Xiaomi: ಭಾರತದಲ್ಲಿ ಮತ್ತೆ ಪರಾಕ್ರಮ ಮೆರೆದ ಶವೋಮಿ: ನಂಬರ್ ಒನ್ ಸ್ಮಾರ್ಟ್ಫೋನ್ ಸ್ಥಾನ ಭದ್ರ
Number One Smartphone Brand: ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶವೋಮಿ ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಆಗಿ ತನ್ನ ಸ್ಥಾನವನ್ನು ಈಬಾರಿಯೂ ಆಕ್ರಮಿಸಿಕೊಂಡಿದೆ. ಕಳೆದ ಬಾರಿ ಭಾರತದಲ್ಲಿ ಶೇ. 28 ರಷ್ಟು ಮಾರ್ಕೆಟ್ ಅನ್ನು ಶವೋಮಿ ಹೊಂದಿತ್ತು.
ಭಾರತದ ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆ ಇಂದು ಹಿಂದಿಗಿಂತಲೂ ಸಾಕಷ್ಟು ವಿಸ್ತಾರವಾಗಿದೆ. ಇದಕ್ಕೆ ಪ್ರಮುಖ ಕಾರಣ ಚೀನಾ ಮೊಬೈಲ್ಗಳ (China Mobile) ಹಾವಳಿ ಎಂದರೆ ತಪ್ಪಾಗಲಾರದು. ಈಗಂತು ಭಾರದಲ್ಲಿ ವಾರಕ್ಕೆ ಕಡಿಮೆ ಎಂದರೂ ನಾಲ್ಕರಿಂದ ಐದು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತವೆ. ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಮೊಬೈಲ್ಗಳಿಗೂ ಎಲ್ಲಿಲ್ಲದ ಬೇಡಿಕೆ. ಸದ್ಯ ಭಾರತದಲ್ಲಿ 2021ರ ಮೂರನೇ ಅವಧಿ ವೇಳೆಗೆ ಅತಿ ಹೆಚ್ಚು ಸೇಲ್ ಕಂಡು ನಂಬರ್ ಒನ್ ಸ್ಥಾನದಲ್ಲಿರುವ ಸ್ಮಾರ್ಟ್ಫೋನ್ ಬ್ರ್ಯಾಂಡ್ ಯಾವುದು ಎಂಬ ವಿಚಾರ ಬಹಿರಂಗಿದ್ದು, ಶವೋಮಿ (Xiaomi) ಮತ್ತೆ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಹೌದು, ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶವೋಮಿ ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಆಗಿ ತನ್ನ ಸ್ಥಾನವನ್ನು ಈಬಾರಿಯೂ ಆಕ್ರಮಿಸಿಕೊಂಡಿದೆ. ಕಳೆದ ಬಾರಿ ಭಾರತದಲ್ಲಿ ಶೇ. 28 ರಷ್ಟು ಮಾರ್ಕೆಟ್ ಅನ್ನು ಶವೋಮಿ ಹೊಂದಿತ್ತು. ಇದು ಸದ್ಯ ಮೂರನೇ ಕ್ವಾರ್ಟರ್ ವೇಳೆಗೆ ಶೇ. 47 ರಷ್ಟು ಏರಿಕೆಯಾಗಿದೆ. ಹೀಗಾಗಿ ಸ್ಯಾಮ್ಸಂಗ್, ವಿವೋ, ರಿಯಲ್ ಮಿ ಮತ್ತು ಒಪ್ಪೋಗಳನ್ನು ಹಿಂದಿಕ್ಕಿ ಶವೋಮಿ ಮತ್ತೆ ನಂಬರ್ ಒನ್ ಪಟ್ಟಕ್ಕೇರಿದೆ.
ಶವೋಮಿ ಕಂಪೆನಿಯ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೊನ್ಗಳು ಭಾರತದಲ್ಲಿ ಅತಿ ಹೆಚ್ಚಿ ಮಾರಾಟವಾಗುತ್ತಿದೆ. ಅಲ್ಲದೆ ಈ ಬಾರಿ ಕೇವಲ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಮಾತ್ರವಲ್ಲದೆ ಎಂಐ 11 ಸರಣಿಯಲ್ಲಿ ದುಬಾರಿ ಬೆಲೆಯ ಮೊಬೈಲ್ಗಳನ್ನೂ ಬಿಡುಗಡೆ ಮಾಡಿತ್ತು.
ಸ್ಯಾಮ್ಸಂಗ್ ಕಂಪನಿ ಎರಡನೇ ಸ್ಥಾನದಲ್ಲಿದ್ದು, 9.1 ಮಿಲಿಯನ್ ಯುನಿಟ್ ಸೇಲ್ ಆಗಿದೆಯಂತೆ. ಇದರಲ್ಲಿ ಶೇ. 19 ರಷ್ಟನ್ನು ಭಾರತದಲ್ಲಿ ಸೇಲ್ ಮಾಡಿದೆ. ಮುಂದಿನ ಸ್ಥಾನದಲ್ಲಿ ವಿವೋ, ರಿಯಲ್ ಮಿ ಮತ್ತು ಒಪ್ಪೋ ಬ್ರ್ಯಾಂಡ್ ಸ್ಥಾನ ಪಡೆದುಕೊಂಡಿದೆ. ಕಳೆದ ಕ್ವಾರ್ಟರ್ನಲ್ಲಿ ಸ್ಯಾಮ್ಸಂಗ್ನ ಗ್ಯಾಲಕ್ಸಿ M ಸರಣಿ ಮತ್ತು F ಸರಣಿಯ ಫೋನ್ ಕೂಡ ಭರ್ಜರಿ ಸೇಲ್ ಕಂಡಿವೆ.
ವಿವೋ ಮೂರನೇ ಕ್ವಾರ್ಟರ್ನಲ್ಲಿ 8.1 ಮಿಲಿಯನ್ ಸ್ಮಾರ್ಟ್ಫೋನ್ ಅನ್ನು ಶಿಪ್ ಮಾಡಿದೆ. ರಿಯಲ್ ಮಿ 7.5 ಮಿಲಿಮಿಯರ್ ಸ್ಮಾರ್ಟ್ಫೋನ್ ಮತ್ತು ಒಪ್ಪೊ 6.2 ಮಿಲಿಯನ್ ಸ್ಮಾರ್ಟ್ಫೋನ್ ಮಾರಾಟ ಕಂಡಿದೆಯಂತೆ.
ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಆಫ್ಲೈನ್ ಸ್ಟೋರ್ಗಳಲ್ಲಿ ಮಾರಾಟ ಕಡಿಮೆ ಆಗಿದ್ದು ಆನ್ಲೈನ್ನಲ್ಲೇ ಅತಿ ಹೆಚ್ಚು ಖರೀದಿ ಮಾಡಿದ್ದಾರಂತೆ. ಪ್ರಮುಖವಾಗಿ ಶವೋಮಿ ಇಷ್ಟರ ಮಟ್ಟಿಗೆ ಯಶಸ್ಸು ಕಾಣಲು ಕಾರಣ ಇದು ಬಿಡುಗಡೆ ಮಾಡಿದ್ದ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್ಫೋನ್ಗಳು ಎಂದು ಹೇಳಲಾಗಿದೆ. ಟಾಪ್ 5 ಮೊಬೈಲ್ಗಳ ಪೈಕಿ ಮೊದಲ 4 ಸ್ಥಾನದಲ್ಲಿ ರೆಡ್ಮಿಯೇ ಇವೆ. ಅವುಗಳು ರೆಡ್ಮಿ 9A, ರೆಡ್ಮಿ 9 ಪವರ್, ರೆಡ್ಮಿ ನೋಟ್ 10 ಮತ್ತು ರೆಡ್ಮಿ 9 ಆಗಿವೆ. ಇದರಲ್ಲಿ ರೆಡ್ಮಿ 9A ಅತಿ ಹೆಚ್ಚು ಸೇಲ್ ಕಂಡ ಸ್ಮಾರ್ಟ್ಫೋನ್ ಆಗಿದೆ.
ಉಳಿದಂತೆ ಸ್ಯಾಮ್ಸಂಗ್, ವಿವೋ, ರಿಯಲ್ ಮಿ ಕಂಪೆನಿ ಭಾರತದಲ್ಲಿ ತನ್ನ ಬ್ರ್ಯಾಂಡ್ ಅನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಷ್ಟೊಂದು ಉತ್ತಮವಾಗಿ ಗುರುತಿಸಿಕೊಂಡಿಲ್ಲ. ಸ್ಯಾಮ್ಸಂಗ್ 2020 ರಲ್ಲಿ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿತ್ತು.
WhatsApp: ಇನ್ನು ಕೇವಲ 10 ದಿನ: ಈ ಸ್ಮಾರ್ಟ್ಫೋನ್ಗಳಲ್ಲಿ ಬಂದ್ ಆಗಲಿದೆ ವಾಟ್ಸ್ಆ್ಯಪ್
Nokia C30: ಭಾರತದಲ್ಲಿ 6000mAh ಬ್ಯಾಟರಿಯ ನೋಕಿಯಾ C30 ಸ್ಮಾರ್ಟ್ಫೋನ್ ಬಿಡುಗಡೆ: ಕಡಿಮೆ ಬೆಲೆ
(Xiaomi continues to top the Indian smartphone market Samsung grabbed the next spots)
Published On - 2:15 pm, Fri, 22 October 21