Tech Tips: ಆಧಾರ್ ಕಾರ್ಡ್ ಕಳೆದು ಹೋದರೆ ಟೆನ್ಶನ್ ಬೇಡ: ಮರಳಿ ಪಡೆಯಲು ಹೀಗೆ ಮಾಡಿ ಸಾಕು
Lost Aadhaar Card: ಎಲ್ಲಾದರು ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು?, ಇದನ್ನು ಮರಳಿ ಪಡೆಯುವುದು ಹೇಗೆ? ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಆಧಾರ್ ಕಾರ್ಡ್ (Aadhaar card) ಹೊಂದುವುದು ಬಹುಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಅತ್ಯಮೂಲ್ಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ಆಧಾರ್ ಕಾರ್ಡ್‌ಗಳನ್ನ ಹೊಂದಿರುತ್ತಾರೆ. 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾದ ಆಧಾರ್ ಹಾಗೂ ಇದರಲ್ಲಿರುವ 12 ಅಂಕಿಗಳ ಸಂಖ್ಯೆ ಪ್ರತಿಯೊಬ್ಬ ಭಾರತೀಯನ ಗುರುತಾಗಿ ಮಾರ್ಪಟ್ಟಿದೆ. ಆಧಾರ್ ಕಾರ್ಡ್ ಬಂದು 14 ವರ್ಷಗಳಾಗಿವೆ. ಇಂದು ಇದರಲ್ಲಿ ಅನೇಕ ಬದಲಾವಣೆ ತರಲಾಗಿದ್ದು ಆನ್ಲೈನ್ (Online) ಮೂಲಕವೇ ಹೆಸರು, ವಿಳಾಸವನ್ನು, ಫೋಟೋ (Photo) ಕೂಡ ಬದಲಿಸಬಹುದು. ಹೀಗಿರುವಾಗ ಎಲ್ಲಾದರು ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು?, ಇದನ್ನು ಮರಳಿ ಪಡೆಯುವುದು ಹೇಗೆ? ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಕಳೆದು ಹೋಯಿತು ಎಂದಾದರೆ ಮರಳಿ ಪಡೆಯಲು ಕೇಂದ್ರ ಸರ್ಕಾರ ಇತರೆ ಸೌಲಭ್ಯವನ್ನು ನೀಡಿದೆ. ನೀವು ಸುಲಭವಾಗಿ ಅಧಿಕೃತ ಯುಐಡಿಎಐ ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಬಳಸಿ ಮರಳಿ ಪಡೆಯಬಹುದು. ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕವೂ ಯುಐಡಿಎಐನ ಅಧಿಕೃತ ವೆಬ್ಸೈಟ್ನಿಂದ ನಕಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ. ಆದರೆ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೀಡಿದರೇ ಮಾತ್ರ ಒಟಿಪಿ ಬರುತ್ತದೆ. ಅದಕ್ಕೆ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಮೊಬೈಲ್ ನಂಬರ್ ಲಿಂಕ್ ಆಗಿದ್ದರೇ ನೋಂದಣಿ ಸಂಖ್ಯೆ ಅಗತ್ಯವಿಲ್ಲ.
ಇಲ್ಲಿ ಒಟಿಪಿ ಲಿಂಕ್ ಮಾಡಿದ ಮೊಬೈಲ್ ನಂಬರ್ಗೆ ಅಥವಾ ಇ-ಮೇಲ್ ಐಡಿಗೆ ಮಾತ್ರ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೀವು ಧೃಡಿಕರಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಆಧಾರ್ ಸಂಖ್ಯೆಯನ್ನು ನಿಮ್ಮ ಆಧಾರ್ ಡೌನ್‌ಲೋಡ್ ಮಾಡಲು ಅಥವಾ ನಿಮ್ಮ ಆಧಾರ್‌ನ ಮರುಮುದ್ರಣಕ್ಕೆ ಆದೇಶಿಸಬಹುದು. ಇದಕ್ಕೂ ಮುನ್ನ ಆಧಾರ್ ಕಳೆದುಕೊಂಡ ತಕ್ಷಣ ಅದನ್ನು ಲಾಕ್ ಮಾಡುವುದು ಮುಖ್ಯ.
ಆಧಾರ್ ನಂಬರ್ ಲಾಕ್ ಮಾಡಿ:
ಆಧಾರ್ ಕಾರ್ಡ್ ಕಳೆದು ಹೋದರೆ ಮೊದಲು ಆಧಾರ್ ಸಂಖ್ಯೆಯನ್ನ ಲಾಕ್ ಮಾಡಬೇಕು. ನಂತರ ಅನ್ಲಾಕ್ ಮಾಡುವ ಮೂಲಕ ಬಳಸಬಹುದಾಗಿದೆ. ಈ ಬಗ್ಗೆ ಯುಐಡಿಐಡಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ
- ಮೊದಲಿಗೆ https://resident.uidai.in/ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ನಂತರ ‘ನನ್ನ ಆಧಾರ್’ ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ ಸೆಲೆಕ್ಟ್ ಮಾಡಿ.
- ಇಲ್ಲಿ ಲಾಕ್ ಅನ್ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ.
- 12 ಅಂಕಿಯ ಆಧಾರ್ ಸಂಖ್ಯೆಯನ್ನ ನಮೂದಿಸುವ ಮೂಲಕ ಲಾಗ್ ಇನ್ ಆಗಿ.
- ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸೆಂಡ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಒಟಿಪಿ ಹಾಕಿದ ನಂತರ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ.
- ಈಗ ಬಯೋಮೆಟ್ರಿಕ್ ಡೇಟಾವನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಲಾಕ್ ಆಗುತ್ತದೆ.
Boat Storm Connect Plus: ಜನಪ್ರಿಯ ಸ್ಮಾರ್ಟ್ವಾಚ್ ಬ್ರ್ಯಾಂಡ್ ಬೋಟ್ನಿಂದ ಮತ್ತೊಂದು ವಾಚ್ ಬಿಡುಗಡೆ
ಇ-ಆಧಾರ್ ಪಡೆಯುವುದು ಹೇಗೆ?:
- ಅಧಿಕೃತ ಯುಐಡಿಎಐ ವೆಬ್‌ಸೈಟ್ https://uidai.gov.in/ ಗೆ ಭೇಟಿ ನೀಡಿ.
- ನಿಮ್ಮ ನೋಂದಣಿ ಸಂಖ್ಯೆ ಮತ್ತು ವಿವರ ನಮೂದಿಸಿ (ಆಧಾರ್ನಲ್ಲಿ ಇರುವಂತೆ ಬರೆಯಬೇಕು).
- ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ ಮುಂದುವರೆಯಿರಿ.
- ನಿಮ್ಮ ಮೊಬೈಲ್ ನಂಬರ್ಗೆ ಆಧಾರ್ ಅಥವಾ ದಾಖಲಾತಿ ಐಡಿ ಬಂದ ನಂತರ https://eaadhaar.uidai.gov.in/ ಭೇಟಿ ನೀಡಿ.
- ಅಲ್ಲಿ ನೀವು ಆಧಾರ್ ನಂಬರ್ ಅಥವಾ ದಾಖಲಾತಿ ಸಂಖ್ಯೆ ನಮೂದಿಸಬೇಕು.
- ಆಧಾರ್ ನಂಬರ್ ನಮೂದಿಸಿ, ವಿಳಾಸ, ಪಿನ್ ಕೋಡ್, ಸೆಕ್ಯುರಿಟಿ ಕೋಡ್ ಮತ್ತು ಮೊಬೈಲ್ ನಂಬರ್ ನಮೂದಿಸಿ.
- ನಿಮ್ಮ ಮೊಬೈಲ್ ನಂಬರ್ಗೆ ಬರುವ OTP ನಮೂದಿಸಿ ಹಾಗೂ Validate and Generat ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು ಆನ್ಲೈನ್ ಮೂಲಕವೇ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು. ಅಥವಾ ಪಿಡಿಎಫ್ ಫೈಲ್ ಮೂಲಕವೂ ಪಡೆಯಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ