ISRO: GSLV-F12 ನ್ಯಾವಿಗೇಷನ್ ಉಪಗ್ರಹ ಉಡಾವಣೆ ಮಾಡಿದ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು ಇಂದು (ಮೇ 29) ಉಡಾವಣೆ ಮಾಡಿದೆ.
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು ಇಂದು (ಮೇ 29) ಉಡಾವಣೆ ಮಾಡಿದೆ. ಈ ಬಾಹ್ಯಾಕಾಶ ನೌಕೆ NavIC ಸರಣಿಯ ಭಾಗವಾಗಿದೆ, ಮೇಲ್ವಿಚಾರಣೆ ಮತ್ತು ನ್ಯಾವಿಗೇಷನ್ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಉಪಗ್ರಹಗಳ ಸಮೂಹವಾಗಿದೆ. NVS-01 NavIC ಸರಣಿಯಲ್ಲಿ ಎರಡನೇ ತಲೆಮಾರಿನ ಉಪಗ್ರಹಗಳ ಆರಂಭಕ್ಕೆ ಇದು ಸಾಕ್ಷಿಯಾಗಿದೆ, ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಡಾವಣೆ ಮಾಡಲಾಗಿದೆ.
51.7 ಮೀಟರ್ ಎತ್ತರದ ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹನವು ತನ್ನ 15ನೇ ಹಾರಾಟದಲ್ಲಿ 2,232 ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹ NVS-01 ಅನ್ನು ಇಂದು ಬೆಳಿಗ್ಗೆ 10.42ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (SHAR) 130 ಕಿ.ಮೀ. ದೂರದ ಎರಡನೇ ಉಡಾವಣಾ ಕೇಂದ್ರದಿಂದ ನಡೆಸಲಾಗಿದೆ.
#WATCH | Indian Space Research Organisation (ISRO), launches its advanced navigation satellite GSLV-F12 and NVS-01 from Sriharikota.
(Video: ISRO) pic.twitter.com/2ylZ8giW8U
— ANI (@ANI) May 29, 2023
ಇದನ್ನೂ ಓದಿ:ISRO Recruitment 2023: 65 ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಸುಮಾರು 20 ನಿಮಿಷಗಳ ನಂತರ ಹಾರಾಟ ನಡೆಸಿದೆ, ರಾಕೆಟ್ ಸುಮಾರು 251 ಕಿಮೀ ಎತ್ತರದಲ್ಲಿ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ (ಜಿಟಿಒ) ಉಪಗ್ರಹವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ಹೇಳಿದೆ.
Published On - 10:56 am, Mon, 29 May 23