AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಮೊಬೈಲ್​ನಲ್ಲಿ 128GB ಸ್ಟೊರೇಜ್ ಇದ್ರೂ ಸಾಕಾಗ್ತಿಲ್ವಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ

ಮೆಮೊರಿ ಕಾರ್ಡ್ ಬೇಡ ಎನ್ನುವವರು ಕ್ಲೌಡ್ ಸ್ಟೋರೆಜ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದನ್ನು ಆಕ್ಸಿಸ್ ಮಾಡಲು ನೀವು ಹೆಚ್ಚುವರಿ ಇಂಟರ್ನೆಟ್ ಹೊಂದಿರಬೇಕಾಗುತ್ತದೆ.

Tech Tips: ಮೊಬೈಲ್​ನಲ್ಲಿ 128GB ಸ್ಟೊರೇಜ್ ಇದ್ರೂ ಸಾಕಾಗ್ತಿಲ್ವಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Smartphone Memory Full
Follow us
Vinay Bhat
|

Updated on: May 28, 2023 | 6:55 AM

ಇಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೆಚ್ಚಿನ ಸ್ಮಾರ್ಟ್​ಫೋನ್​ಗಳು (Smartphone) ಸಾಮಾನ್ಯವಾಗಿ 32GB ಯಿಂದ ಹಿಡಿದು 256GB ವರೆಗಿನ ಮೆಮೊರಿ ಹೊಂದಿರುತ್ತದೆ. ಈ ಪೈಕಿ ಕೆಲವರಿಗೆ 256GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಇದ್ದರೂ ಜಾಗ ಸಾಕಾಗುವುದಿಲ್ಲ. ಇದಕ್ಕಾಗಿ ಮೆಮೊರಿ ಕಾರ್ಡ್​ನ ಮೊರೆ ಹೋಗುತ್ತಾರೆ. ಆದರೆ, ಮೊಬೈಲ್ ಅನ್ನು ಬುದ್ದಿವಂತಿಕೆಯಿಂದ ಬಳಕೆ ಮಾಡಿದರೆ ಮೆಮೊರಿ ಕಾರ್ಡ್ (Memory Card) ಕೊಂಡುಕೊಳ್ಳುವ ಅವಶ್ಯಕತೆಯೇ ಬರುವುದಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್ಆ್ಯಪ್ ಇದ್ದೇ ಇರುತ್ತದೆ. ಇದರಲ್ಲಿನ ಚಾಟ್ ಆ್ಯಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇಮೇಜ್‌ಗಳು ಮತ್ತು ವಿಡಿಯೋಗಳು ಹರಿದಾಡುತ್ತಿರುವುರಿಂದಾಗಿ ಸ್ಮಾರ್ಟ್‌ಫೋನಿನಲ್ಲಿ ಮೆಮೊರಿಯೂ ತುಂಬಿ ಹೋಗುತ್ತದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನಿನಲ್ಲಿ ಸ್ಪೆಸ್ (Smartphone Storage) ಅನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಅನಗತ್ಯ ಆ್ಯಪ್ ಡಿಲೀಟ್ ಮಾಡಿ: ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸುಮ್ಮನೆ ಬಳಸದೆ ಬಿದ್ದಿರುವ ಆ್ಯಪ್ ಗಳನ್ನು ಅನ್​ಇನ್​ಸ್ಟಾಲ್ ಮಾಡಿ. ಅಲ್ಲದೇ ಸ್ಮಾರ್ಟ್‌ಫೋನ್ ಖರೀದಿಸಿದ ಸಂದರ್ಭದಲ್ಲಿ ನೀಡಿರುವ ಪ್ರೀ ಲೋಡ್ ಆ್ಯಪ್ ಗಳನ್ನು ಬಳಸದಿದ್ದರೇ ಡಿಲೀಟ್ ಮಾಡಿರಿ. ಇದರಿಂದ ಹೆಚ್ಚಿನ ಪ್ರಮಾಣದ ಜಾಗವು ಖಾಲಿಯಾಗಲಿದೆ. ಆ್ಯಪ್ ಹೆಚ್ಚಾದಾಷ್ಟು ಜಾಗವು ತುಂಬಿಕೊಳ್ಳುವುದರೊಂದಿಗೆ ಕ್ಯಾಚ್ ಹೆಚ್ಚಾಗಿ ನಿಮ್ಮ ಫೋನಿನ ವೇಗ ಕೂಡ ಕಡಿಮೆಯಾಗುತ್ತದೆ.

ಜಾಸ್ತಿ ಗೇಮ್ ಬೇಡ: ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಮಕ್ಕಳು ಹಿರಿಯರು ಎನ್ನದೇ ಗೇಮ್‌ಗಳನ್ನು ಆಡುವುದರಲ್ಲಿ ಬಿಜಿಯಾಗಿರುತ್ತಾರೆ. ಈ ಗೇಮ್‌ಗಳೇ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಜಾಗವನ್ನು ಕ್ರಮಿಸಿರುತ್ತವೆ. ಈ ಹಿನ್ನಲೆಯಲ್ಲಿ ಕೆಲವೇ ಕೆಲವು ಗೇಮ್‌ಗಳನ್ನು ಇಟ್ಟುಕೊಂಡು ತುಂಬದಿನಗಳಿಂದ ಆಡದಿರುವ ಗೇಮ್‌ಗಳನ್ನು ಡಿಲೀಟ್ ಮಾಡಿ. ಇದರಿಂದ ಹೆಚ್ಚಿನ ಸ್ಪೇಸ್ ಬಳಕೆಗೆ ದೊರೆಯಲಿದೆ.

ಇದನ್ನೂ ಓದಿ
Image
Daam Virus: ಪ್ಲೇ ಸ್ಟೋರ್​ನಲ್ಲಿ ಅಪಾಯಕಾರಿ ಆ್ಯಪ್ ಪತ್ತೆ: ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Image
Realme 11 Pro+: ಜೂನ್ 8ಕ್ಕೆ ಭಾರತಕ್ಕೆ ಅಪ್ಪಳಿಸಲಿದೆ ಬರೋಬ್ಬರಿ 200MP ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್
Image
Tech Tips: ಬ್ಯಾನ್ ಆದ ವಾಟ್ಸ್​ಆ್ಯಪ್ ಖಾತೆಯನ್ನು ಮರಳಿ ಪಡೆಯುವುದು ಹೇಗೆ?: ಇಲ್ಲಿದೆ ಟಿಪ್ಸ್
Image
Galaxy M33 5G: ಬರೋಬ್ಬರಿ 6000mAh ಬ್ಯಾಟರಿ, 50MP ಕ್ಯಾಮೆರಾದ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ ಮೇಲೆ ಬಂಪರ್ ಡಿಸ್ಕೌಂಟ್

Vivo Y36: 4G, 5G ಆವೃತ್ತಿಯಲ್ಲಿ ಕಡಿಮೆ ಬೆಲೆಗೆ ಒಂದು ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ವಿವೋ

ಮೂವಿ ನೋಡಿದ ಮೇಲೆ ಡಿಲೀಟ್ ಮಾಡಿ: ಹೌದು, ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನಿನಲ್ಲಿಯೇ ಸಿನಿಮಾಗಳನ್ನು ಡೌನ್‌ಲೋಡ್ ಮಾಡಿ, ಇಲ್ಲವೇ ಶೇರ್ ಇಟ್ ಮೂಲಕ ಕಳುಹಿಸಿಕೊಂಡು ನೋಡುವ ಅಭ್ಯಾಸವು ಅಧಿಕವಾಗುತ್ತಿದೆ. ಇದರಿಂದಲೇ ಹೆಚ್ಚಿನ ಸ್ಮಾರ್ಟ್‌ಫೋನ್ ಸ್ಪೇಸ್ ಬಳಕೆಯಾಗಲಿದೆ. ಇದರಿಂದಾಗಿ ಸಿನಿಮಾ ನೋಡಿದ ಮೇಲೆ ಡಿಲೀಟ್ ಮಾಡಿ. ಹೆಚ್ಚು ಇಟ್ಟುಕೊಂಡಷ್ಟು ಜಾಗ ಕಡಿಮೆಯಾಗಲಿದೆ.

ಕ್ಯಾಚ್ ಕ್ಲಿಯರ್ ಮಾಡಿ: ನೀವು ಹೆಚ್ಚಾಗಿ ಉಪಯೋಗಿಸುತ್ತಿರುವ ಆ್ಯಪ್​ಗಳಲ್ಲಿ ಕ್ಯಾಚ್ ಗಳು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿಕೊಂಡಿರುತ್ತವೆ. ಅವುಗಳನ್ನು ಕಾಲ-ಕಾಲಕ್ಕೆ ಕ್ಲಿಯರ್ ಮಾಡಿ. ಇದರಿಂದ ನಿಮ್ಮ ಫೋನಿನ ಮೆಮೊರಿಯ ಹೆಚ್ಚಾಗಲಿದೆ. ಅನಗತ್ಯ ಡೇಟಾ ಸೇವ್ ಆಗುವುದನ್ನು ತಪ್ಪಿಸಬಹುದು. ಅಲ್ಲದೇ ಆ್ಯಪ್​ಗಳನ್ನು ಚುರುಕಾಗಿಸಬಹುದು.

ಕ್ಲೌಡ್‌ ಸ್ಟೋರೇಜ್: ಮೆಮೊರಿ ಕಾರ್ಡ್ ಬೇಡ ಎನ್ನುವವರು ಕ್ಲೌಡ್ ಸ್ಟೋರೆಜ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಇದನ್ನು ಆಕ್ಸಿಸ್ ಮಾಡಲು ನೀವು ಹೆಚ್ಚುವರಿ ಇಂಟರ್ನೆಟ್ ಹೊಂದಿರಬೇಕಾಗುತ್ತದೆ. ಇದು ಒಳ್ಳೆಯ ಆಯ್ಕೆಯಾಗಿದ್ದು, ವೇಗದ ಇಂಟರ್ನೆಟ್ ಇದ್ದರೇ ಮಾತ್ರ ಹೆಚ್ಚಿನ ಲಾಭದಾಯಕ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ