5G Smartphones: ಅಮೆಜಾನ್ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ಅತ್ಯುತ್ತಮ 5G ಸ್ಮಾರ್ಟ್ಫೋನ್ಸ್: ಆಫರ್ ಮಿಸ್ ಮಾಡ್ಬೇಡಿ
ಅಮೆಜಾನ್ನಲ್ಲಿ 5ಜಿ (5G) ಮೊಬೈಲ್ಗಳ ಮೇಲೆ ಶೇ. 40 ರಷ್ಟು ರಿಯಾಯತಿ ಘೋಷಣೆ ಮಾಡಲಾಗಿದೆ. ಇಲ್ಲಿದೆ ನೋಡಿ ಅತಿ ಕಡಿಮೆ ಬೆಲೆಗೆ ಅಮೆಜಾನ್ನಲ್ಲಿ ಖರೀದಿಸಬಹುದಾದ ಸ್ಮಾರ್ಟ್ಫೋನ್ಗಳು.

ಮುಖ್ಯಾಂಶಗಳು
- ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ 5G ಸ್ಮಾರ್ಟ್ಫೋನ್ಸ್
- ಅಮೆಜಾನ್ ಆಫರ್ ಮಿಸ್ ಮಾಡ್ಬೇಡಿ
- ಮೊಬೈಲ್ಗಳ ಮೇಲೆ ಶೇ. 40 ರಷ್ಟು ರಿಯಾಯತಿ
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ (Amazon) ಯಾವುದೇ ಸೇಲ್ ನಡೆಯುತ್ತಿಲ್ಲ. ಹೀಗಿದ್ದರೂ ಕೆಲ ಪ್ರಾಡಕ್ಟ್ಗಳ ಮೇಳೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಸ್ಮಾರ್ಟ್ಫೋನ್ಗಳಿಗೂ ಬಂಪರ್ ಆಫರ್ ಘೋಷಿಸಲಾಗಿದೆ. ಮುಖ್ಯವಾಗಿ 5ಜಿ ಬೆಂಬಲ ಪಡೆದುಕೊಂಡಿರುವ ಕೆಲ ಟಾಪ್ ಮೊಬೈಲ್ಗಳು (Smartphone) ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಈಗ 5ಜಿ ಲಭ್ಯ ಆಗುತ್ತಿರುವುದರಿಂದ 5ಜಿ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೆಚ್ಚಿದೆ. ಇದಕ್ಕಾಗಿಯೆ ಅಮೆಜಾನ್ನಲ್ಲಿ 5ಜಿ (5G) ಮೊಬೈಲ್ಗಳ ಮೇಲೆ ಶೇ. 40 ರಷ್ಟು ರಿಯಾಯತಿ ಘೋಷಣೆ ಮಾಡಲಾಗಿದೆ. ಇಲ್ಲಿದೆ ನೋಡಿ ಅತಿ ಕಡಿಮೆ ಬೆಲೆಗೆ ಅಮೆಜಾನ್ನಲ್ಲಿ ಖರೀದಿಸಬಹುದಾದ ಸ್ಮಾರ್ಟ್ಫೋನ್ಗಳು.
ಐಕ್ಯೂ 11 5G: ಈ ಬಲಿಷ್ಠ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್, ಅದ್ಭುತವಾದ 2K E6 AMOLED ಡಿಸ್ ಪ್ಲೇ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದರ ಬೆಲೆ ರೂ. 49,999, ಮತ್ತು 5,000 ರೂ. ವರೆಗೆ ಎಕ್ಸ್‌ಚೇಂಜ್ ಬೋನಸ್ ಆಫರ್ ಮತ್ತು 9 ತಿಂಗಳವರೆಗೆ ನೋ-ಕಾಸ್ಟ್ EMI ಆಫರ್ ಅನ್ನು ಪಡೆಯಬಹುದು.
ಐಕ್ಯೂ ನಿಯೋ 6 5G: ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 870 5G ಪ್ರೊಸೆಸರ್, ನಯವಾದ 120Hz E4 AMOLED ಡಿಸ್ ಪ್ಲೇ ಮತ್ತು ದೀರ್ಘಾವಧಿಯ ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ರೂ. 24,999, ಇದರೊಂದಿಗೆ 2,000 ರೂ. ಗಳ ಎಕ್ಸ್‌ಚೇಂಜ್ ಆಫರ್ ಘೋಷಿಸಲಾಗಿದೆ.
ರೆಡ್ಮಿ ನೋಟ್ 12 5G: ಈ ಫೋನ್ 120Hz ರಿಫ್ರೆಶ್ರೇಟ್ನ ಸೂಪರ್ AMOLED ಡಿಸ್ ಪ್ಲೇ ಹೊಂದಿದೆ. ಜೊತೆಗೆ ಶಕ್ತಿಶಾಲಿ Snapdragon 4 Gen 1 5G ಪ್ರೊಸೆಸರ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ಬೆಲೆ 14,999 ರೂ. ಆಗಿದೆ.
ಶವೋಮಿ 13 Pro: ಶವೋಮಿ 13 Pro ಪ್ರಮುಖ Snapdragon 8 Gen 2, 4nm ಪ್ರೊಸೆಸರ್, ಅದ್ಭುತವಾದ 2K 120Hz E6 AMOLED ಡಿಸ್ ಪ್ಲೇ ಜೊತೆಗೆ ಬೊಂಬಾಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬೆಲೆ ರೂ. 71,999 ಆಗಿದೆ. ಅಲ್ಲದೆ 10,000 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಪಡೆಯಬಹುದು.
ಒನ್ಪ್ಲಸ್ ಕಂಪನಿಯ ಒನ್ಪ್ಲಸ್ 10 Pro 5Gಫೋನ್ ಕ್ಯಾಮೆರಾ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಅಲ್ಲದೆ ದೊಡ್ಡ ಡಿಸ್ ಪ್ಲೇ, ಶಕ್ತಿಯುತ ಪ್ರೊಸೆಸರ್ ಮತ್ತು ದೀರ್ಘಕಾಲೀನ ಬ್ಯಾಟರಿಯನ್ನು ಒಳಗೊಂಡಿದೆ. ಇದರ ಬೆಲೆ ರೂ 55,499 ರೂ. ಇದಕ್ಕೆ ಕೂಡ 10,000 ರೂ. ವರೆಗೆ ಎಕ್ಸ್‌ಚೇಂಜ್ ಬೋನಸ್ ಆಫರ್ ಮತ್ತು 9 ತಿಂಗಳವರೆಗೆ ಯಾವುದೇ ವೆಚ್ಚದ EMI ಆಫರ್ ಅನ್ನು ಪಡೆಯಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Sun, 28 May 23








