WhatsApp: ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್​ನಲ್ಲಿ ಹೊಸ ಆಯ್ಕೆ: ಆ ಅಚ್ಚರಿಯ ಫೀಚರ್ ಏನು ಗೊತ್ತೇ?

| Updated By: Vinay Bhat

Updated on: Oct 22, 2021 | 3:27 PM

WhatsApp Voice Message: ವಾಟ್ಸ್​ಆ್ಯಪ್​ನ ಈ ಹೊಸ ಅಪ್ಡೇಟ್​ನಲ್ಲಿ ನೀವು ವಾಯ್ಸ್ ಮೆಸೇಜ್ ಹೇಳಿ ಕಳುಹಿಸುವ ಮುನ್ನ ಕೇಳಲು ಅವಕಾಶ ಮಾಡಿಕೊಡುತ್ತದೆ. ಸದ್ಯದಲ್ಲೇ ಈ ಫೀಚರ್ ಬಳಕೆದಾರರಿಗೆ ಸಿಗಲಿದೆಯಂತೆ.

WhatsApp: ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್​ನಲ್ಲಿ ಹೊಸ ಆಯ್ಕೆ: ಆ ಅಚ್ಚರಿಯ ಫೀಚರ್ ಏನು ಗೊತ್ತೇ?
WhatsApp Voice Message
Follow us on

ತನ್ನ ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ (WhatsApp) ಮೆಸೇಜಿಂಗ್ ಅಪ್ಲಿಕೇಶನ್​ ಮುಂದಿನ ದಿನಗಳಲ್ಲಿ ಸಾಲು ಸಾಲು ಅಪ್ಡೇಟ್​ಗಳನ್ನು ನೀಡಲು ಸಜ್ಜಾಗಿದೆ. ಈಗಾಗಲೇ ವಾಟ್ಸ್​ಆ್ಯಪ್​ನಲ್ಲೇ ಫೋಟೋ ಎಡಿಟಿಂಗ್, ಲಾಗೌಟ್ ಫೀಚರ್, ಸ್ಟೇಟಸ್​ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ  ಹೀಗೆ ಅನೇಕ ಹೊಸ ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ವಾಟ್ಸ್​ಆ್ಯಪ್ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಆಯ್ಕೆ ನೀಡಲು ಮುಂದಾಗಿದೆ. ಅದುವೇ ವಾಟ್ಸ್​ಆ್ಯಪ್​ ವಾಯ್ಸ್ ಮೆಸೇಜ್ (WhatsApp Voice Message) ಅನ್ನು ಕಳಿಹಿಸುವ ಮುನ್ನ ಕೇಳುವ ಆಯ್ಕೆ.

ಹೌದು, ವಾಟ್ಸ್​ಆ್ಯಪ್​ನಲ್ಲಿ ಈಗೀಗ ವಾಯ್ಸ್ ನೋಟ್ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್ ಪ್ರಿಯರಿಗಾಗಿ ಹೊಸ ಈ ಆಯ್ಕೆ ನೀಡುತ್ತಿದೆ. ಈ ಹೊಸ ಅಪ್ಡೇಟ್​ನಲ್ಲಿ ನೀವು ವಾಯ್ಸ್ ಮೆಸೇಜ್ ಹೇಳಿ ಕಳುಹಿಸುವ ಮುನ್ನ ಕೇಳಲು ಅವಕಾಶ ಮಾಡಿಕೊಡುತ್ತದೆ. ಸದ್ಯದಲ್ಲೇ ಈ ಫೀಚರ್ ಬಳಕೆದಾರರಿಗೆ ಸಿಗಲಿದೆಯಂತೆ.

ಇದರ ಜೊತೆಗೆ ನೀವು ವಾಯ್ಸ್ ಮೆಸೇಜ್ ಕಳುಹಿಸುವಾಗ ಪಾಜ಼್ (Pause) ಮಾಡುವ ಆಯ್ಕೆ ನೀಡುವ ಫೀಚರ್ ಬಗ್ಗೆಯೂ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಅಂದರೆ ನೀವು ವಾಯ್ಸ್ ರೆಕಾರ್ಡಿಂಗ್ ಬಟನ್ ಪ್ರೆಸ್ ಮಾಡಿ ಅರ್ಧದಲ್ಲಿ ವಿರಾಮ ಪಡೆದು ನಂತರ ಅದನ್ನು ಮುಂದುವರೆಸಿ ಕಳುಹಿಸಬಹುದು.

ಸದ್ಯ ಈ ಹೊಸ ಆಯ್ಕೆ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಸ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಇದರ ಜೊತೆಗೆ ವಾಟ್ಸ್​ಆ್ಯಪ್ ಮತ್ತೊಂದು ಅಪ್ಡೇಟ್ ನೀಡಲು ಮುಂದಾಗಿದೆ. ಅದುವೇ ವಾಯ್ಸ್ ಟ್ರಾನ್ಸ್​​ಕ್ರಿಪ್ಶನ್ ಫೀಚರ್. ವಾಬೇಟಾ ಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸ್​ಕ್ರಿಪ್ಶನ್ ಎಂಬ ಫೀಚರ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ವೈಶಿಷ್ಟ್ಯವು ಹೊಸತನದಿಂದ ಕೂಡಿದೆ ಎಂದಿದೆ.

ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್​ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ. ಅಂದರೆ ಈ ಫೀಚರ್ ಟ್ರಾನ್ಸ್​ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ. ವಾಟ್ಸ್ಆ್ಯಪ್ ಕ್ಯಾಮೆರಾ, ಮೈಕ್ರೋಫೋನ್​ಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮತಿ ಕೇಳುತ್ತದೆ.

ಮಾಹಿತಿ ಪ್ರಕಾರ ವಾಟ್ಸ್ಆ್ಯಪ್ ಬಳಕೆದಾರರ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಅನ್ನು ಫೇಸ್​ಬುಕ್ ಸರ್ವರ್​ಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ. ಕೇವಲ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವಲ್ಲದೆ ಐಫೊನ್ ಬಳಕೆದಾರರಿಗೂ ಈ ಸೇವೆ ಸಿಗಲಿದೆ. ಧ್ವನಿ ಸಂದೇಶ ಲಿಪ್ಯಾಂತರ ಮಾಡುವುದು, ಭಾಷಣವನ್ನು ಗುರುತಿಸುವ ಸೇವೆಯನ್ನು ಒದಗಿಸಲಿದೆ. ಇದು ಬಳಕೆದಾರರಿಗೆ ಹೆಚ್ಚು ಸಹಾಯಕವಾಗಲಿದೆ.

Xiaomi: ಭಾರತದಲ್ಲಿ ಮತ್ತೆ ಪರಾಕ್ರಮ ಮೆರೆದ ಶವೋಮಿ: ನಂಬರ್ ಒನ್ ಸ್ಮಾರ್ಟ್​ಫೋನ್ ಸ್ಥಾನ ಭದ್ರ

WhatsApp: ಇನ್ನು ಕೇವಲ 10 ದಿನ: ಈ ಸ್ಮಾರ್ಟ್​ಫೋನ್​ಗಳಲ್ಲಿ ಬಂದ್ ಆಗಲಿದೆ ವಾಟ್ಸ್​ಆ್ಯಪ್

(WhatsApp has added some new updates to the voice messages feature on the app)