Nokia C30: ಭಾರತದಲ್ಲಿ 6000mAh ಬ್ಯಾಟರಿಯ ನೋಕಿಯಾ C30 ಸ್ಮಾರ್ಟ್​ಫೋನ್ ಬಿಡುಗಡೆ: ಕಡಿಮೆ ಬೆಲೆ

ಭಾರತದಲ್ಲಿ ನೋಕಿಯಾ ಸಿ30 (Nokia C30) ಸ್ಮಾರ್ಟ್‌ಫೋನ್ ಅನಾವರಣಗೊಂಡಿದೆ. 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯೇ ಈ ಫೋನಿನ ಪ್ರಮುಖ ಹೈಲೇಟ್.

Nokia C30: ಭಾರತದಲ್ಲಿ 6000mAh ಬ್ಯಾಟರಿಯ ನೋಕಿಯಾ C30 ಸ್ಮಾರ್ಟ್​ಫೋನ್ ಬಿಡುಗಡೆ: ಕಡಿಮೆ ಬೆಲೆ
Nokia C30
Follow us
| Updated By: Vinay Bhat

Updated on: Oct 21, 2021 | 3:13 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆ ಇಂದು ತುಂಬಾನೆ ವಿಶಾಲವಾಗಿದೆ. ಶವೋಮಿ (Xiaomi), ಸ್ಯಾಮ್​ಸಂಗ್ (Samsung), ರಿಯಲ್ ಮಿ (Realme), ಒಪ್ಪೋ (Oppo) ಹೀಗೆ ಅನೇಕ ಬ್ರ್ಯಾಂಡ್​ಗಳು ಹುಟ್ಟುಕೊಂಡಿದ್ದು ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿವೆ. ಚೀನಾ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳ ನಡುವೆ ತನ್ನದೇ ಆದ ವಿಶೇಷ ಸ್ಥಾನ ಉಳಿಸಿಕೊಂಡಿರುವ ನೋಕಿಯಾ (Nokia) ಕಂಪನಿ ಸದ್ಯ ಬಜೆಟ್ ಬೆಲೆಗೆ ಹೊಸ ಮೊಬೈಲ್ (Mobile) ಬಿಡುಗಡೆ ಮಾಡಿದೆ. ಹೌದು, ಭಾರತದಲ್ಲಿ ನೋಕಿಯಾ ಸಿ30 (Nokia C30) ಸ್ಮಾರ್ಟ್‌ಫೋನ್ ಅನಾವರಣಗೊಂಡಿದೆ. 6000mAh ಸಾಮರ್ಥ್ಯದ ಬಿಗ್ ಬ್ಯಾಟರಿಯೇ ಈ ಫೋನಿನ ಪ್ರಮುಖ ಹೈಲೇಟ್.

ನೋಕಿಯಾ C30 ಸ್ಮಾರ್ಟ್‌ಫೋನ್‌ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. 3GB RAM ಮತ್ತು 32GB ಆಯ್ಕೆಯ ಬೆಲೆ 10,999 ರೂ. ಆಗಿದೆ. ಅಂತೆಯೆ 4GB RAM ಮತ್ತು 64GB ಸ್ಟೋರೆಜ್ ಮಾದರಿಗೆ 11,999 ರೂ. ಅನ್ನು ನಿಗದಿ ಮಾಡಲಾಗಿದೆ. ಈ ಫೋನ್‌ನ ಎಲ್ಲಾ ಮಾದರಿಗಳು ಗ್ರೀನ್ ಮತ್ತು ವೈಟ್ ಸೇರಿದಂತೆ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತವೆ.

ನೋಕಿಯಾ C30 ಸ್ಮಾರ್ಟ್‌ಫೋನ್‌ 1600 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.82 ಇಂಚಿನ ಎಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಅನಿರ್ದಿಷ್ಟ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ 1.6GHz ನಲ್ಲಿ ನಾಲ್ಕು A55 ಕೋರ್ ಮತ್ತು 1.2GHz ನಲ್ಲಿ ನಾಲ್ಕು A55 ಕೋರ್‌ಗಳನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಗೋ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎಲ್ಇಡಿ ಫ್ಲ್ಯಾಷ್ ಹಾಗೂ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬಲಿಷ್ಠ 6,000mAh ಸಾಮರ್ಥ್ಯದ ಬ್ಯಾಟರಯನ್ನು ಹೊಂದಿದೆ. ಇದು 10W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ VoLTE, Wi-Fi 802.11 b / g / n, ಬ್ಲೂಟೂತ್ 4.2, ಜಿಪಿಎಸ್ + ಗ್ಲೋನಾಸ್, ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಒಳಗೊಂಡಿದೆ. ಫಿಂಗರ್​ಪ್ರಿಂಟ್ ಮತ್ತು ಫೇಸ್ ಲಾಕ್ ಆಯ್ಕೆಗಳಿವೆ.

Huawei Enjoy 20e: ಹುವಾಯೇ ಕಂಪೆನಿಯಿಂದ ಬಜೆಟ್ ಬೆಲೆಗೆ ಭರ್ಜರಿ ಫೀಚರ್​ಗಳ ಹೊಸ ಫೋನ್ ಅನಾವರಣ

Oppo K9s: ಬರೋಬ್ಬರಿ 64MP ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್, ಬ್ಯಾಟರಿ: ಒಪ್ಪೋ K9s ಸ್ಮಾರ್ಟ್​ಫೋನ್ ಬಿಡುಗಡೆ

(Nokia C30 New Smartphone with 6000mAh Battery launched in India just rs 10999)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ