, 22 October 23