Tech Tips: ಬ್ಯಾನ್ ಆದ ವಾಟ್ಸ್‌ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಟಿಪ್ಸ್
WhatsApp Ban: ಕಳೆದ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 47 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್‌ಆ್ಯಪ್ ಖಾತೆ ನಿಷೇಧಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ತಪ್ಪು ಮಾಹಿತಿಗಳನ್ನು ಶೇರ್ ಮಾಡಿರುವುದು.
ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷಶನ್ ವಾಟ್ಸ್‌ಆ್ಯಪ್ ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ ಕೋಟಿ ಗಟ್ಟಲೆಯಿದೆ. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್‌ಆ್ಯಪ್ (WhatsApp) ಅನ್ನು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಗಳನ್ನು (Features) ಬಿಡುತ್ತಿರುವ ವಾಟ್ಸ್‌ಆ್ಯಪ್ ಪ್ರೈವಸಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ.
2021 ರಲ್ಲಿ ನೂತನ ಐಟಿ ನಿಯಮ (IT Rule 2021) ಬಂದ ಮೇಲೆ ವಾಟ್ಸ್‌ಆ್ಯಪ್ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು ಒಂದು ಚಿಕ್ಕ ತಪ್ಪಾದರು ನಿಮ್ಮ ಅಕೌಂಟ್ ನಿಷೇಧಕ್ಕೆ ಒಳಗಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ತಿಂಗಳು ಮಿಲಿಯನ್ ವಾಟ್ಸ್‌ಆ್ಯಪ್ ಅಕೌಂಟ್ ನಿಷೇಧವಾಗುತ್ತದೆ.
ನೀವು ತಿಳಿಯದೆ ಮಾಡುವ ಸಣ್ಣ ತಪ್ಪು ಕೂಡ ನಿಮ್ಮ ವಾಟ್ಸ್‌ಆ್ಯಪ್ ಖಾತೆ ನಿಷೇಧಕ್ಕೆ ಗುರಿಯಾಗಬಹುದು. ಫಾರ್ವರ್ಡ್ ಆಗಿ ಬಂದ ಸುಳ್ಳು ಸುದ್ದಿಗಳನ್ನು ಅರಿಯದೆ ಅದನ್ನು ಇತರರಿಗೆ ಫಾರ್ವರ್ಡ್ ಮಾಡುವುದು ಅಥವಾ ಬ್ರಾಡ್ಕಾಸ್ಟ್ ಲಿಸ್ಟ್ ಅನ್ನು ಅತಿಯಾಗಿ ಉಪಯೋಗಿಸುವುದರಿಂದಲೂ ನಿಮ್ಮ ಖಾತೆ ನಿಷೇಧಕ್ಕೆ ಒಳಗಾಗುತ್ತದೆ. ಗುಡ್ ಮಾರ್ನಿಂಗ್ ಮೆಸೇಜ್ ಅನ್ನು ಬ್ರಾಡ್ಕಾಸ್ಟ್ ಮೂಲಕ ಹೆಚ್ಚು ಹೆಚ್ಚು ಜನರಿಗೆ ಕಳುಹಿಸಿದರೆ ಅದು ಸ್ಪ್ಯಾಮ್ ಮೆಸೇಜ್ ಆಗಬಹುದು. ಇದರಿಂದ ವಾಟ್ಸ್‌ಆ್ಯಪ್ ಅಕೌಂಟ್ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ.
Realme Narzo N53: ಬಜೆಟ್ ದರಕ್ಕೆ ಲಭ್ಯವಾಗುತ್ತಿದೆ ಸೂಪರ್ ರಿಯಲ್ಮಿ ಸ್ಮಾರ್ಟ್‌ಫೋನ್
ಕಳೆದ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 47 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್‌ಆ್ಯಪ್ ಖಾತೆ ನಿಷೇಧಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ತಪ್ಪು ಮಾಹಿತಿಗಳನ್ನು ಶೇರ್ ಮಾಡಿರುವುದು, ಸ್ಕ್ಯಾಮ್ ಮೆಸೇಜ್ಗಳನ್ನು ಫಾರ್ವರ್ಡ್ ಮಾಡಿರುವುದು. ಹೀಗೆ ಯಾವುದೇ ಅಹಿತಕರ ಚಟುವಟಿಕೆ ಕಂಡುಬಂದಲ್ಲಿ ನಿಮ್ಮ ಖಾತೆ ಬ್ಯಾನ್ ಆಗುತ್ತದೆ.
ವಾಟ್ಸ್‌ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, “ವಾಟ್ಸ್‌ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್–ಟು–ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.
ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಹೀಗಾಗಿ ಎಚ್ಚರದಿಂದಿರಿ.
ವಾಟ್ಸ್‌ಆ್ಯಪ್ ಖಾತೆ ನಿಷೇಧವಾದರೆ ರಿಕವರಿ ಮಾಡುವುದು ಹೇಗೆ?:
- ವಾಟ್ಸ್‌ಆ್ಯಪ್ ಅನ್ನು ಇಮೇಲ್ ಮಾಡಿ ಅಥವಾ ಆ್ಯಪ್ನಲ್ಲಿ ರಿವ್ಯೂ ರಿಕ್ವೆಸ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
- ರಿವ್ಯೂ ರಿಕ್ವೆಸ್ಟ್ ನೀಡಿದ ನಂತರ ಇದು ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಮತ್ತೆ ನಿಮಗೆ ಮುಂದಿನ ಹಂತದ ಮಾಹಿತಿಯನ್ನು ಒದಗಿಸುತ್ತದೆ.
- ಈಗ ವಾಟ್ಸ್‌ಆ್ಯಪ್ ನಿಮ್ಮ ಬಗ್ಗೆ ಬಂದಿರುವ ದೂರುಗಳನ್ನು ಪರಿಶೀಲಿಸಿ ಬಳಿಕ ನಿಮ್ಮನ್ನು ಸಂಪರ್ಕಿಸುತ್ತದೆ.
- ವಾಟ್ಸ್ಆ್ಯಪ್ನಲ್ಲಿ ರಿವ್ಯೂ ರಿಕ್ವೆಸ್ಟ್ ನೀಡಿದಾಗ ನಿಮಗೆ SMS ಮೂಲಕ ಕಳುಹಿಸಲಾದ 6-ಅಂಕಿಯ ನೋಂದಣಿ ಕೋಡ್ ಅನ್ನು ನಮೂದಿಸಿ.
- ಕೋಡ್ ನಮೂದಿಸಿದ ನಂತರ ನಿಮಗೆ ರಿವ್ಯೂ ಬರೆಯಲು ಅನುಮತಿ ಸಿಗುತ್ತದೆ ಜೊತೆಗೆ ನಿಮ್ಮ ಬಗ್ಗೆ ಬಂದ ದೂರಿನ ಬಗ್ಗೆ ಮಾತನಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ