Amazon Great Indian Festival 2021: ಅಮೆಜಾನ್​ನಲ್ಲಿ ಅತ್ಯಂತ ವೇಗವಾಗಿ ಚಾರ್ಜ್​ ಆಗುವ ಈ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

ಐಕ್ಯೂಒ Z3 5ಜಿ ಸ್ಮಾರ್ಟ್​ಫೋನ್ ಕೇವಲ 17,990 ರೂ. ಗೆ ಮಾರಾಟ ಆಗುತ್ತಿದೆ. 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಅತ್ಯಂತ ವೇಗದ 55W ಫ್ಲ್ಯಾಶ್‌ಚಾರ್ಜ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

Amazon Great Indian Festival 2021: ಅಮೆಜಾನ್​ನಲ್ಲಿ ಅತ್ಯಂತ ವೇಗವಾಗಿ ಚಾರ್ಜ್​ ಆಗುವ ಈ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್
Amazon Mobile and TV Saving Days Sale
Follow us
TV9 Web
| Updated By: Vinay Bhat

Updated on: Oct 23, 2021 | 1:43 PM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ (Amazon) ಪ್ರಸ್ತುತ ದೀಪಾವಳಿ ಹಬ್ಬದ ಅಂಗವಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 (Amazon Great Indian Festival) ನಡೆಯುತ್ತಿದೆ. ಈ ಹಬ್ಬದ ವಿಶೇಷ ಸೇಲ್‌ನಲ್ಲಿ ಹೊಸ ಮತ್ತು ಜನಪ್ರಿಯ ಫೋನ್‌ಗಳಿಗೆ ದೊಡ್ಡ ರಿಯಾಯಿತಿ ನೀಡಲಾಗಿದೆ. ಪ್ರಮುಖವಾಗಿ ಅತ್ಯಂತ ವೇಗವಾಗಿ ಚಾರ್ಜ್ ಆಗುವ ಜನಪ್ರಿಯ ಐಕ್ಯೂ (iQOO) ಮತ್ತು ಎಂಐ (Mi) ಕಂಪನಿಯ ಸ್ಮಾರ್ಟ್‌ ಫೋನ್‌ಗಳಿಗೆ (Smartphone) ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. iQOO ಮತ್ತು Mi ಕಂಪನಿಗಳ ಮೊಬೈಲ್ ಸರಣಿಯಲ್ಲಿ ಹಲವು ಮಾದರಿಗಳನ್ನು ಪರಿಚಯಿಸಿದ್ದು, ಆ ಪೈಕಿ ಬಜೆಟ್‌ ಬೆಲೆಯಿಂದ, ಹೈ ಎಂಡ್ ಫೋನ್‌ಗಳ ಆಯ್ಕೆ ಸಹ ಗ್ರಾಹಕರಿಗೆ ಲಭ್ಯ.

ಮೊದಲನೆಯದಾಗಿ ಐಕ್ಯೂಒ Z3 5ಜಿ ಸ್ಮಾರ್ಟ್​ಫೋನ್ ಕೇವಲ 17,990 ರೂ. ಗೆ ಮಾರಾಟ ಆಗುತ್ತಿದೆ. ಇದು 2408×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌+ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 768G ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 11ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಅತ್ಯಂತ ವೇಗದ 55W ಫ್ಲ್ಯಾಶ್‌ಚಾರ್ಜ್ ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

ಐಕ್ಯೂ 7 ಲೆಜೆಂಡ್ 5G ಸ್ಮಾರ್ಟ್‌ಫೋನ್‌ ಕೂಡ ಭರ್ಜರಿ ಆಫರ್​ನಲ್ಲಿ ಲಭ್ಯವಿದೆ. ಇದು ಕೇವಲ 29,990 ರೂ. ಗೆ ಮಾರಾಟ ಕಾಣುತ್ತಿದೆ. 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.62 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ ಐಎಂಎಕ್ಸ್ 598 ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಹಾಗೆಯೇ ಈ ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ಫ್ಲ್ಯಾಶ್‌ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಇನ್ನು ಶವೋಮಿಯ ಎಂಐ 10i ಸ್ಮಾರ್ಟ್‌ಫೋನ್‌ 21,999 ರೂ. ಗೆ ಸೇಲ್ ಕಾಣುತ್ತಿದೆ. ಇದು 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 750G ಪ್ರೊಸೆಸರ್‌ ಹೊಂದಿದೆ. ಕ್ವಾಡ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿರುವುದು ಪ್ರಮುಖ ಹೈಲೈಟ್‌ ಆಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 5,820mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33W ಫಾಸ್ಟ್​ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದೆ. ಇದರ ಜೊತೆ ಎಂಐ 11X ಸ್ಮಾರ್ಟ್‌ಫೋನ್‌ ಕೂಡ ಬಂಪರ್ ಆಫರ್​ನಲ್ಲಿ ಸಿಗುತ್ತಿದೆ. ಇದು 4,520mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

WhatsApp: ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್​ನಲ್ಲಿ ಹೊಸ ಆಯ್ಕೆ: ಆ ಅಚ್ಚರಿಯ ಫೀಚರ್ ಏನು ಗೊತ್ತೇ?

Xiaomi: ಭಾರತದಲ್ಲಿ ಮತ್ತೆ ಪರಾಕ್ರಮ ಮೆರೆದ ಶವೋಮಿ: ನಂಬರ್ ಒನ್ ಸ್ಮಾರ್ಟ್​ಫೋನ್ ಸ್ಥಾನ ಭದ್ರ

(Amazon Great Indian Festival 2021 These iQOO and Xiaomi Mi Smartphones Receive BIG Discounts)