AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hungama: ಹಂಗಾಮದಿಂದ ‘ಹಂಗಾಮ ಮ್ಯೂಸಿಕ್ ಕ್ವಿಜ್ ಅಲೆಕ್ಸಾ ಸ್ಕಿಲ್’ ಲಾಂಚ್: ಸಂಗೀತ ಜ್ಞಾನ ಪರೀಕ್ಷಿಸಲು ವಿವಿಧ ಆಟ

ಆಟವನ್ನು ಆಡಲು ಬಳಕೆದಾರರು “ಅಲೆಕ್ಸಾ, ಹಂಗಾಮ ಮ್ಯೂಸಿಕ್ ಕ್ವಿಜ್ ತೆರೆಯಿರಿ” ಎಂದು ಹೇಳಬೇಕು. ಬಳಿಕ ಅಲೆಕ್ಸಾ ಬಳಕೆದಾರರನ್ನು ಸ್ವಾಗತಿಸುತ್ತದೆ, ಹಾಗೇ ಬಳಕೆದಾರರ ಪ್ರಸ್ತುತ ಸ್ಕೋರ್ ಅನ್ನು ಪುನರಾವರ್ತಿಸುತ್ತದೆ. ಇದಾದ ನಂತರ ಸ್ಪರ್ಧಿಸಲು ಒಂದು ವಿಭಾಗವನ್ನು ಆಯ್ಕೆ ಮಾಡಲು ಅವರನ್ನು ಕೇಳುತ್ತದೆ.

Hungama: ಹಂಗಾಮದಿಂದ 'ಹಂಗಾಮ ಮ್ಯೂಸಿಕ್ ಕ್ವಿಜ್ ಅಲೆಕ್ಸಾ ಸ್ಕಿಲ್' ಲಾಂಚ್: ಸಂಗೀತ ಜ್ಞಾನ ಪರೀಕ್ಷಿಸಲು ವಿವಿಧ ಆಟ
Hungama
TV9 Web
| Updated By: Vinay Bhat|

Updated on:Oct 22, 2021 | 1:54 PM

Share

ಬೆಂಗಳೂರು, ಅಕ್ಟೋಬರ್ 2021: ಹಂಗಾಮ, ಭಾರತದ ಪ್ರಮುಖ ಡಿಜಿಟಲ್ ಮನರಂಜನಾ ಕಂಪೆನಿಯು ಇಂದು ಹಂಗಾಮ ಮ್ಯೂಸಿಕ್ ಕ್ವಿಜ್ ಅಲೆಕ್ಸಾ ಸ್ಕಿಲ್ ( Hungama Music Quiz Alexa Skill) ಅನ್ನು ಆರಂಭಿಸಿದೆ. ಇದು ಅಮೆಜಾನ್ ಎಕೋ (Amazon), ಫೈರ್ ಟಿವಿ ಡಿವೈಸ್, ಅಲೆಕ್ಸಾ ಆಪ್, ಅಮೆಜಾನ್ ಶಾಪಿಂಗ್ (ಆಂಡ್ರಾಯ್ಡ್ ಮಾತ್ರ) ಮತ್ತು ಅಲೆಕ್ಸಾ ಸಕ್ರಿಯಗೊಳಿಸಿದ ಸಾಧನಗಳ  ಬಳಕೆದಾರರಿಗೆ ಆಕರ್ಷಕ ಸಂಗೀತ-ಚಾಲಿತ ಟ್ರಿವಿಯಾ ಆಟವನ್ನು ಆಡಲು ಅನುವು ಮಾಡಿಕೊಡುತ್ತದೆ. ಈ ಸ್ಕಿಲ್ ಅಲೆಕ್ಸಾ ಬಳಕೆದಾರರಿಗೆ ಬಾಲಿವುಡ್ ಹಿಟ್ಸ್ , ರೊಮ್ಯಾಂಟಿಕ್ ಹಾಡುಗಳು ಮತ್ತು ನೃತ್ಯಗಳಂತಹ ವಿವಿಧ ವಿಭಾಗಗಳಲ್ಲಿ ತಮ್ಮ ಸಂಗೀತದ ಜ್ಞಾನವನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ವಿಜೇತರನ್ನು ನಿರ್ಧರಿಸಲು ಬಳಕೆದಾರರು ತಮ್ಮ ಒಟ್ಟು ಸ್ಕೋರ್ ಗಳೊಂದಿಗೆ ಭಾರತದ ಇತರ ಆಟಗಾರರ ವಿರುದ್ಧ ಆಟವಾಡುತ್ತಾರೆ.

ಆಟವನ್ನು ಆಡಲು ಬಳಕೆದಾರರು “ಅಲೆಕ್ಸಾ, ಹಂಗಾಮ ಮ್ಯೂಸಿಕ್ ಕ್ವಿಜ್ ತೆರೆಯಿರಿ” ಎಂದು ಹೇಳಬೇಕು. ಬಳಿಕ ಅಲೆಕ್ಸಾ ಬಳಕೆದಾರರನ್ನು ಸ್ವಾಗತಿಸುತ್ತದೆ, ಹಾಗೇ ಬಳಕೆದಾರರ ಪ್ರಸ್ತುತ ಸ್ಕೋರ್ ಅನ್ನು ಪುನರಾವರ್ತಿಸುತ್ತದೆ. ಇದಾದ ನಂತರ ಸ್ಪರ್ಧಿಸಲು ಒಂದು ವಿಭಾಗವನ್ನು ಆಯ್ಕೆ ಮಾಡಲು ಅವರನ್ನು ಕೇಳುತ್ತದೆ.

ಆಟಗಾರರು ವಿಭಾಗವನ್ನು ಆಯ್ಕೆ ಮಾಡಿದ ನಂತರ ಅಲೆಕ್ಸಾ ಬಳಕೆದಾರರಿಗೆ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡುತ್ತದೆ. ಹಾಗೇ 8 ಸೆಕೆಂಡುಗಳ 5 ಹಾಡಿನ ತುಣುಕುಗಳನ್ನು ಪ್ಲೇ ಮಾಡುತ್ತದೆ. ಬಳಕೆದಾರರು ಹಾಡಿನ ಹೆಸರು ಹಾಗೂ ಸಿನಿಮಾದ ಹೆಸರನ್ನು ಊಹಿಸಬೇಕಾಗುತ್ತದೆ. ಬಳಕೆದಾರರು ಹಾಡು ಅಥವಾ ಚಲನಚಿತ್ರದ ಹೆಸರನ್ನು ಸರಿಯಾಗಿ ಊಹಿಸಿದರೆ ಅವರು 10 ಅಂಕಗಳನ್ನು ಗೆಲ್ಲುತ್ತಾರೆ. ಮತ್ತು ಅವರು ಎರಡಕ್ಕೂ ಸರಿಯಾಗಿ ಉತ್ತರಿಸಿದರೆ 20 ಅಂಕಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಆಟಗಾರನ ಒಟ್ಟು ಸ್ಕೋರ್ ಅನ್ನು ಪ್ರತಿಸ್ಪರ್ಧಿಯ ಸ್ಕೋರ್​ಗೆ ಹೋಲಿಸಲಾಗುತ್ತದೆ ಮತ್ತು ಯಾರು ಹೆಚ್ಚಿನ ಸ್ಕೋರ್ ಮಾಡುತ್ತಾರೋ ಅವರು ಮ್ಯೂಸಿಕ್ ಕ್ವಿಜ್  ಸುತ್ತಿನಲ್ಲಿ ಗೆಲ್ಲುತ್ತಾರೆ. ಟಾಪ್ ಸ್ಕೋರ್ ಆಟಗಾರನನಿಗೆ ಸಾಪ್ತಾಹಿಕ/ಮಾಸಿಕ ಲೀಡರ್ ಬೋರ್ಡ್ ಗಳಲ್ಲಿ ಸ್ಥಾನವನ್ನು ನೀಡಲಾಗುತ್ತದೆ.

ಹಂಗಾಮ ಮ್ಯೂಸಿಕ್ ಕ್ವಿಜ್ ಕುರಿತು ಮಾತನಾಡಿದ ಹಂಗಾಮ ಡಿಜಿಟಲ್ ಮೀಡಿಯಾದ ಸಿಒಒ ಸಿದ್ಧಾರ್ಥ ರಾಯ್, “ನಾವು ಯಾವಾಗಲೂ ನಮ್ಮ ಬಳಕೆದಾರರೊಂದಿಗೆ ತೊಡಗಿಸಿಕೊಳ್ಳಲು ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಅಲೆಕ್ಸಾ-ಸಕ್ರಿಯಗೊಳಿಸಿದ ಸಾಧನಗಳಲ್ಲಿ ಧ್ವನಿ ಆಜ್ಞೆಗಳೊಂದಿಗೆ ಲಭ್ಯವಿರುವ ಮೊದಲ ಸಂಗೀತ ಸ್ಟ್ರೀಮಿಂಗ್ ಸೇವೆಯಲ್ಲಿ ನಾವು ಮೊದಲಿಗರಾಗಿದ್ದೇವೆ ಮತ್ತು ಮತ್ತೊಮ್ಮೆ ಬಾಲಿವುಡ್ ಸಂಗೀತಕ್ಕೆ ಸಂಬಂಧಿಸಿದ ರಸಪ್ರಶ್ನೆ ಮೂಲಕ ಬಳಕೆದಾರರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ ಅಲೆಕ್ಸಾ ಕೌಶಲ್ಯವನ್ನು ಅಭಿವೃದ್ಧಿಪಡಿಸಿದ ಭಾರತದ ಮೊದಲನೆಯವರಾಗಿದ್ದೇವೆ. ಅಲೆಕ್ಸಾದಲ್ಲಿ ಈ ಹೊಸ ಅನುಭವವನ್ನು ತರಲು ನಮಗೆ ಸಂತೋಷವಾಗಿದೆ ಮತ್ತು ಗ್ರಾಹಕರು ಮನರಂಜನೆ ಮತ್ತು ಆಕರ್ಷಕವಾಗಿ ಹೊಸ ಕೌಶಲ್ಯವನ್ನು ಕಂಡುಕೊಳ್ಳುತ್ತಾರೆ ಎಂದು ಖಾತ್ರಿಯಾಗಿದೆ “ ಎಂದು ಹೇಳಿದರು.

(Hungama launches Hungama Music Quiz Alexa Skill)

Published On - 1:52 pm, Fri, 22 October 21