WhatsApp Update: ಮೆಸೇಜ್ ಕಳುಹಿಸಿದ ಮೇಲೂ ಎಡಿಟ್ ಮಾಡಿ, ಬಂದಿದೆ ಹೊಸ ಅಪ್ಡೇಟ್
ಸ್ಮಾರ್ಟ್ಫೋನ್ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಅಪ್ಡೇಟ್ ಮಾಡುವ ಮೂಲಕ ಹೊಸ ಫೀಚರ್ಗಳನ್ನು ಬಳಕೆದಾರರು ಪಡೆಯಬಹುದು.
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ನಲ್ಲಿ ಕಾಲಕಾಲಕ್ಕೆ ಹತ್ತು ಹಲವು ಅಪ್ಡೇಟ್ಗಳು ಬರುತ್ತಿರುತ್ತವೆ. ಅದರಲ್ಲೂ ಬಳಕೆದಾರರಿಗೆ ಅನುಕೂಲವಾಗುವ ಅಪ್ಡೇಟ್ಗಳು, ಹಲವು ಫೀಚರ್ಗಳು ಜನರ ಅನುಕೂಲಕ್ಕೆ ತಕ್ಕಂತೆ, ಹಲವು ವೈಶಿಷ್ಟ್ಯಗಳನ್ನು ಹೊತ್ತು ತಂದಿರುತ್ತವೆ. ಸ್ಮಾರ್ಟ್ಫೋನ್ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಅಪ್ಡೇಟ್ ಮಾಡುವ ಮೂಲಕ ಹೊಸ ಫೀಚರ್ಗಳನ್ನು ಬಳಕೆದಾರರು ಪಡೆಯಬಹುದು. ಈ ಬಾರಿ ಮೆಟಾ ಒಡೆತನದ ವಾಟ್ಸ್ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ನೂತನ ಆಯ್ಕೆಯನ್ನು ಪರಿಚಯಿಸಿದೆ. ಹೊಸ ವೈಶಿಷ್ಟ್ಯದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Latest Videos