iQOO Neo 8 Series: ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ 120W ಫಾಸ್ಟ್ ಚಾರ್ಜರ್ ಎರಡು ಹೊಸ ಐಕ್ಯೂ ಸ್ಮಾರ್ಟ್​ಫೋನ್

iQOO Neo 8 and iQOO Neo 8 Pro: ತನ್ನ ಫಾಸ್ಟ್ ಚಾರ್ಜರ್​ನಿಂದ ಟೆಕ್ ಪ್ರಿಯರ ನಿದ್ದೆಗೆಡಿಸಿರುವ ಐಕ್ಯೂ ನಿಯೋ 8 ಮತ್ತು ನಿಯೋ 8 ಪ್ರೊ ಫೋನ್​ನಲ್ಲಿ ಬಲಿಷ್ಠವಾದ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಕೂಡ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಪೀಚರ್ಸ್ ಇದೆ? ಎಂಬುದನ್ನು ನೋಡೋಣ.

iQOO Neo 8 Series: ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ 120W ಫಾಸ್ಟ್ ಚಾರ್ಜರ್ ಎರಡು ಹೊಸ ಐಕ್ಯೂ ಸ್ಮಾರ್ಟ್​ಫೋನ್
iQOO Neo 8 series
Follow us
Vinay Bhat
|

Updated on:May 25, 2023 | 1:22 PM

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್​ನೊಂದಿಗೆ ಮತ್ತೆ ಬಂದಿದೆ. ಕಳೆದ ವರ್ಷ ಐಕ್ಯೂ ನಿಯೋ 7 ಸರಣಿ (iQOO Neo 7 Series) ಫೋನನ್ನು ಬಿಡುಗಡೆ ಮಾಡಿ ಸದ್ದು ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಐಕ್ಯೂ ನಿಯೋ 8 (iQOO Neo 8 Series) ಸರಣಿ ಸ್ಮಾರ್ಟ್​ಫೋನ್ ಅನ್ನು ರಿಲೀಸ್ ಮಾಡಿದೆ. ಈ ಸರಣಿಯಲ್ಲಿ ಐಕ್ಯೂ ನಿಯೋ 8 ಮತ್ತು ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ತನ್ನ ಫಾಸ್ಟ್ ಚಾರ್ಜರ್​ನಿಂದ ಟೆಕ್ ಪ್ರಿಯರ ನಿದ್ದೆಗೆಡಿಸಿರುವ ಈ ಫೋನ್​ನಲ್ಲಿ ಬಲಿಷ್ಠವಾದ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಕೂಡ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಪೀಚರ್ಸ್ ಇದೆ? ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಐಕ್ಯೂ ನಿಯೋ 8 ಸರಣಿ ಸ್ಮಾರ್ಟ್‌ಫೋನ್‌ಗಳು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿವೆ. ಕೆಲವು ದಿನಗಳ ಬಳಿಕ ಭಾರತಕ್ಕೂ ಕಾಲಿಡುವ ನಿರೀಕ್ಷೆ ಇದೆ. ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್‌ 12GB RAM + 256GB ರೂಪಾಂತರದ ಬೆಲೆ ಚೀನಾದಲ್ಲಿ CNY 2,499, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 29,300ರೂ. ಇರಬಹುದು. ಅಂತೆಯೆ 12GB RAM + 512GB ಆಯ್ಕೆಗೆ CNY 2,799 (ಸುಮಾರು 32,800ರೂ.) ಬೆಲೆ ನಿಗದಿ ಮಾಡಲಾಗಿದೆ. ಇನ್ನು ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ 16GB RAM + 256GB ರೂಪಾಂತರದ ಆಯ್ಕೆಯು CNY 3,299 (ಭಾರತದಲ್ಲಿ ಅಂದಾಜು 38,700ರೂ.) ಮತ್ತು 16GB RAM + 512GB ಆಯ್ಕೆಯು CNY 3,599 (42,300ರೂ.) ಬೆಲೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ
Image
Ashwini Vaishnaw: 6ಜಿ ತಂತ್ರಜ್ಞಾನದಲ್ಲಿ ಜಗತ್ತಿನ ಮುಂದಾಳತ್ವ ವಹಿಸಬಹುದು ಭಾರತ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
Image
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೂ ಬಳಕೆಯಾಗುತ್ತಾ? ಕಲಾವಿದ ಮಾಡಿದ ಮೋಡಿ ನೋಡಿ!
Image
Nokia C32: 50 ಮೆಗಾಪಿಕ್ಸೆಲ್ ಕ್ಯಾಮೆರಾ ನೋಕಿಯಾ ಫೋನ್ ₹8,999 ದರ
Image
Boat Storm Connect Plus: ಜನಪ್ರಿಯ ಸ್ಮಾರ್ಟ್​​ವಾಚ್ ಬ್ರ್ಯಾಂಡ್ ಬೋಟ್​ನಿಂದ ಮತ್ತೊಂದು ವಾಚ್ ಬಿಡುಗಡೆ

Infinix Note 30i: ಮಾರುಕಟ್ಟೆಗೆ ಪ್ರವೇಶಿಸಿತು ಹಲವು ವೈಶಿಷ್ಟ್ಯಗಳ ಇನ್ಫಿನಿಕ್ಸ್ ಸ್ಮಾರ್ಟ್​ಫೋನ್

ಏನು ವಿಶೇಷತೆ?:

ಐಕ್ಯೂ ನಿಯೋ 8 ಮತ್ತು ನಿಯೋ 8 ಪ್ರೊ 6.78 ಇಂಚಿನ 1.5K ಅಮೋಲೆಡ್‌ ಡಿಸ್‌ಪ್ಲೇಗಳನ್ನು ಹೊಂದಿವೆ. 144Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 2160Hz PWM ಡಿಮ್ಮಿಂಗ್ ಅನ್ನು ನೀಡಲಾಗಿದೆ. ನಿಯೋ 8 ಸ್ಮಾರ್ಟ್‌ಫೋನ್​ನಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ನೀಡಿದ್ದರೆ, ನಿಯೋ 8 ಪ್ರೊನಲ್ಲಿ ಆಕ್ಟಾ-ಕೋರ್ ಮೀಡಿಯಾಟೆಕ್‌ ಡೈಮೆನ್ಸಿಟಿ 9200+ ಪ್ರೊಸೆಸರ್‌ ಅನ್ನು ಅಳವಡಿಸಲಾಗಿದೆ.

ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX866V ಸೆನ್ಸಾರ್‌ ಅನ್ನು ಹೊಂದಿದೆ. ಆದರೆ ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 MP ಸೋನಿ ಸ್ಯಾಮ್‌ಸಂಗ್‌ GNV ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿವೆ.

ಐಕ್ಯೂ ನಿಯೋ 8 ಸರಣಿ ಸ್ಮಾರ್ಟ್‌ಫೋನ್‌ಗಳು ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಜೊತೆಗೆ 120W ಅತ್ಯಂತ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಇದು 15 ನಿಮಿಷಗಳಲ್ಲಿ 0-75 ಪರ್ಸೆಂಟ್ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, 5G, 4G LTE, Wi-Fi 7, ಬ್ಲೂಟೂತ್ 5.3, GPS ಮತ್ತು NFC ಸಂಪರ್ಕವನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Thu, 25 May 23

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ