ತೈವಾನ್ ಮೂಲದ ಎಚ್ಟಿಸಿ ಕಂಪನಿ, ಆಕರ್ಷಕ ಫೀಚರ್ಸ್ ಹೊಂದಿರುವ ಗ್ಯಾಜೆಟ್ಗಳಿಗೆ ಹೆಸರುವಾಸಿ. ಎಚ್ಟಿಸಿ ಮೊಬೈಲ್ಗಳಿಗೆ ಹತ್ತು ವರ್ಷಕ್ಕೂ ಅಧಿಕ ಕಾಲದಿಂದ ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಎಚ್ಟಿಸಿ ಸೀಮಿತ ಸಂಖ್ಯೆಯ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ವಿವಿಧ ಬ್ರ್ಯಾಂಡ್ಗಳ ಸ್ಪರ್ಧೆ ನಡುವೆ, ಎಚ್ಟಿಸಿ, ಯು ಸರಣಿಯಲ್ಲಿ ಎರಡು ಮಾದರಿಗಳನ್ನು ಪರಿಚಯಿಸಿದೆ. ಎಚ್ಟಿಸಿ U23 Pro ಮತ್ತು ಎಚ್ಟಿಸಿ U23 ಎಂಬ ಎರಡು ಆವೃತ್ತಿಗಳು ಇಂದು ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ನೂತನ ಮಾದರಿಗಳ ವೈಶಿಷ್ಟ್ಯಗಳೇನು ಎನ್ನುವ ವಿವರ ಈ ವಿಡಿಯೊದಲ್ಲಿದೆ.