Xiaomi Civi 3: ಒಂದಲ್ಲ ಎರಡು ಸೆಲ್ಫಿ ಕ್ಯಾಮೆರಾ: ಮಾರುಕಟ್ಟೆಯನ್ನು ನಡುಗಿಸಿದ ಶವೋಮಿ Civi 3 ಸ್ಮಾರ್ಟ್​ಫೋನ್

ನೂತನ ಪ್ರಯೋಗದೊಂದಿಗೆ ಹೊಸ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡುವ ಶವೋಮಿಯ ಹೊಸ Civi 3 ಸ್ಮಾರ್ಟ್‌ಫೋನ್​ನಲ್ಲಿ ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ ಸಿಸ್ಟಂ ನೀಡಲಾಗಿದೆ.

Xiaomi Civi 3: ಒಂದಲ್ಲ ಎರಡು ಸೆಲ್ಫಿ ಕ್ಯಾಮೆರಾ: ಮಾರುಕಟ್ಟೆಯನ್ನು ನಡುಗಿಸಿದ ಶವೋಮಿ Civi 3 ಸ್ಮಾರ್ಟ್​ಫೋನ್
Xiaomi Civi 3
Follow us
|

Updated on: May 26, 2023 | 1:16 PM

ಇಂದು ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆ ಸಾಕಷ್ಟು ವಿಸ್ತಾರಗೊಂಡಿದೆ. ಹಲವು ಕಂಪನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀಗಾಗಿ ಸಾಧಾರಣ ಫೀಚರ್​ಗಳಿರುವ ಹಾಗೂ ಇದಕ್ಕೆ ದುಬಾರಿ ಬೆಲೆ ಇರುವ ಮೊಬೈಲ್​ಗಳಿಗೆ ಬೇಡಿಕೆ ಕಮ್ಮಿ. ಏನಾದರು ಹೊಸ ತನದೊಂದಿಗೆ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆದರೆ ಮಾತ್ರ ಅದು ಸದ್ದು ಮಾಡುತ್ತದೆ. ಈ ಟ್ರಿಕ್ ಉಪಯೋಗಿಸುವಲ್ಲಿ ಶವೋಮಿ (Xiaomi) ಸಂಸ್ಥೆ ಎತ್ತಿದ ಕೈ. ಶವೋಮಿ ಯಾವುದೇ ಫೋನ್ ರಿಲೀಸ್ ಮಾಡಿದರೂ ಅದರಲ್ಲಿ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಇದೀಗ ಶವೋಮಿ ಸಂಸ್ಥೆ ಮಾರುಕಟ್ಟೆಗೆ ವಿಶೇಷವಾದ ಶವೋಮಿ Civi 3 (Xiaomi Civi 3) ಎಂಬ ಸ್ಮಾರ್ಟ್‌ಫೋನ್​ನೊಂದಿಗೆ ಬಂದಿದೆ. ಹಾಗಾದರೆ ಇದರಲ್ಲಿ ಏನು ವಿಶೇಷತೆ ಇದೆ?, ಬೆಲೆ ಎಷ್ಟು? ಎಂಬುದನ್ನು ನೋಡೋಣ.

ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ ಸಿಸ್ಟಂ:

ನೂತನ ಪ್ರಯೋಗದೊಂದಿಗೆ ಹೊಸ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡುವ ಶವೋಮಿಯ ಹೊಸ Civi 3 ಸ್ಮಾರ್ಟ್‌ಫೋನ್​ನಲ್ಲಿ ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ ಸಿಸ್ಟಂ ನೀಡಲಾಗಿದೆ. ಇದು ಇಡೀ ಮೊಬೈಲ್‌ ಮಾರುಕಟ್ಟೆಯನ್ನೇ ದಂಗಾಗುವಂತೆ ಮಾಡಿದೆ. ಇದಿಷ್ಟೆ ಅಲ್ಲದೆ ಈ ಫೋನಿನ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ ಟ್ರೆಂಡ್‌ ಸೃಷ್ಟಿಸಿದೆ. ಉಳಿದಂತೆ ಇದರ ವಿಶೇಷತೆ ಏನಿದೆ ಎಂಬುದನ್ನು ಮುಂದೆ ಓದಿ.

Ashwini Vaishnaw: 6ಜಿ ತಂತ್ರಜ್ಞಾನದಲ್ಲಿ ಜಗತ್ತಿನ ಮುಂದಾಳತ್ವ ವಹಿಸಬಹುದು ಭಾರತ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಇದನ್ನೂ ಓದಿ
Image
HTC U23 Pro: ಗ್ಯಾಜೆಟ್ ಮಾರುಕಟ್ಟೆಗೆ ಬಂತು ಹೊಸ ಎಚ್​ಟಿಸಿ ಸ್ಮಾರ್ಟ್​ಫೋನ್
Image
Realme Narzo N53: ಬಜೆಟ್ ದರಕ್ಕೆ ಲಭ್ಯವಾಗುತ್ತಿದೆ ಸೂಪರ್ ರಿಯಲ್​ಮಿ ಸ್ಮಾರ್ಟ್​ಫೋನ್
Image
Tech Tips: ಆಧಾರ್ ಕಾರ್ಡ್ ಕಳೆದು ಹೋದರೆ ಟೆನ್ಶನ್ ಬೇಡ: ಮರಳಿ ಪಡೆಯಲು ಹೀಗೆ ಮಾಡಿ ಸಾಕು
Image
iQOO Neo 8 Series: ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ 120W ಫಾಸ್ಟ್ ಚಾರ್ಜರ್ ಎರಡು ಹೊಸ ಐಕ್ಯೂ ಸ್ಮಾರ್ಟ್​ಫೋನ್

ಬೆಲೆ ಎಷ್ಟು?:

ಶವೋಮಿ Civi 3 ಪ್ರಸ್ತುತ ಚೀನಾದ ಮಾರುಕಟ್ಟೆಗೆ ಅಪ್ಪಳಿಸಿದೆ. ಇದರ ಬೇಸ್‌ ಮಾಡೆಲ್‌ 12GB RAM + 256GB ಆಯ್ಕೆಯು CNY 2499, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 29,300ರೂ. ಇರಬಹುದು. 12GB RAM + 512GB ಆಯ್ಕೆಯು CNY 2,699 (ಅಂದಾಜು 31,600ರೂ). ಈ ಫೋನ್‌ ಅಡ್ವೆಂಚರ್ ಗೋಲ್ಡ್, ಕೊಕೊನಟ್ ಗ್ರೇ, ಮಿಂಟ್ ಗ್ರೀನ್ ಮತ್ತು ರೋಸ್ ಪರ್ಪಲ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಫೀಚರ್ಸ್ ಏನಿದೆ?:

ಈ ಸ್ಮಾರ್ಟ್‌ಫೋನ್‌ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 240Hz ಟಚ್‌ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್‌ ಪಡೆದುಕೊಂಡಿರುವುದು ವಿಶೇಷ. ಬಲಿಷ್ಠವಾದ 4nm ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8200 5G SoC ಪ್ರೊಸೆಸರ್‌ ಹೊಂದಿದೆ. ಇದಕ್ಕೆ ಪುರಕವಾಗಿ ಮಾಲಿ-G610 GPU ಸಪೋರ್ಟ್‌ ಕೂಡ ನೀಡಲಾಗಿದೆ. ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಶವೋಮಿ Civi 3 ಫೋನಿನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX800 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಮುಂಭಾಗ 32 ಮೆಗಾಪಿಕ್ಸೆಲ್ ಆಟೋಫೋಕಸ್ ಲೆನ್ಸ್‌ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಕ್ಯಾಮೆರಾವನ್ನು ನೀಡಲಾಗಿರುವುದು ಅಚ್ಚರಿ ನೀಡಿದೆ. ಅಂದರೆ ಮುಂದೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಅಳವಡಿಸಿಲಾಗಿದೆ.

4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. 4ಜಿ ಎಲ್​ಟಿಇ, ಯುಎಸ್‌ಬಿ ಟೈಪ್-ಸಿ ಪೋರ್ಟ್‌, NFC, Wi-Fi 6, ಡ್ಯುಯೆಲ್ ಸಿಮ್ ಕಾರ್ಡ್ ಸ್ಲಾಟ್, ಬ್ಲೂಟೂತ್ v5.3 ಮತ್ತು GPS ಸಂಪರ್ಕವನ್ನು ಬೆಂಬಲಿಸಲಿದೆ. ಇದಲ್ಲದೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ