Nokia C300: ನೋಕಿಯಾದಿಂದ ಎರಡು ಜಬರ್ದಸ್ತ್ ಸ್ಮಾರ್ಟ್ಫೋನ್ಸ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
ಇದೀಗ ನೋಕಿಯಾ ಕಂಪನಿ ಎರಡು ಹೊಸ ನೋಕಿಯಾ C300 ಮತ್ತು C110 (Nokia C300 and C110) ಎಂಬ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನಿನ ಫೀಚರ್ಸ್, ಬೆಲೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ಇಂದು ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ (Nokia) ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಹಿಂದಿನಂತೆ ಬೇಡಿಕೆ ಇಲ್ಲ. ಭಾರತದಲ್ಲಂತು ನೋಕಿಯಾ ಸ್ಮಾರ್ಟ್ಫೋನ್ಗಳು ಸೇಲ್ ಆಗುವುದು ತೀರಾ ಕಡಿಮೆ. ಹೀಗಿದ್ದರೂ ಅಪರೂಪಕ್ಕೆ ಒಂದೊಂದು ಮೊಬೈಲ್ ಅನ್ನು ಬಿಡುಗಡೆ ಮಾಡುತ್ತದೆ. ದೊಡ್ಡ ಮಟ್ಟದಲ್ಲಿ ಸೇಲ್ ಆಗದ ಕಾರಣ ದುಬಾರಿ ಬೆಲೆಯ ಫೋನ್ಗಳನ್ನು ರಿಲೀಸ್ ಮಾಡುತ್ತಿಲ್ಲ. ಹೆಚ್ಚಾಗಿ ನೋಕಿಯಾ ಅನಾವರಣ ಮಾಡುವ ಸ್ಮಾರ್ಟ್ಫೋನ್ಗಳು ಬಜೆಟ್ ಬೆಲೆಗೆವೇ ಇರುತ್ತದೆ. ಅದರಂತೆ ಇದೀಗ ನೋಕಿಯಾ ಕಂಪನಿ ಎರಡು ಹೊಸ ನೋಕಿಯಾ C300 ಮತ್ತು C110 (Nokia C300 and C110) ಎಂಬ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನಿನ ಫೀಚರ್ಸ್, ಬೆಲೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ನೋಕಿಯಾ C110:
ಹೊಸ ನೋಕಿಯಾ C110 ಸ್ಮಾರ್ಟ್‌ಫೋನ್ 720×1560 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.3 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ P22 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ರನ್ ಆಗಲಿದೆ. ಬಳಕೆದಾರರು ಮೈಕ್ರೊ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಳ್ಳುವ ಮೂಲಕ ಸ್ಟೋರೇಜ್ ಅನ್ನು ವಿಸ್ತರಣೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದೆ.
ಈ ಫೋನ್‌ನ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 13 ಮೆಗಾಪಿಕ್ಸೆಲ್ ಸಿಂಗಲ್ ಲೆನ್ಸ್ನಿಂದ ಕೂಡಿದೆ. ಮುಂಭಾಗ ಸೆಲ್ಫಿಗಳಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. 3000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರುವ ಈ ಫೋನ್ 5W ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ನೋಕಿಯಾ C110 ಫೋನ್‌ನ ಬೆಲೆ ದೇಶದಲ್ಲಿ ಸುಮಾರು 8,000ರೂ. ಗಳ ಆಸುಪಾಸಿನಲ್ಲಿ ಇರಬಹುದು. ಸದ್ಯಕ್ಕೆ ಇದು ಯುಎಸ್‌ನಲ್ಲಿ ಮಾತ್ರ ಲಾಂಚ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಬಹುದು. ನೀಲಿ ಹಾಗೂ ಬೂದು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಒಂದು ದಿನದ ಅಂತರದಲ್ಲಿ ನಾಲ್ಕನೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿವೋ
ನೋಕಿಯಾ C300:
ಈ ಫೋನ್ 720 x 1600 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಇದು 2.5D ಟಫ್ಡ್ ಗ್ಲಾಸ್‌ನ ಲೇಯರ್‌ನೊಂದಿಗೆ ರಕ್ಷಣೆ ಪಡೆದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಆಂಡ್ರಾಯ್ಡ್ 12 ರನ್ ಆಗಲಿದೆ. ಈ ಫೋನ್‌ನಲ್ಲೂ ಸಹ ಹೆಚ್ಚಿನ ಸ್ಟೋರೇಜ್ ವಿಸ್ತರಣೆಗಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಆಯ್ಕೆ ನೀಡಲಾಗಿದೆ.
ನೋಕಿಯಾ C300 ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಮುಂಭಾಗ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ ಧೂಳು ಮತ್ತು ಸ್ಪ್ಲಾಶ್-ನಿರೋಧಕ ವಿನ್ಯಾಸದೊಂದಿಗೆ 4000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 10W ಚಾರ್ಜಿಂಗ್ ಬೆಂಬಲ ಪಡೆದಿದೆ. ನೋಕಿಯಾ C300 ಸ್ಮಾರ್ಟ್‌ಫೋನ್ 11,440ರೂ. ಗಳ ಬೆಲೆ ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ