WhatsApp New Feature: ಐಫೋನ್ ಬಳಕೆದಾರರು ತಕ್ಷಣ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ ಹುಬ್ಬೇರಿಸುವ ಫೀಚರ್

|

Updated on: Jun 05, 2023 | 2:15 PM

Edit Message feature: ಸಾಮಾನ್ಯವಾಗಿ ಮೊದಲು ಆಂಡ್ರಾಯ್ಡ್ ಬಳಕೆದಾರರಿಗೆ ನೂತನ ಆಯ್ಕೆ ಬಿಡುಗಡೆ ಮಾಡಿ ಬಳಿಕ ಇತರರಿಗೆ ನೀಡುವ ವಾಟ್ಸ್​ಆ್ಯಪ್ ಇದೀಗ ದಿಢೀರ್ ಆಗಿ ಐಒಎಸ್ ಬಳಕೆದಾರರಿಗೆ ಅಚ್ಚರಿಯ ಫೀಚರ್ ಪ್ರಕಟಿಸಿದೆ. ಅದುವೇ ”ಎಡಿಟ್ ಸೆಂಟ್ ಮೆಸೇಜ್” ಎಂಬ ನೂತನ ಅಪ್ಡೇಟ್.

WhatsApp New Feature: ಐಫೋನ್ ಬಳಕೆದಾರರು ತಕ್ಷಣ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ ಹುಬ್ಬೇರಿಸುವ ಫೀಚರ್
WhatsApp Edit Feature
Follow us on

ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಅನ್ನು ಇಂದು ಕೇವಲ ಭಾರತದಲ್ಲೇ (India: ) ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಉಪಯೋಗಿಸುವ ವಾಟ್ಸ್​ಆ್ಯಪ್​ (WhatsApp) ಸಾಲು ಸಾಲು ಫೀಚರ್​ಗಳನ್ನು ಕೂಡ ಪರಿಚಯಿಸುತ್ತದೆ. ಸಾಮಾನ್ಯವಾಗಿ ಮೊದಲು ಆಂಡ್ರಾಯ್ಡ್ ಬಳಕೆದಾರರಿಗೆ ನೂತನ ಆಯ್ಕೆ ಬಿಡುಗಡೆ ಮಾಡಿ ಬಳಿಕ ಇತರರಿಗೆ ನೀಡುವ ವಾಟ್ಸ್​ಆ್ಯಪ್ ಇದೀಗ ದಿಢೀರ್ ಆಗಿ ಐಒಎಸ್ ಬಳಕೆದಾರರಿಗೆ ಅಚ್ಚರಿಯ ಫೀಚರ್ ಪ್ರಕಟಿಸಿದೆ. ಅದುವೇ ”ಎಡಿಟ್ ಸೆಂಟ್ ಮೆಸೇಜ್” (Edit Sent Message) ಎಂಬ ನೂತನ ಅಪ್ಡೇಟ್.

ಎಡಿಟ್ ಸೆಂಟ್ ಮೆಸೇಜ್ ಆಯ್ಕೆಯ ಮೂಲಕ ಕಳುಹಿಸದ ಮೆಸೇಜ್ ಅನ್ನು ಎಡಿಟ್ ಮಾಡಬಹುದಾಗಿದೆ. ಇದರ ಮೂಲಕ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ. ನೀವು ಕಳುಹಿಸಿದ ಮೆಸೇಜ್ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ಈ ಆಯ್ಕೆಯನ್ನು ಉಪಯೋಗಿಸಬಹುದು.

Apple WWDC 2023: ನಾಳೆಯಿಂದ Apple WWDC 2023 ಈವೆಂಟ್‌ ಪ್ರಾರಂಭ: iOS 17 ಬಿಡುಗಡೆ ಆಗುವ ನಿರೀಕ್ಷೆ

ಇದನ್ನೂ ಓದಿ
Apple WWDC 2023: ಇಂದಿನಿಂದ Apple WWDC 2023 ಈವೆಂಟ್‌: ಏನೆಲ್ಲ ರಿಲೀಸ್ ಆಗಲಿದೆ?, ಲೈವ್ ವೀಕ್ಷಿಸುವುದು ಹೇಗೆ?
Tech Tips: ಗೂಗಲ್ ಫೋಟೋಸ್​ನಲ್ಲಿರುವ ಫೈಲ್ಸ್ ಡಿಲೀಟ್ ಆದ್ರೆ ಮರಳಿ ಪಡೆಯುವುದು ಹೇಗೆ?
Tecno Camon 20: ಟೆಕ್ನೋ ಕಂಪನಿ ಇದೀಗ ಮತ್ತೆ ಮೂರು ಮೊಬೈಲ್ ಲಾಂಚ್ ಮಾಡಿದೆ!
Vivo Y35+ 5G: ಸದ್ದಿಲ್ಲದೆ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ವಿವೋ

ಪ್ರಸ್ತುತ, ವಾಟ್ಸ್​ಆ್ಯಪ್​​ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್‌ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ. ಐಒಎಸ್​ನ 23.10.77 ವರ್ಷನ್​ನಲ್ಲಿ ಈ ಆಯ್ಕೆ ನೀಡಲಾಗಿದೆ. ಆ್ಯಪ್ ಸ್ಟೋರ್​ಗೆ ತೆರಳಿ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿದರೆ ಎಡಿಟ್ ಮೆಸೇಜ್ ಫೀಚರ್ ಸಿಗಲಿದೆ.

ಇಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ, ವಾಟ್ಸ್​ಆ್ಯಪ್​ನಲ್ಲಿ ನೀವು ಮೆಸೇಜ್ ಅನ್ನು ಡಿಲೀಟ್ ಮಾಡಿದರೆ ಹೇಗೆ ಚಾಟ್​ನಲ್ಲಿ ಮಾಹಿತಿ ನೀಡುತ್ತದೆಯೊ ಅದೇರೀತಿ ಎಡಿಟ್ ಮಾಡಿದರೆ ಕೂಡ ಕಳುಹಿಸಿದವರಿಗೆ ತಿಳಿಯುತ್ತದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್​ಆ್ಯಪ್​​ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್​ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು.

74 ಲಕ್ಷ ವಾಟ್ಸ್​ಆ್ಯಪ್ ಖಾತೆ ಬ್ಯಾನ್:

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್ ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಏಪ್ರಿಲ್ 01-30ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್​ಆ್ಯಪ್​ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 7,452,500 ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್  ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಕೂಡ ಭಾರತದಲ್ಲಿ 47 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್​ಆ್ಯಪ್ ಹೇಳಿತ್ತು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Mon, 5 June 23