AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ಅಪ್ಪಿತಪ್ಪಿಯು ಈ ಆಹಾರಗಳನ್ನು ಫ್ರೆಶರ್ ಕುಕ್ಕರ್​​ನಲ್ಲಿ ಬೇಯಿಸಬೇಡಿ

ಆಧುನಿಕತೆಗೆ ಒಗ್ಗಿಕೊಂಡಂತೆ ಮನುಷ್ಯನ ಎಲ್ಲಾ ಕೆಲಸಗಳು ಸುಲಭವಾಗಿದೆ. ಅದರಲ್ಲಿಯೂ ಮಹಿಳೆಯರ ಕೆಲಸವನ್ನು ಸುಲಭ ಮಾಡಲೆಂದೇ ಅಡುಗೆಗೆ ಬೇಕಾದ ಎಲ್ಲಾ ಸಾಧನಗಳು ಬಂದಿವೆ. ಹೀಗಾಗಿ ಹೆಚ್ಚಿನವರು ಅಡುಗೆಯನ್ನು ಫಟಾ ಫಟ್ ಎಂದು ಮಾಡಿ ಮುಗಿಸಲು ಫ್ರೆಶರ್ ಕುಕ್ಕರ್ ನಂತಹ ಸಾಧನಗಳನ್ನು ಬಳಸುವವರ ಸಂಖ್ಯೆಯು ಹೆಚ್ಚಾಗಿದೆ. ಆದರೆ ಈ ಕೆಲವು ಆಹಾರಗಳನ್ನು ಅಪ್ಪಿ ತಪ್ಪಿಯು ಫ್ರೆಶರ್ ಕುಕ್ಕರ್ ನಲ್ಲಿ ಬೇಯಿಸಲು ಹೋಗುವುದು ಒಳ್ಳೆಯದಲ್ಲ.

Kitchen Tips in Kannada : ಅಪ್ಪಿತಪ್ಪಿಯು ಈ ಆಹಾರಗಳನ್ನು ಫ್ರೆಶರ್ ಕುಕ್ಕರ್​​ನಲ್ಲಿ ಬೇಯಿಸಬೇಡಿ
ಸಾಯಿನಂದಾ
| Edited By: |

Updated on: May 22, 2024 | 3:36 PM

Share

ಉದ್ಯೋಗದಲ್ಲಿರುವ ಮಹಿಳೆಯರು ಮನೆ ಹಾಗೂ ಉದ್ಯೋಗವನ್ನು ಎರಡನ್ನು ನಿಭಾಯಿಸುವುದು ಕಷ್ಟ. ಬೆಳಗ್ಗೆ ಎದ್ದು ತಿಂಡಿ ಹಾಗೂ ಊಟವನ್ನು ರೆಡಿ ಮಾಡಿಕೊಂಡು ಆಫೀಸ್ ಹೋಗುವಷ್ಟರಲ್ಲಿ ಸುಸ್ತಾಗಿರುತ್ತದೆ. ಈ ಮಹಿಳೆಯರ ಕೆಲಸವನ್ನು ಸುಲಭವಾಗಿಸಿ ಸಮಯವನ್ನು ಉಳಿತಾಯ ಮಾಡುವಲ್ಲಿ ಈ ಫ್ರೆಶರ್ ಕುಕ್ಕರ್ ಪಾತ್ರ ಬಹುದೊಡ್ಡದು. ಆದರೆ ಆಹಾರವನ್ನು ಆರೋಗ್ಯಕರವಾಗಿ ಬೇಯಿಸಿ ಸೇವಿಸಿದರೆ ಮಾತ್ರ ಪೋಷಕಾಂಶಗಳು ದೇಹಕ್ಕೆ ಸಂಪೂರ್ಣವಾಗಿ ದೊರೆಯುತ್ತದೆ. ಹೀಗಾಗಿ ಈ ಕೆಲವು ಆಹಾರಗಳನ್ನು ಫ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವ ಸಾಹಸವಂತೂ ಮಾಡುವುದು ಆರೋಗ್ಯಕ್ಕೆ ಹಿತವಲ್ಲ.

  • ಫ್ರೆಶರ್ ಕುಕ್ಕರ್ ನಲ್ಲಿ ಹೆಚ್ಚಿನವರು ಅನ್ನವನ್ನು ಮಾಡುತ್ತಾರೆ. ಆದರೆ ಅಕ್ಕಿ ತೊಳೆದು ಕುಕ್ಕರ್‌ನಲ್ಲಿಟ್ಟರೆ ಕ್ಷಣಾರ್ಧದಲ್ಲಿ ಅನ್ನವಾಗಿ ಬಿಡುತ್ತದೆ. ಆದರೆ ಈ ಕುಕ್ಕರ್ ನಲ್ಲಿ ಅನ್ನ ಮಾಡುವುದರಿಂದ ಅನ್ನದಲ್ಲಿರುವ ಸ್ಟಾರ್ಚ್‌ ಅಲ್ಲೇ ಇಂಗುತ್ತದೆ. ಇದು ದೇಹದ ಮೇಲೆ ನಾನಾ ರೀತಿಯ ಪರಿಣಾಮಗಳನ್ನು ಬೀರುವ ಸಾಧ್ಯತೆಯೇ ಅಧಿಕವಾಗಿದೆ.
  • ಪಾಸ್ತಾವನ್ನು ಕೂಡಾ ಕುಕ್ಕರ್‌ ಒಳಗಿಟ್ಟು ಬೇಯಿಸಬೇಡಿ. ಇದರಲ್ಲಿ ಸ್ಟಾರ್ಚ್‌ ಹೆಚ್ಚಿದ್ದು, ಅಲ್ಲೇ ಇಂಗಿ ಹೋಗುತ್ತದೆ. ಕುಕ್ಕರ್ ನಲ್ಲಿ ಬೇಯಿಸಿದ ಈ ಆಹಾರವನ್ನು ತಿಂದರೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯೇ ಅಧಿಕವಾಗಿದೆ.
  • ಕುಕ್ಕರ್ ನಲ್ಲಿ ಆಲೂಗಡ್ಡೆ ಇಟ್ಟರೆ ಕೆಲವೇ ಕೆಲವು ನಿಮಿಷಗಳಲ್ಲಿ ಬೇಯುತ್ತದೆ. ಆದರೆ ಈ ಆಲೂಗಡ್ಡೆಯಲ್ಲೂ ಸ್ಟಾರ್ಚ್‌ ಇರುವುದರಿಂದ ಇದನ್ನು ಕುಕ್ಕರ್‌ನಲ್ಲಿಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
  • ಕುಕ್ಕರ್‌ನಲ್ಲಿ ಡೈರಿ ಉತ್ಪನ್ನಗಳನ್ನು ಬೇಯಿಸುವುದು ಒಳ್ಳೆಯದಲ್ಲ. ಈ ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಕಡಿಮೆ ಸಮಯದಲ್ಲಿ ಬಿಸಿಯಾಗುತ್ತವೆ. ಹೀಗಾಗಿ ಇದನ್ನು ಕುಕ್ಕರ್ ನಲ್ಲಿ ಬೇಯಿಸಬಾರದು.
  • ಮೀನನ್ನು ಕುಕ್ಕರಿನಲ್ಲಿ ಬೇಯಿಸುವುದರಿಂದ ಹೆಚ್ಚು ಬೆಂದು ಹೋಗುವ ಸಾಧ್ಯತೆಯೇ ಹೆಚ್ಚು. ಈ ಮೀನಿನಲ್ಲಿರುವ ಅಗತ್ಯ ಪೋಷಕಾಂಶಗಳು ನಷ್ಟವಾಗುತ್ತದೆ. ಹೀಗಾಗಿ ಮೀನನ್ನು ಬೇಯಿಸಲು ಕುಕ್ಕರ್ ಬದಲು ಪಾತ್ರೆಯನ್ನು ಬಳಸುವುದು ಉತ್ತಮ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು