Tech Tips: ಗೂಗಲ್ ಫೋಟೋಸ್​ನಲ್ಲಿರುವ ಫೈಲ್ಸ್ ಡಿಲೀಟ್ ಆದ್ರೆ ಮರಳಿ ಪಡೆಯುವುದು ಹೇಗೆ?

Google Photos: ಗೂಗಲ್ ಫೋಟೋಸ್​ನಲ್ಲಿ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್‌ ಮಾಡುವುದಕ್ಕೆ ಅವಕಾಶವಿದೆ. ಆದರೆ, ನೀವು ಅವುಗಳನ್ನು 30 ಅಥವಾ 60 ದಿನಗಳ ಹಿಂದೆ ಡಿಲೀಟ್‌ ಮಾಡಿದರೆ ರಿಸ್ಟೋರ್‌ ಮಾಡಲು ಸಾಧ್ಯವಾಗುವುದಿಲ್ಲ.

Tech Tips: ಗೂಗಲ್ ಫೋಟೋಸ್​ನಲ್ಲಿರುವ ಫೈಲ್ಸ್ ಡಿಲೀಟ್ ಆದ್ರೆ ಮರಳಿ ಪಡೆಯುವುದು ಹೇಗೆ?
Google Photos
Follow us
Vinay Bhat
|

Updated on: Jun 05, 2023 | 6:55 AM

ಹೆಚ್ಚಿನವರು ಆಂಡ್ರಾಯ್ಡ್ (Android) ಅಥವಾ ಆ್ಯಪಲ್ ಐಫೋನ್‌ಗಳಲ್ಲಿ (Apple iPhone) ಸ್ಟೋರೇಜ್ ಸ್ಪೇಸ್ ಕಡಿಮೆ ಇದ್ದಾಗ, ಫೋಟೋ ಮತ್ತು ವಿಡಿಯೋಗಳನ್ನು ಕ್ಲೌಡ್‌ನಲ್ಲಿ ಅಂದರೆ ಆನ್‌ಲೈನ್ ಸರ್ವರ್‌ನಲ್ಲೇ ಸೇವ್ ಮಾಡಿಕೊಳ್ಳಲು ಗೂಗಲ್ ಒಂದೊಳ್ಳೆಯ ಆಯ್ಕೆಯನ್ನು ನೀಡಿದೆ. ‘ಗೂಗಲ್ ಫೋಟೋಸ್’ (Goolge Photos) ಆ್ಯಪ್ ಮೂಲಕ ಸ್ಟೋರ್ ಮಾಡಿಟ್ಟುಕೊಳ್ಳಬಹುದು. ಆಂಡ್ರಾಯ್ಡ್ ಫೋನ್‌ಗಳಲ್ಲಿ ಇದು ಮೊದಲೇ ಅಳವಡಿಕೆಯಾಗಿದ್ದರೆ, ಐಫೋನ್‌ನಲ್ಲಿ ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು. ಆದರೆ, ಇದರಲ್ಲಿ ನೀವು ಶೇಖರಿಸಿದ ಫೋಟೋಗಳು, ವಿಡಿಯೋಗಳು ಆಕಸ್ಮಿಕವಾಗಿ ಡಿಲೀಟ್‌ ಆದರೆ ಏನು ಮಾಡುವುದು?.

ಚಿಂತಿಸುವ ಅಗತ್ಯವಿಲ್ಲ, ಯಾಕಂದ್ರೆ ಗೂಗಲ್ ಫೋಟೋಸ್​ನಲ್ಲಿ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್‌ ಮಾಡುವುದಕ್ಕೆ ಅವಕಾಶವಿದೆ. ಆದರೆ, ನೀವು ಅವುಗಳನ್ನು 30 ಅಥವಾ 60 ದಿನಗಳ ಹಿಂದೆ ಡಿಲೀಟ್‌ ಮಾಡಿದರೆ ರಿಸ್ಟೋರ್‌ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ನೀವು ಗೂಗಲ್‌ ಫೋಟೋದಲ್ಲಿ ಡಿಲೀಟ್‌ ಮಾಡಲಾದ ನಿಮ್ಮ ಫೋಟೋಗಳನ್ನು ರಿಸ್ಟೋರ್‌ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡ್ತೀವಿ ಓದಿರಿ.

Nokia C300: ನೋಕಿಯಾದಿಂದ ಎರಡು ಜಬರ್ದಸ್ತ್ ಸ್ಮಾರ್ಟ್​ಫೋನ್ಸ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?

ಇದನ್ನೂ ಓದಿ
Image
Apple WWDC 2023: ನಾಳೆಯಿಂದ Apple WWDC 2023 ಈವೆಂಟ್‌ ಪ್ರಾರಂಭ: iOS 17 ಬಿಡುಗಡೆ ಆಗುವ ನಿರೀಕ್ಷೆ
Image
Redmi 12: ಬಿಡುಗಡೆಗೆ ಸಿದ್ದವಾದ ಶವೋಮಿ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಸದ್ಯದಲ್ಲೇ ರೆಡ್ಮಿ 12 ಫೋನ್ ರಿಲೀಸ್
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಡಿಸ್ ಪ್ಲೇ ಸ್ಕ್ರಾಚ್​ ಆಗಿದ್ದರೆ ಬದಲಾಯಿಸಬೇಕಿಲ್ಲ: ಜಸ್ಟ್ ಹೀಗೆ ಮಾಡಿ
Image
Honor 90: ಕ್ಯಾಮೆರಾ ಪ್ರಿಯರಿಗಾಗಿ 200 ಮೆಗಾಪಿಕ್ಸೆಲ್​ನ ಹೊಸ ಹಾನರ್‌ 90 ಸರಣಿ ಅನಾವರಣ

ಆಕಸ್ಮಿಕವಾಗಿ ಗೂಗಲ್ ಫೋಟೋಸ್​​ನಿಂದ ಯಾವುದಾದರೂ ಒಂದು ಫೋಟೋ ಡಿಲೀಟ್ ಆದರೆ ಮತ್ತು ಅದು ನಮಗೆ ಅಗತ್ಯವಾಗಿ ಬೇಕಿದ್ದರೆ, ಅದನ್ನು ಮರಳಿ ಪಡೆಯಲು ಸುಲಭವಾದ ಅನುಕೂಲ ಈ ಗೂಗಲ್ ಫೋಟೋಸ್ ಆ್ಯಪ್‌ನಲ್ಲಿಯೇ ಇದೆ. ಆಂಡ್ರಾಯ್ಡ್, ಐಫೋನ್‌ನ ಆ್ಯಪ್‌ನಲ್ಲಿ ಮಾತ್ರವಲ್ಲದೆ ಗೂಗಲ್ ಫೋಟೋಸ್‌ನ ವೆಬ್ ತಾಣದಲ್ಲಿಯೂ (photos.google.com) ಈ ಆಯ್ಕೆ ದೊರೆಯುತ್ತದೆ.

ಗೂಗಲ್‌ ಫೋಟೋಸ್‌ನಿಂದ ಅಳಿಸಲಾದ ಫೋಟೋಗಳನ್ನು ರಿಕವರಿ ಮಾಡುವುದು ಹೇಗೆ?

  • ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ, ಗೂಗಲ್ ಫೋಟೋಸ್ ಆ್ಯಪ್ ತೆರೆಯಿರಿ
  • ಪರದೆಯ ಕೆಳಭಾಗದಲ್ಲಿ, ‘ಲೈಬ್ರರಿ’ ಟ್ಯಾಬ್ ಇದೆ, ಅದರ ಮೇಲೆ ಟ್ಯಾಪ್ ಮಾಡಿ
  • ನಂತರ ನೀವು ಮೇಲ್ಭಾಗದಲ್ಲಿ ‘ಟ್ರಾಶ್’ ಫೋಲ್ಡರ್ ಅನ್ನು ಕಾಣಬಹುದು. ನಿಮ್ಮ ಎಲ್ಲಾ ಅಳಿಸಿದ ಫೋಟೋಗಳನ್ನು ಪರೀಕ್ಷಿಸಲು ಅದರ ಮೇಲೆ ಟ್ಯಾಪ್ ಮಾಡಿ
  • ನೀವು ರಿಸ್ಟೋರ್‌ ಮಾಡಲು ಬಯಸಿದರೆ, ಫೋಟೋ ಅಥವಾ ವಿಡಿಯೋವನ್ನು ಟಚ್‌ ಮಾಡಿ ಮತ್ತು ಪ್ರೆಸ್‌ ಮಾಡಿ. ನಂತರ, ರಿಸ್ಟೋರ್‌ ಟ್ಯಾಪ್ ಮಾಡಿ. ಫೋಟೋ ಅಥವಾ ವಿಡಿಯೋ ಮರಳಿ ಬರುತ್ತದೆ

ನೀವು ಫೋಟೋವನ್ನು ಟ್ರಾಶ್ ನಲ್ಲಿ ನೋಡದಿದ್ದರೆ, ನೀವು ಅದನ್ನು 60 ದಿನಗಳ ಹಿಂದೆ ರಿಸೈಕಲ್‌ ಬಿನ್‌ಗೆ ವರ್ಗಾಯಿಸಿದ್ದೀರಿ ಎಂದರ್ಥ. ನೀವು ಅದನ್ನು ನಿಮ್ಮ ಟ್ರಾಶ್ ನಿಂದ ಶಾಶ್ವತವಾಗಿ ಅಳಿಸಿಹಾಕುವ ಸಾಧ್ಯತೆಯಿದೆ ಅಥವಾ ಮೊದಲು ಅದನ್ನು ಬ್ಯಾಕಪ್ ಮಾಡದೆಯೇ ನಿಮ್ಮ ಸಾಧನದ ಗ್ಯಾಲರಿ ಆ್ಯಪ್‌ನಿಂದ ಶಾಶ್ವತವಾಗಿ ಅಳಿಸಿರುವಿರಿ.

ಇನ್ನು ನೀವು ಐಫೋನ್ ಬಳಸುತ್ತಿದ್ದರೆ, ಗೂಗಲ್ ಫೋಟೋಗಳಿಂದ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್ ಮಾಡಬಹುದು. ಇದಕ್ಕಾಗಿ, ಗೂಗಲ್ ಫೋಟೋ ಒಪನ್ ಮಾಡಿದ ನಂತರ, ಎಡಭಾಗದಲ್ಲಿರುವ ಹ್ಯಾಂಬರ್ಗರ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಬಾಕ್ಸ್ ಅನ್ನು ಚೆಕ್ ಮಾಡಿ.  ಅದರ ನಂತರ,  3 ಡಾಟ್ ಗಳನ್ನು ಹೊಂದಿರುವ ಐಕಾನ್ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಸೆಕೆಲ್ಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ