Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಹೋಗುವಂತೆ ಹೇಳಿದ ಶಿಕ್ಷಕಿ

ಎರಡೇ ದಿನಗಳಲ್ಲಿ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗಾ 'ಜೈ ಶ್ರೀ ರಾಮ್' ಘೋಷಣೆ ಕೂಗದಂತೆ ತಡೆಹಿಡಿದು, ವಿದ್ಯಾರ್ಥಿಯನ್ನು ವೇದಿಕೆಯಿಂದ ಕೆಳಗಿಳಿಸಿದ್ದ ಇಬ್ಬರು ಪ್ರಧ್ಯಾಪಕರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ವೈರಲ್​​ ವಿಡಿಯೋ ಇಲ್ಲಿದೆ ನೋಡಿ.

Video Viral:  'ಜೈ ಶ್ರೀ ರಾಮ್' ಘೋಷಣೆ ಕೂಗಿದ ವಿದ್ಯಾರ್ಥಿಯನ್ನು ವೇದಿಕೆಯಿಂದ ಹೊರಹೋಗುವಂತೆ ಹೇಳಿದ ಶಿಕ್ಷಕಿ
Viral VideoImage Credit source: Twitter
Follow us
ಅಕ್ಷತಾ ವರ್ಕಾಡಿ
|

Updated on: Oct 22, 2023 | 1:11 PM

ಉತ್ತರ ಪ್ರದೇಶ: ಗಾಜಿಯಾಬಾದ್​ನ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ಉತ್ಸವದ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಸಹ ವಿದ್ಯಾರ್ಥಿಗಳ ‘ಜೈ ಶ್ರೀ ರಾಮ್’ ಘೋಷಣೆಗೆ ಪ್ರತಿಕ್ರಿಯಿಸಿದಕ್ಕೆ ವೇದಿಕೆಯ ಮೇಲಿದ್ದ ವಿದ್ಯಾರ್ಥಿಯನ್ನು ವೇದಿಕೆಯಿಂದ ಕೆಲ ಇಳಿಯುವಂತೆ ಶಿಕ್ಷಕಿಯೊಬ್ಬರು ಹೇಳಿದ್ದಾರೆ. ಈ ಎಲ್ಲಾ ಸನ್ನಿವೇಶಗಳನ್ನು ಮೊಬೈಲ್​​ನಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋವನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ಎರಡೇ ದಿನಗಳಲ್ಲಿ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗಾ ಘೋಷಣೆ ಕೂಗದಂತೆ ತಡೆಹಿಡಿದು, ವಿದ್ಯಾರ್ಥಿಯನ್ನು ವೇದಿಕೆಯಿಂದ ಕೆಳಗಿಳಿಸಿದ್ದ ಇಬ್ಬರು ಪ್ರಧ್ಯಾಪಕರನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೋದಲ್ಲಿ ವಿದ್ಯಾರ್ಥಿ ವೇದಿಕೆಯ ಮೆಟ್ಟಿಲು ಹತ್ತುತ್ತಿದ್ದಂತೆ ವೇದಿಕೆ ಕೆಳಭಾಗದಲ್ಲಿದ್ದ ವಿದ್ಯಾರ್ಥಿಗಳು ಒಟ್ಟಾಗಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿರುವುದನ್ನು ಕಾಣಬಹುದು. ಘೋಷಣೆ ಕೂಗುತ್ತಿದ್ದಂತೆ ವೇದಿಕೆಯ ಮೇಲಿದ್ದ ವಿದ್ಯಾರ್ಥಿ ಘೋಷಣೆಗೆ ಪ್ರತಿಕ್ರಿಯಿಸಿ ಮತ್ತೆ ‘ಜೈ ಶ್ರೀ ರಾಮ್’ ಎಂದು ಹೇಳಿದ್ದಾರೆ. ಅದಾಗಲೇ ಮಮತಾ ಗೌತಮ್ ಎಂದು ಗುರುತಿಸಲಾದ ಶಿಕ್ಷಕಿಯೊಬ್ಬರು “ಇದೊಂದು ಸಾಂಸ್ಕೃತಿಕ ಕಾರ್ಯಕ್ರಮ, ಇಂತಹ ಮಂತ್ರಘೋಷಗಳಿಗೆ ಅವಕಾಶವಿಲ್ಲ” ಎಂದು ಶಿಕ್ಷಕರು ಹಿಂದಿಯಲ್ಲಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ವಿದ್ಯಾರ್ಥಿಗೆ ವೇದಿಕೆಯಿಂದ ಕೆಳಗೆ ಇಳಿಯಲು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ದಿನಕ್ಕೆ 17,000 ರೂ ಬಾಡಿಗೆ ನೀಡಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ

ಸೋಶಿಯಲ್​ ಮೀಡಿಯಾಗಳಲ್ಲಿ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕಿಯ ಕ್ಷಮೆಯಾಚಿಸುವಂತೆ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಾಗಿದೆ. ಈ ಎಲ್ಲಾ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಮಮತಾ ಗೌತಮ್ ಮತ್ತು ಇನ್ನೊಬ್ಬ ಪ್ರಾಧ್ಯಾಪಕಿ ಶ್ವೇತಾ ಶರ್ಮಾ ಅವರನ್ನು ವಿದ್ಯಾರ್ಥಿಯನ್ನು ಘೋಷಣೆ ಕೂಗದಂತೆ ತಡೆಹಿಡಿದು, ವೇದಿಕೆಯಿಂದ ಹೊರಹೋಗುವಂತೆ ಹೇಳಿದಕ್ಕಾಗಿ ಅಮಾನತುಗೊಳಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: