ರಿಯಲ್ಮಿ ಫೋನ್ಗಳಿಗೆ ಭಾರತದಲ್ಲಿ ದೊಟ್ಟ ಮಟ್ಟದ ಮಾರುಕಟ್ಟೆಯಿದೆ. ಬಜೆಟ್ ಫೋನ್ನಿಂದ ತೊಡಗಿ, ಪ್ರೀಮಿಯಂ ದರದವರೆಗಿನ ಹಲವು ಮಾದರಿಗಳು ಗ್ಯಾಜೆಟ್ ಲೋಕದಲ್ಲಿ ಬಿಡುಗಡೆಯಾಗುತ್ತವೆ. ಅದರಲ್ಲೂ, ಜನರ ಅಗತ್ಯಕ್ಕೆ ತಕ್ಕಂತೆ, ಉತ್ತಮ ಫೋಟೊಗ್ರಫಿ ಪ್ರಿಯರಿಗೆ ಅಗತ್ಯವಾಗಿರುವ ಸೂಕ್ತ ಕ್ಯಾಮೆರಾ ಇರುವ ಫೋನ್ಗಳು ರಿಯಲ್ಮಿ ವೈಶಿಷ್ಟ್ಯ. ಈ ಬಾರಿ ರಿಯಲ್ಮಿ, ನರ್ಜೊ ಸರಣಿಯಲ್ಲಿ ನೂತನ ಫೋನ್ ಒಂದನ್ನು ಬಿಡುಗಡೆ ಮಾಡಿದೆ. ರಿಯಲ್ಮಿ Narzo N53 ಫೋನ್, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೊಸ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.