Google Street View: ಗೂಗಲ್ ಸ್ಟ್ರೀಟ್ ವ್ಯೂ ಇದೀಗ ಭಾರತದ ಹಳ್ಳಿ-ಪಟ್ಟಣಗಳಲ್ಲಿ ಲಭ್ಯ: ಏನಿದರ ಪ್ರಯೋಜನ

ಕಳೆದ ವರ್ಷ ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ನಗರಗಳಲ್ಲಿ ಸಿಗುತ್ತಿತ್ತು. ಇದೀಗ ದೇಶದ ಸಣ್ಣ ಹಳ್ಳಿ, ಪಟ್ಟಣ ಸೇರಿದಂತೆ ಬಹತೇಕ ಎಲ್ಲ ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದೆ.

Google Street View: ಗೂಗಲ್ ಸ್ಟ್ರೀಟ್ ವ್ಯೂ ಇದೀಗ ಭಾರತದ ಹಳ್ಳಿ-ಪಟ್ಟಣಗಳಲ್ಲಿ ಲಭ್ಯ: ಏನಿದರ ಪ್ರಯೋಜನ
Google Maps street view
Follow us
Vinay Bhat
|

Updated on:May 28, 2023 | 3:27 PM

ಗೂಗಲ್ ಮ್ಯಾಪ್ಸ್​​ನಲ್ಲಿ (Google Maps) ಬಹಳ ಸಮಯದಿಂದ ಕಾಯುತ್ತಿದ್ದ ಸ್ಟ್ರೀಟ್‌ ವ್ಯೂ (Street View) ಆಯ್ಕೆ ಇದೀಗ ಭಾರತದ ಅನೇಕ ಕಡೆಗಳಲ್ಲಿ ಬಳಕೆಗೆ ಲಭ್ಯವಾಗಿದೆ. ಆರಂಭಿಕ ಹಂತದಲ್ಲಿ ಭಾರತದ 10 ಪ್ರಮುಖ ನಗರಗಳ ಬಳಕೆದಾರರು ಇದನ್ನು ಉಪಯೋಗಿಸಬಹುದಾಗಿತ್ತು. ಈ ಫೀಚರ್ 2016ರಲ್ಲೇ ಭಾರತದಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಸರ್ಕಾರ ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಾರಂಭಿಸಲು ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಕಳೆದ ವರ್ಷ ಈ ಫೀಚರ್ ಬೆಂಗಳೂರು (Bengaluru), ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ನಾಸಿಕ್, ವಡೋದರಾ, ಅಹಮದ್‌ನಗರ ಮತ್ತು ಅಮೃತಸರ ನಗರಗಳಲ್ಲಿ ಸಿಗುತ್ತಿತ್ತು.

ಇದೀಗ ದೇಶದ ಸಣ್ಣ ಹಳ್ಳಿ, ಪಟ್ಟಣ ಸೇರಿದಂತೆ ಬಹತೇಕ ಎಲ್ಲ ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದೆ. ಗೂಗಲ್​ನ ಈ ಸ್ಟ್ರೀಟ್‌ ವ್ಯೂ ಫೀಚರ್ ಮೂಲಕ ಬಳಕೆದಾರರು ಮನೆಯಲ್ಲಿ ಕುಳಿತುಕೊಂಡು ಲ್ಯಾಂಡ್‌ ಮಾರ್ಕ್‌ಗಳನ್ನು ಎಕ್ಸ್‌ಪ್ಲೋರ್‌ ಮಾಡಬಹುದು. ಅದೇ ರೀತಿ, ವರ್ಚುವಲ್‌ ಆಗಿ ಯಾವುದೇ ರೆಸ್ಟೋರೆಂಟ್‌ ಅಥವಾ ಪ್ರದೇಶಗಳನ್ನು ಸುತ್ತಾಡಬಹುದು. ಇದರ ಮೂಲಕ ಅಲ್ಲೆಲ್ಲ ಸುತ್ತಾಡಿದ ಅನುಭವವನ್ನು ಪಡೆಯಬಹುದಾಗಿದೆ. ಸ್ಥಳೀಯ ಟ್ರಾಫಿಕ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಆಯಾ ರಸ್ತೆಯಲ್ಲಿನ ವೇಗದ ಮಿತಿ, ರಸ್ತೆ ತಡೆ, ಮತ್ತು ಅಡ್ಡಿಗಳ ಮಾಹಿತಿ ಮತ್ತು ಉತ್ತಮ ಆಪ್ಟಿಮೈಸ್ಡ್ ಟ್ರಾಫಿಕ್ ಲೈಟ್‌ಗಳನ್ನು ತೋರಿಸಲು ಗೂಗಲ್‌ ಮ್ಯಾಪ್ಸ್‌ ಈಗ ಸಹಾಯ ಮಾಡುತ್ತದೆ.

Tech Tips: ಬ್ಯಾನ್ ಆದ ವಾಟ್ಸ್​ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಟಿಪ್ಸ್

ಇದನ್ನೂ ಓದಿ
Image
5G Smartphones: ಅಮೆಜಾನ್​ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ಅತ್ಯುತ್ತಮ 5G ಸ್ಮಾರ್ಟ್​ಫೋನ್ಸ್: ಆಫರ್ ಮಿಸ್ ಮಾಡ್ಬೇಡಿ
Image
Tech Tips: ಮೊಬೈಲ್​ನಲ್ಲಿ 128GB ಸ್ಟೊರೇಜ್ ಇದ್ರೂ ಸಾಕಾಗ್ತಿಲ್ವಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Image
Daam Virus: ಪ್ಲೇ ಸ್ಟೋರ್​ನಲ್ಲಿ ಅಪಾಯಕಾರಿ ಆ್ಯಪ್ ಪತ್ತೆ: ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Image
Realme 11 Pro+: ಜೂನ್ 8ಕ್ಕೆ ಭಾರತಕ್ಕೆ ಅಪ್ಪಳಿಸಲಿದೆ ಬರೋಬ್ಬರಿ 200MP ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್

ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಬಹು ಉಪಯುಕ್ತವಾಗಲಿದೆ. ನಾವು ನೋಡಬಯಸುವ ಸ್ಥಳ ಮುಂಚಿತವಾಗಿಯೇ ಹೇಗೆ ಕಾಣಿಸುತ್ತದೆ ಎಂಬುದನ್ನು ನಾವು ರಸ್ತೆಯ ಮಟ್ಟದಿಂದಲೇ ನೋಡಬಹುದು. ಮಾತ್ರವಲ್ಲದೇ ಅದು ತೋರಿಸುವ ಒಂದೇ ಫೋಟೋ 360 ಡಿಗ್ರಿ ಆಂಗಲ್‌ನಿಂದಲೂ(ಪನರೊಮಾ) ವೀಕ್ಷಿಸಬಹುದು.

ಸ್ಟ್ರೀಟ್ ವ್ಯೂ ವೈಶಿಷ್ಟ್ಯದೊಂದಿಗೆ ರಸ್ತೆ ಹೇಗಿರುತ್ತದೆ? ಆ ಬೀದಿಯಲ್ಲಿ ಯಾವ ಅಂಗಡಿಗಳಿವೆ? ಎಂಬುದನ್ನು ತೋರಿಸುತ್ತದೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಬೀದಿ ವೀಕ್ಷಣೆ ವೈಶಿಷ್ಟ್ಯವನ್ನು ಬಳಸಿದರೆ, ನೀಲಿ ಬಣ್ಣದಲ್ಲಿ ಕೆಲವು ಹೊಸ ಚುಕ್ಕೆಗಳು ನಕ್ಷೆಯಲ್ಲಿ ಕಾಣಿಸಿಕೊಳ್ಳುತ್ತವೆ. ನೀವು ಅವುಗಳ ಮೇಲೆ ಕ್ಲಿಕ್ ಮಾಡಿದರೆ, ಆ ಪ್ರದೇಶಕ್ಕೆ ಸಂಬಂಧಿಸಿದ ಬೀದಿಗಳು, ಅಂಗಡಿಗಳು ಮತ್ತು ಮನೆಗಳ ಉತ್ತಮ ಗುಣಮಟ್ಟದ 360 ಡಿಗ್ರಿ ಚಿತ್ರಗಳನ್ನು ನೀವು ನೋಡಬಹುದು.

ಭಾರತದಲ್ಲಿ ಗೂಗಲ್‌ ಸ್ಟ್ರೀಟ್‌ ವ್ಯೂ ಅನುಷ್ಠಾನಗೊಳಿಸುವುದಕ್ಕಾಗಿ ಜಿನೆಸಿಸ್ ಇಂಟರ್‌ನ್ಯಾಶನಲ್ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಸುಧಾರಿತ ಮ್ಯಾಪಿಂಗ್ ಪರಿಹಾರಗಳ ಕಂಪನಿ ಮತ್ತು ಡಿಜಿಟಲ್ ರೂಪಾಂತರಕ್ಕಾಗಿ ಸಲಹಾ ಮತ್ತು ವ್ಯಾಪಾರ ಮರುಇಂಜಿನಿಯರಿಂಗ್ ಸೇವೆಗಳು ಮತ್ತು ಪರಿಹಾರಗಳ ಪ್ರಮುಖ ಪೂರೈಕೆದಾರ ಕಂಪನಿ ಟೆಕ್ ಮಹಿಂದ್ರಾ ಸಹಭಾಗಿತ್ವವನ್ನು ಪಡೆದುಕೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Sun, 28 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ