Tech Tips: ನಿಮ್ಮಲ್ಲಿರುವ ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ

ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಆಗಬೇಕಾದರೂ, ಪ್ರಸ್ತುತ ಇರುವ ನೆಟ್‌ವರ್ಕ್‌ನಲ್ಲಿ ಕನಿಷ್ಟ 90 ದಿನ ಪೂರೈಸಬೇಕು. ಅದಕ್ಕೂ ಮುಂಚೆ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಸಾಧ್ಯವಿಲ್ಲ.

Tech Tips: ನಿಮ್ಮಲ್ಲಿರುವ ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತೇ?; ಇಲ್ಲಿದೆ ಮಾಹಿತಿ
Sim Port
Follow us
Vinay Bhat
|

Updated on: May 29, 2023 | 6:55 AM

ಇಂದು ಬಹುತೇಕ ಕೆಲಸಗಳು ಫೋನ್ ಮೂಲಕವೇ ನಡೆಯುವುದರಿಂದ ಮೊಬೈಲ್​ನಲ್ಲಿ ಸಿಮ್ (Sim card), ನೆಟ್​ವರ್ಕ್, ಡೇಟಾ (Mobile Data) ಅಗತ್ಯವಾಗಿ ಬೇಕಾಗುತ್ತದೆ. ಆದರೆ, ಕೆಲವು ಸಿಮ್​ಗಳಲ್ಲಿ ನಿಧಾನಗತಿಯ ವೇಗ, ಕೆಲವೊಂದು ಪ್ರದೇಶದಲ್ಲಿ ಅಸಮರ್ಪಕ ನೆಟ್‌ವರ್ಕ್ ಕವರೇಜ್ ಅಥವಾ ಇತರೆ ಕಾರಣಗಳಿಗಾಗಿ ಬಳಕೆದಾರರು ಮೊಬೈಲ್‌ ನಂಬರ್ ಪೋರ್ಟ್‌ (Mobile Number Port) ಮಾಡಲು ಮುಂದಾಗುತ್ತಾರೆ. ಅನೇಕರಿಗೆ ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?, ಈ ಬಗ್ಗೆ ಟ್ರಾಯ್ ನಿಯಮ ಏನು ಹೇಳುತ್ತೆ?, ಪೋರ್ಟ್ ಮಾಡಲು ಸುಲಭ ದಾರಿ ಯಾವುದು? ಎಂಬ ಬಗ್ಗೆ ತಿಳಿದಿರುವುದಿಲ್ಲ. ಹಾಗಿದ್ರೆ ಈ ಸ್ಟೋರಿ ಓದಿ.

ದೇಶದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹೊಸ ಎಂಎನ್‌ಪಿ, ಅಂದರೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಗ್ರಾಹಕರು ಯಾವುದೇ ಸಮಸ್ಯೆಯಿಲ್ಲದೆ ಸುಲಭದಲ್ಲಿ ಮೊಬೈಲ್ ನಂಬರ್ ಪೋರ್ಟ್ ಮಾಡಿಕೊಳ್ಳಬಹುದು. ಅಲ್ಲದೆ ಒಂದು ಮೊಬೈಲ್ ಸಂಖ್ಯೆಯನ್ನು ನೀವು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದು. ಇದಕ್ಕೆ ಯಾವುದೇ ನಿರ್ದಿಷ್ಟ ತಡೆಯಿಲ್ಲ.

ಆದರೆ, ನಿಮ್ಮ ಮೊಬೈಲ್ ನಂಬರ್ ಪೋರ್ಟ್ ಆಗಬೇಕು ಎಂದರೆ ಕೆಲವು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮೊಬೈಲ್ ನಂಬರ್ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಕೊಳ್ಳಲು ಬಯಸಿದ್ದರೆ, ಅದಕ್ಕೂ ಮುಂಚೆ ಹಳೆಯ ಕಂಪನಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಮೊತ್ತವನ್ನು ಪಾವತಿಸಿರಬೇಕು. ಅಂದರೆ ವಿಶೇಷವಾಗಿ, ಪೋಸ್ಟ್ ಪೋಯ್ಡ್ ಗ್ರಾಹಕರು, ತಿಂಗಳ ಬಿಲ್ ಮೊತ್ತ ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಟೆಲಿಕಾಂ ಸೇವಾದಾರ ಕಂಪನಿಗೆ ಪಾಲಿಸುವುದು ಕಡ್ಡಾಯ. ಬಾಕಿ ಉಳಿಸಿಕೊಂಡಿದ್ದರೆ, ಪೋರ್ಟಿಂಗ್ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ
Image
Google Street View: ಗೂಗಲ್ ಸ್ಟ್ರೀಟ್ ವ್ಯೂ ಇದೀಗ ಭಾರತದ ಹಳ್ಳಿ-ಪಟ್ಟಣಗಳಲ್ಲಿ ಲಭ್ಯ: ಏನಿದರ ಪ್ರಯೋಜನ
Image
5G Smartphones: ಅಮೆಜಾನ್​ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ಅತ್ಯುತ್ತಮ 5G ಸ್ಮಾರ್ಟ್​ಫೋನ್ಸ್: ಆಫರ್ ಮಿಸ್ ಮಾಡ್ಬೇಡಿ
Image
Tech Tips: ಮೊಬೈಲ್​ನಲ್ಲಿ 128GB ಸ್ಟೊರೇಜ್ ಇದ್ರೂ ಸಾಕಾಗ್ತಿಲ್ವಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Image
Daam Virus: ಪ್ಲೇ ಸ್ಟೋರ್​ನಲ್ಲಿ ಅಪಾಯಕಾರಿ ಆ್ಯಪ್ ಪತ್ತೆ: ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

Realme 11 Pro+: ಜೂನ್ 8ಕ್ಕೆ ಭಾರತಕ್ಕೆ ಅಪ್ಪಳಿಸಲಿದೆ ಬರೋಬ್ಬರಿ 200MP ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್

ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಆಗಬೇಕಾದರೂ, ಪ್ರಸ್ತುತ ಇರುವ ನೆಟ್‌ವರ್ಕ್‌ನಲ್ಲಿ ಕನಿಷ್ಟ 90 ದಿನ ಪೂರೈಸಬೇಕು. ಅದಕ್ಕೂ ಮುಂಚೆ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಸಾಧ್ಯವಿಲ್ಲ. ಅಲ್ಲದೆ, ಸಿಮ್ ಕಾರ್ಡ್ ಹೊಂದಿರುವ ವ್ಯಕ್ತಿ ಮತ್ತೋರ್ವ ವ್ಯಕ್ತಿಗೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದ್ದರೆ, ಅಂತಹ ಸಂದರ್ಭದಲ್ಲಿ ಎಂಎನ್‌ಪಿ ಸಾಧ್ಯವಾಗುವುದಿಲ್ಲ.

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

  • ಸಿಮ್ ಪೋರ್ಟ್‌ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯ.
  • ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡಬೇಕು.
  • ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್‌-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡಿ.
  • ಆ ಬಳಿಕ UPC ಎಸ್‌ಎಮ್‌ಎಸ್‌ ಲಭ್ಯವಾಗುತ್ತದೆ.
  • ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿ.
  • Customer Acquisition Form (CAF) ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡಬೇಕು.

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಬಹುದಾಗಿದೆ. ಈ ಎಮ್‌ಎನ್‌ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಆಗುತ್ತಿತ್ತು. ಆದ್ರೆ ಟ್ರಾಯ್‌ನ ಹೊಸ ಎಮ್‌ಎನ್‌ಪಿ ನಿಯಮ ಜಾರಿಯಿಂದ ಈಗ ಆದಷ್ಟು ಬೇಗ ಸಿಮ್‌ ಫೋರ್ಟ್ ಆಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ