Flipkart: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಬಿಗ್ ಎಂಡ್ ಆಫ್ ಸೀಸನ್ ಸೇಲ್: ಅನೇಕ ಪ್ರಾಡಕ್ಟ್ಗಳಿಗೆ ಬಂಪರ್ ಡಿಸ್ಕೌಂಟ್
Big End of Season Sale: ಈ ಬಿಗ್ ಎಂಡ್ ಆಫ್ ಸೀಸನ್ ಸೇಲ್ ವೇಳೆ ಗ್ರಾಹಕರು ಹಲವಾರು ಬ್ಯಾಂಕ್ ಗಳ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ.
ಭಾರತೀಯ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ಕಾರ್ಟ್ (Flipkart) ತನ್ನ ಬಹುನಿರೀಕ್ಷಿತ ಬಿಗ್ ಎಂಡ್ ಆಫ್ ಸೀಸನ್ ಸೇಲ್ (Big End of Season Sale) ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. ಇದರಲ್ಲಿ ದೇಶದೆಲ್ಲೆಡೆಯ 2,00,000 ಕ್ಕೂ ಅಧಿಕ ಮಾರಾಟಗಾರರು ಫ್ಯಾಶನ್, ಬ್ಯೂಟಿ, ಲೈಫ್ ಸ್ಟೈಲ್ (Life Style) ಸೇರಿದಂತೆ 10,000+ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. 1 ಜೂನ್ 2023 ರಂದು ಈ ಬಹುದೊಡ್ಡ ಮಾರಾಟ ಮೇಳಕ್ಕೆ ಚಾಲನೆ ದೊರೆತ್ತಿದ್ದು, ಇಮೇಜ್ ಸರ್ಚ್, ವಿಡಿಯೋ ಕೆಟಲಾಗ್, ವರ್ಚುವಲ್ ಟ್ರೈ-ಆನ್ಸ್, ವಿಡಿಯೋ ಕಾಮರ್ಸ್ ಮತ್ತು ಟಾಪ್ ಫಿಲ್ಟರ್ ಗಳು ಸೇರಿದಂತೆ ಇನ್ನಿತರ ತಂತ್ರಜ್ಞಾನಗಳನ್ನು ಪರಿಚಯಿಸಿರುವ ಹಿನ್ನೆಲೆಯಲ್ಲಿ ಒಂದು ವಾರ ಪೂರ್ತಿ ನಡೆಯಲಿರುವ ಈ ಮೇಳವು ಗ್ರಾಹಕರಿಗೆ ವೈಶಿಷ್ಟ್ಯಪೂರ್ಣವಾದ ಶಾಪಿಂಗ್ ಅನುಭವವನ್ನು ನೀಡಲಿದೆ.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಫ್ಯಾಶನ್ನ ಹಿರಿಯ ನಿರ್ದೇಶಕ ಅಭಿಷೇಕ್ ಮಲೂ, ”ಫ್ಲಿಪ್ಕಾರ್ಟ್ನಲ್ಲಿ ಎಂಡ್ ಆಫ್ ಸೀಸನ್ ಸೇಲ್ ನಮಗೆ ಒಂದು ರೀತಿಯ ಹಬ್ಬವಾಗಿದೆ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ಎಲ್ಲಾ ಭಾಗಿದಾರರಿಗೂ ಸಂತಸ ಹೊಂದಲು ಅವಕಾಶವನ್ನು ನೀಡುತ್ತದೆ. ನಮ್ಮ ಮಾರುಕಟ್ಟೆಯಲ್ಲಿ ಮಾರಾಟಗಾರರು ಮತ್ತು ಬ್ರ್ಯಾಂಡ್ ಗಳಿಗೆ ಅತ್ಯದ್ಭುತವಾದ ಬೆಳವಣಿಗೆಯನ್ನು ಅನ್ಲಾಕ್ ಮಾಡಲು ಇದು ನೆರವಾಗುತ್ತದೆ. ಅತ್ಯುತ್ತಮ ದರ್ಜೆಯ ಉತ್ಪನ್ನಗಳ ಬಿಡುಗಡೆಯೊಂದಿಗೆ ಸ್ಥಳೀಯ ಭಾಷೆಯ ಇಂಟರ್ಫೇಸ್ ನಮ್ಮ ಬೆಳವಣಿಗೆಯನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಅಲ್ಲದೇ, ದೇಶಾದ್ಯಂತ ಗ್ರಾಹಕರಿಂದ ನಮ್ಮ ಸ್ಥಳೀಯ ಭಾಷೆಯ ಇಂಟರ್ಫೇಸ್ ಅನ್ನು ಬಳಸಿಕೊಂಡು ಬ್ರೌಸ್ ಮಾಡುವ ಸಮಯವನ್ನು ಎದುರು ನೋಡುತ್ತಿದ್ದೇವೆ,” ಎಂದಿದ್ದಾರೆ.
WhatsApp Ban: ಏಪ್ರಿಲ್ ತಿಂಗಳಲ್ಲಿ ಭಾರತದ 74 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್ ಮಾಡಿದ ಕಂಪನಿ
ಗ್ರಾಹಕರಿಂದ ಬರುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಈ ಬಾರಿಯ ಮಾರಾಟ ಮೇಳದಲ್ಲಿ ವಿಸ್ತಾರವಾದ ಶ್ರೇಣಿಯ ಕ್ಯಾಶುವಲ್ ವೇರ್, ಎಥ್ನಿಕ್ ವೇರ್, ಫಾರ್ಮಲ್ ಮತ್ತು ಸೀಸನಲ್ ವೇರ್ ಗಳನ್ನು ಒಟ್ಟಿಗೆ ತರಲಾಗುತ್ತಿದೆ. ಇದರಲ್ಲಿ ಪಾದರಕ್ಷೆಗಳು, ಅಕ್ಸಸರಿಗಳು, ಪುರುಷರ ಮತ್ತು ಮಹಿಳೆಯರ ಉಡುಪುಗಳು, ಮಕ್ಕಳ ಉಡುಪುಗಳು ಸೇರಿವೆ. ಎಲ್ಲಾ ಮಾರಾಟಗಾರರಿಗೆ ಮತ್ತು ಬ್ರ್ಯಾಂಡ್ ಗಳಿಗೆ ಈ ಕಾರ್ಯಕ್ರಮ ಮುಕ್ತವಾಗಿದೆ. ಕೆಲವು ಗ್ರಾಹಕ ವರ್ಗಗಳಿಗೆ ಬೀಯಿಂಗ್ ಹ್ಯೂಮನ್, ಕಲ್ಟ್ ಸ್ಪೋರ್ಟ್, ಅರ್ಬಾನಿಕ್, ಹರ್ಷಿಯೆನ್ ಬಾಕ್ಸ್, ಮೊಕೊಬರ, ಫ್ಯೂಬರ್, ಆಡಿ, ಕ್ರಾಸ್ಸಾ, ಕಪಾಸ್ ಸೇರಿದಂತೆ ಇನ್ನಿತರೆ ಸ್ವದೇಶಿ ತಯಾರಿತ ಡಿ2ಡಿ ಬ್ರ್ಯಾಂಡ್ ಗಳು ನೆಚ್ಚಿನ ಬ್ರ್ಯಾಂಡ್ ಗಳಾಗಿವೆ.
ಅದೇರೀತಿ, ಲಿಬಾಸ್, ಬಿಬಾದಂತಹ ಎಥ್ನಿಕ್ ವೇರ್, ನೈಕಿ, ಪೂಮ, ಅಡಿಡಾಸ್, ಎಚ್ಆರ್ ಎಕ್ಸ್, ಫಾಸ್ಟ್ ಟ್ರ್ಯಾಕ್ ನಂತಹ ಆ್ಯಕ್ಟಿವ್ ವೇರ್ ಬ್ರ್ಯಾಂಡ್ ಗಳು, ಪೀಟರ್ ಇಂಗ್ಲೆಂಡ್, ಬ್ಲ್ಯಾಕ್ ಬರೀಸ್, ಆ್ಯರೋ ಮತ್ತು ವುಡ್ ಲ್ಯಾಂಡ್ ನಂತಹ ಫಾರ್ಮಲ್ ವೇರ್ ಬ್ರ್ಯಾಂಡ್ ಗಳಿಗೆ ಗ್ರಾಹಕರಿಂದ ಬೇಡಿಕೆ ಇದೆ. ಅದೇರೀತಿ, ಅಲೆನ್ ಸೋಲಿ, ಜಾಕ್ ಅಂಡ್ ಜಾನ್ಸ್, ಕ್ರಾಸ್ ನಂತಹ ಕಿಡ್ಸ್ ವೇರ್ ಗಳಿಗೂ ಬೇಡಿಕೆ ಹೆಚ್ಚಿದೆ.
ಈ ಬಿಗ್ ಎಂಡ್ ಆಫ್ ಸೀಸನ್ ಸೇಲ್ ವೇಳೆ ಗ್ರಾಹಕರು ಹಲವಾರು ಬ್ಯಾಂಕ್ ಗಳ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ. ಪೇಟಿಎಂ ಯುಪಿಐನಲ್ಲಿ 250 ರೂಪಾಯಿಗಿಂತ ಹೆಚ್ಚು ಮೌಲ್ಯದ ಖರೀದಿ ಮಾಡಿದರೆ 25 ರೂಪಾಯಿಗಳ ಫ್ಲ್ಯಾಟ್ ಮತ್ತು 1000 ರೂಪಾಯಿಗಿಂತ ಹೆಚ್ಚು ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದರೆ 100 ರೂಪಾಯಿ ಹಣ ವಾಪಸ್ ಬರುತ್ತದೆ. ಕನಿಷ್ಠ 500 ರೂಪಾಯಿ ಮೌಲ್ಯದ ಆರ್ಡರ್ ಗೆ ಐಸಿಐಸಿಐ ಮತ್ತು ಎಸ್ ಬಿಐ ಗ್ರಾಹಕರು ಶೇ.10 ರಷ್ಟು ಇನ್ ಸ್ಟಂಟ್ ರಿಯಾಯ್ತಿ ಕೂಪನ್ ಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ