ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೂ ಬಳಕೆಯಾಗುತ್ತಾ? ಕಲಾವಿದ ಮಾಡಿದ ಮೋಡಿ ನೋಡಿ!

ಪ್ರೀತಿ ಭಟ್​, ಗುಣವಂತೆ

| Edited By: ಗಂಗಾಧರ​ ಬ. ಸಾಬೋಜಿ

Updated on: May 24, 2023 | 7:13 PM

ಇಲ್ಲೊಬ್ಬ ಕಲಾವಿದ ದೇಶದ ವಿವಿಧ ರಾಜ್ಯಗಳಲ್ಲಿ 'ಮೆಟ್ರೋಗಳ' ಕೆಲವು ಕುತೂಹಲಕಾರಿ ಎಐ ಆಧಾರಿತ ಚಿತ್ರಗಳನ್ನು ರಚಿಸಿದ್ದಾನೆ. ಸಾಹಿದ್ ಎಂಬ ಈ ಕಲಾವಿದ ಇತ್ತೀಚಿನ ದಿನಗಳಲ್ಲಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಹಾಗಾದರೆ ಏನಿದು ಇಲ್ಲಿದೆ ಮಾಹಿತಿ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೂ ಬಳಕೆಯಾಗುತ್ತಾ? ಕಲಾವಿದ ಮಾಡಿದ ಮೋಡಿ ನೋಡಿ!
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ಲ್ಲಿ ಅರಳಿದ ಕಲೆ
Follow us

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ (artificial intelligence) ಬಳಸಿಕೊಳ್ಳುವುದು ಒಂದು ಕ್ರೇಜ್ ಆಗಿದೆ. ಅದರಲ್ಲಿಯೂ ಜನರ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇದರಿಂದಾಗಿ ಕಲಾವಿದರು ಮಂತ್ರಮುಗ್ಧಗೊಳಿಸುವಂತ ಕಲಾಕೃತಿಗಳನ್ನು ರಚಿಸಲು ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಈ ರೀತಿಯ ಕಲಾಕೃತಿಗಳು ಮೂಡಿ ಬಂದಿರುವುದನ್ನು ನೀವು ನೋಡಿರಬಹುದು. ಇದೆ ರೀತಿಯಲ್ಲಿ ಇತ್ತೀಚೆಗೆ, ಸಾಹಿದ್ ಎಂಬ ಕಲಾವಿದ ದೇಶದ ವಿವಿಧ ರಾಜ್ಯಗಳಲ್ಲಿ ‘ಮೆಟ್ರೋಗಳ’ ಕೆಲವು ಕುತೂಹಲಕಾರಿ ಎಐ ಆಧಾರಿತ ಚಿತ್ರಗಳನ್ನು ರಚಿಸಿದ್ದಾನೆ. ಈ ಕಲಾಕೃತಿಗಳು ಈಗ ಎಲ್ಲೆಡೆ ವೈರೆಲ್ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಈಗಾಗಲೇ ಇಂತಹ ಕಲಾಕೃತಿಗಳ ಎರಡು ಭಾಗಗಳನ್ನು ಹಂಚಿಕೊಂಡಿರುವ ಸಾಹಿದ್ ಈಗ ಕಾನ್ಪುರ, ಚೆನ್ನೈ, ಛತ್ತೀಸ್ಗಢ, ಕೋಟಾ, ಸೂರತ್, ಹರಿಯಾಣ ಮತ್ತು ಕನ್ಯಾಕುಮಾರಿಯಂತಹ ರಾಜ್ಯಗಳನ್ನು ಒಳಗೊಂಡ ಬಹುನಿರೀಕ್ಷಿತ ಮೂರನೇ ಕಂತನ್ನು ಪ್ರಸ್ತುತಪಡಿಸುತ್ತಿದ್ದಾನೆ. ಗಮನಾರ್ಹವಾಗಿ, ಈ ಎಲ್ಲಾ ಆಕರ್ಷಕ ಎಐ ಚಿತ್ರಗಳನ್ನು ಮಿಡ್ಜರ್ನಿ(ಒಂದು ಉತ್ಪಾದಕ ಕೃತಕ ಬುದ್ಧಿಮತ್ತೆ) ನಲ್ಲಿ ರಚಿಸಲಾಗಿದೆ, ಹಾಗಾಗಿ ಈ ಕಲಾಕೃತಿಗೆ ಅನನ್ಯತೆಯ ಅಂಶವನ್ನು ಸೇರಿಸಿದಂತಿದೆ.

ಇದನ್ನೂ ಓದಿ: Nokia C32: ನೋಕಿಯಾದಿಂದ ದಿಢೀರ್ C32 ಸ್ಮಾರ್ಟ್​ಫೋನ್ ಬಿಡುಗಡೆ: ಏನಿದೆ ಫೀಚರ್ಸ್?, ಬೆಲೆ ಎಷ್ಟು?

ಈ ಮೂರನೇ ಕಂತಿನ ಕಾನ್ಪುರ ಚಿತ್ರದಲ್ಲಿ, ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಪಾನ್ ಮಸಾಲಾ ರಾಶಿಗಳನ್ನು ಹಿಡಿದುಕೊಂಡು, ಒಂದು ಸ್ಥಳೀಯ ಜೀವನವನ್ನು ನಿರೂಪಿಸಿರುವುದನ್ನು ನೀವು ಕಾಣಬಹುದು. ಮತ್ತೊಂದು ಚಿತ್ರದಲ್ಲಿ ಕೋಟಾಕ್ಕೆ ತೆರಳುವ ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರ ತೊಟ್ಟು ನಿಂತಿರುವುದನ್ನು ಚಿತ್ರಿಸಲಾಗಿದೆ. ಇದು ನಗರದ ಶೈಕ್ಷಣಿಕ ವಾತಾವರಣವನ್ನು ತೋರಿಸುತ್ತದೆ.

ಸೂರತ್ ಚಿತ್ರವು ಮೆಟ್ರೋದೊಳಗೆ ಹೊಳೆಯುವ ವಜ್ರಗಳನ್ನು ಪ್ರದರ್ಶಿಸುತ್ತಿದೆ. ಇದು ವಜ್ರ ಉದ್ಯಮದೊಂದಿಗೆ ನಗರದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಹರಿಯಾಣದಲ್ಲಿ, ಜನರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಕೋಲುಗಳನ್ನು ಹಿಡಿದಿದ್ದಾರೆ. ಇದು ಅಲ್ಲಿನ ಹರ್ಯಾನ್ವಿ ಸಂಸ್ಕೃತಿಯನ್ನು ಸಂಕೇತಿಸುತ್ತದೆ. ಇದೆಲ್ಲದಕ್ಕಿಂತ ಮಿಗಿಲಾಗಿ, ಸೂಪರ್ ಸ್ಟಾರ್ ರಜನಿಕಾಂತ್ ಅವರು ಕಪ್ಪು ಸನ್ಗ್ಲಾಸ್ ಧರಿಸಿ ಮೆಟ್ರೋದೊಳಗೆ ಕುಳಿತಿದ್ದು ಇದು ಚೆನ್ನೈನ ಪ್ರತಿಬಿಂಬಿಸುವ ಅತ್ಯಂತ ಗಮನಾರ್ಹವಾದ ಎಐ ರಚಿಸಿದ ಚಿತ್ರ ಎನ್ನಲಾಗಿದೆ.

ಸಾಹಿದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಅದ್ಭುತ ಎಐ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, “ಭಾರತದ ಮೆಟ್ರೋಗಳು, ಪಾರ್ಟ್ 3 ಮಿಡ್ಜರ್ನಿ ಎಐ ಬಳಸಿ ತಯಾರಿಸಿದ ಸ್ವೈಪ್ ಲೆಫ್ಟ್” ಆನ್ಲೈನ್ ಪ್ರೇಕ್ಷಕರನ್ನು ಮತ್ತಷ್ಟು ಆಕರ್ಷಿಸುತ್ತದೆ. ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ: WhatsApp Update: ಮೆಸೇಜ್ ಕಳುಹಿಸಿದ ಮೇಲೂ ಎಡಿಟ್ ಮಾಡಿ, ಬಂದಿದೆ ಹೊಸ ಅಪ್​ಡೇಟ್

ಸಾಹಿದ್ ಅವರ ಸರಣಿಯ ಮೊದಲ ಭಾಗವು ರಾಜಸ್ಥಾನ, ಗುಜರಾತ್ ಮತ್ತು ಕೇರಳದಂತಹ ರಾಜ್ಯಗಳು ಮತ್ತು ದೆಹಲಿ, ಕೋಲ್ಕತಾ ಮತ್ತು ಮುಂಬೈನಂತಹ ಪ್ರಮುಖ ನಗರಗಳ ಮರುಕಲ್ಪಿತ ಮೆಟ್ರೋ ಮಾರ್ಗವನ್ನು ಪ್ರಸ್ತುತಪಡಿಸಿತು. ಕೊಲ್ಕತ್ತಾದ ಮೆಟ್ರೋವನ್ನು ಮೀನು ಮಾರಾಟಗಾರನೊಂದಿಗೆ ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಇದು ಸಮುದ್ರಾಹಾರದ ಮೇಲಿನ ನಗರದ ಪ್ರೀತಿಗೆ ಗೌರವ ಸಲ್ಲಿಸುತ್ತದೆ.

ಗುಜರಾತ್ ಆವೃತ್ತಿಯು ರಾಜ್ಯದ ಜನಪ್ರಿಯ ತಿಂಡಿಯಾದ ಧೋಕ್ಲಾಗಳ ಆಕರ್ಷಕ ರಾಶಿಯನ್ನು ಪ್ರದರ್ಶಿಸಲಾಗಿದೆ. ಮುಂಬೈನ ಅಪ್ರತಿಮ ವಡಾ ಪಾವ್, ಮನಮೋಹಕ ಸ್ಟ್ರೀಟ್ ಫುಡ್ ಫೇವರಿಟ್ ಕೂಡ ಪ್ರಮುಖವಾಗಿ ಕಾಣಿಸಿಕೊಂಡಿದೆ.

ಎರಡನೇ ಕಂತಿನಲ್ಲಿ, ಕಲಾವಿದ ತನ್ನ ಗಮನವನ್ನು ಹೈದರಾಬಾದ್, ಬೆಂಗಳೂರು, ನಾಗ್ಪುರ ಮತ್ತು ಒಡಿಶಾ, ಕಾಶ್ಮೀರ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳ ಮೆಟ್ರೋ ಜಾಲಗಳತ್ತ ಕಣ್ಣು ಹಾಯಿಸಿದ್ದು, ಹೈದರಾಬಾದ್ ಮೆಟ್ರೋವನ್ನು ಕಾಲ್ಪನಿಕವಾಗಿ ರೋಮಾಂಚಕ ಪಾಕಶಾಲೆಯ ಸ್ವರ್ಗವೆಂದು ಚಿತ್ರಿಸಿದ್ದಾನೆ. ಇದು ನಗರದ ವೈವಿಧ್ಯಮಯ ಪಾಕ ರುಚಿ ಮತ್ತು ಭಕ್ಷ್ಯಗಳನ್ನು ಪ್ರದರ್ಶಿಸುತ್ತದೆ. ನಾಗ್ಪುರದ ಪ್ರಸಿದ್ಧ ಕಿತ್ತಳೆ ಹಣ್ಣುಗಳು ನಗರದ ಕೃಷಿ ಪರಂಪರೆಯ ಸಾರವನ್ನು ಸೆರೆಹಿಡಿಯುವ ಮೂಲಕ ಕೇಂದ್ರ ಸ್ಥಾನವನ್ನು ಪಡೆದುಕೊಂಡವು. ಇದಲ್ಲದೆ, ಬಿಹಾರದಲ್ಲಿ, ಸಾಂಪ್ರದಾಯಿಕ ರುಚಿಕರವಾದ ಖಾದ್ಯವಾದ ಲಿಟ್ಟಿಗಳ ರಾಶಿಯೊಂದಿಗೆ ಮಾರಾಟಗಾರನನ್ನು ಚಿತ್ರಿಸಲಾಗಿದೆ, ಇದು ಕಲಾಕೃತಿಗೆ ಅಧಿಕೃತತೆಯ ಸ್ಪರ್ಶವನ್ನು ನೀಡುತ್ತದೆ.

ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್ ಗಳನ್ನು ಗಳಿಸಿದ್ದು, ಜನರು ಅವರ ಕಲಾಕೃತಿಯನ್ನು ಶ್ಲಾಘಿಸಿದ್ದಾರೆ. ಆದರೆ, ಕೆಲವರು ಈ ಚಿತ್ರಗಳ ಬಗ್ಗೆ ಅಸಮಾಧಾನಗೊಂಡಂತೆ ತೋರುತ್ತದೆ. ಇದರಲ್ಲಿ ಒಬ್ಬರು “ನಮ್ಮ ಸಂಸ್ಕೃತಿಯ ಬಗ್ಗೆ ಎಐಗೆ ತಿಳಿದಿರುವ ವಿವರಗಳು, ರಾಜ್ಯವ್ಯಾಪಿ ಪ್ರವೃತ್ತಿಗಳು, ಎಲ್ಲವೂ ಸೂಪರ್ ಆಗಿದೆ ಗೂಗಲ್ ಈ ಬಗ್ಗೆ ಸಾಕಷ್ಟು ಡೇಟಾವನ್ನು ಹೊಂದಿದೆ ಆದರೆ ಎಐ ಅದನ್ನು ಬಹಳ ನಿಖರವಾಗಿ ಬಳಸುತ್ತಿದೆ ಎಂದು ಇನ್ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು “ಕಾನ್ಪುರ ಚಿತ್ರದಲ್ಲಿ ಗುಟ್ಕಾ ಇಡುವುದನ್ನು ನೋಡಿ ಬೇಸರವಾಗಿದೆ. ನಿಜವಾದ ಇತಿಹಾಸಕ್ಕಿಂತ ಹೆಚ್ಚಿನ ಮೀಮ್ಗಳನ್ನು ನೀಡಲಾಗುತ್ತದೆ !!,” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಛತ್ತೀಸ್ಗಢವು ಅಕ್ಕಿಯ ಬಟ್ಟಲು ಬ್ರೋ! ಯೆ ಥೋಡಾ ರಿಲೇಟಬಲ್ ನಹೀ ಹೈ” ಎಂದು ಮತ್ತೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಹೇಳಿದ್ದಾರೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada