Apple WWDC 2023: ಇಂದಿನಿಂದ Apple WWDC 2023 ಈವೆಂಟ್‌: ಏನೆಲ್ಲ ರಿಲೀಸ್ ಆಗಲಿದೆ?, ಲೈವ್ ವೀಕ್ಷಿಸುವುದು ಹೇಗೆ?

ಈ ಈವೆಂಟ್ ಮುಂದಿನ ತಲೆಮಾರಿನ ಐಒಎಸ್, ಮ್ಯಾಕ್ ಒಎಸ್14, ವಾಚ್ ಒಎಸ್ 10, ಐಪ್ಯಾಡ್ ಒಎಸ್ 17 ಮತ್ತು ಟಿವಿ ಒಎಸ್ 17, ಆವೃತ್ತಿಗಳ ಆಗಮನದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

Apple WWDC 2023: ಇಂದಿನಿಂದ Apple WWDC 2023 ಈವೆಂಟ್‌: ಏನೆಲ್ಲ ರಿಲೀಸ್ ಆಗಲಿದೆ?, ಲೈವ್ ವೀಕ್ಷಿಸುವುದು ಹೇಗೆ?
Apple Event 2023
Follow us
Vinay Bhat
|

Updated on: Jun 05, 2023 | 1:40 PM

ಆ್ಯಪಲ್‌ (Apple) ಸಂಸ್ಥೆಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2023 ಈವೆಂಟ್‌ ಜೂನ್‌ 5 ಇಂದಿನಿಂದ ಪ್ರಾರಂಭವಾಗಲಿದ್ದು, ಐದು ದಿನಗಳವರೆಗೆ ಆಯೋಜಿಸಲಾಗಿದೆ. ಜೂನ್ 9 ಕ್ಕೆ ಕೊನೆಗೊಳ್ಳಲಿದೆ. ಈ ಈವೆಂಟ್ ಮುಂದಿನ ತಲೆಮಾರಿನ ಐಒಎಸ್, ಮ್ಯಾಕ್ ಒಎಸ್14, ವಾಚ್ ಒಎಸ್ 10, ಐಪ್ಯಾಡ್ ಒಎಸ್ 17 ಮತ್ತು ಟಿವಿ ಒಎಸ್ 17, ಆವೃತ್ತಿಗಳ ಆಗಮನದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲದೆ ಬಹುನಿರೀಕ್ಷಿತ ಐಒಎಸ್ 17 (iOS 17) ಬಿಡುಗಡೆ ಆಗುವ ಸಾಧ್ಯತೆಯಿದೆ. ಈ ಹೊಸ ಆವೃತ್ತಿಗಳು ಬಳಕೆದಾರರಿಗೆ ಹೊಸ ಫೀಚರ್​ಗಳನ್ನು ತರುವ ನಿರೀಕ್ಷೆಯಿದೆ.

iOS 17, ಈ ಹಿಂದಿನ iOS 16 ಗೆ ಉತ್ತರಾಧಿಕಾರಿಯಾಗಲಿದೆ ಮತ್ತು ವಿವಿಧ ಹೊಸ ವೈಶಿಷ್ಟ್ಯಗಳು ಒಳಗೊಂಡಿರುತ್ತದೆ. ಇದು ಆಪರೇಟಿಂಗ್ ಸಿಸ್ಟಮ್ ಸಾಧನದೊಂದಿಗೆ ಸಂವಹನ ನಡೆಸುವ ಹೊಸ ವಿಧಾನಗಳನ್ನು ಮತ್ತು ಕೆಲವು ತಾಜಾ ಆಪಲ್ ಅಪ್ಲಿಕೇಶನ್‌ಗಳನ್ನು ಈ ಹೊಸ ಆವೃತ್ತಿಯ ಹೊಂದಿರುತ್ತದೆ. ಆ್ಯಪಲ್ ಈವೆಂಟ್​ನಲ್ಲಿ ಹೊಸ ಐಓಎಸ್ ಸರಣಿ ಘೋಷಣೆಯಾದರೂ, ಅವುಗಳ ಪರೀಕ್ಷಾರ್ಥ ಬಳಕೆ ಮುಗಿದ ಬಳಿಕ, ಸೆಪ್ಟೆಂಬರ್​ನಲ್ಲಿ ಸಾಮಾನ್ಯ ಬಳಕೆದಾರರಿಗೆ ಲಭ್ಯವಾಗಲಿದೆ. ನಂತರ, ಅವುಗಳನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕಿದೆ.

Redmi 12: ಬಿಡುಗಡೆಗೆ ಸಿದ್ದವಾದ ಶವೋಮಿ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಸದ್ಯದಲ್ಲೇ ರೆಡ್ಮಿ 12 ಫೋನ್ ರಿಲೀಸ್

ಇದನ್ನೂ ಓದಿ
Image
Tech Tips: ಗೂಗಲ್ ಫೋಟೋಸ್​ನಲ್ಲಿರುವ ಫೈಲ್ಸ್ ಡಿಲೀಟ್ ಆದ್ರೆ ಮರಳಿ ಪಡೆಯುವುದು ಹೇಗೆ?
Image
Tecno Camon 20: ಟೆಕ್ನೋ ಕಂಪನಿ ಇದೀಗ ಮತ್ತೆ ಮೂರು ಮೊಬೈಲ್ ಲಾಂಚ್ ಮಾಡಿದೆ!
Image
Vivo Y35+ 5G: ಸದ್ದಿಲ್ಲದೆ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ವಿವೋ
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಡಿಸ್ ಪ್ಲೇ ಸ್ಕ್ರಾಚ್​ ಆಗಿದ್ದರೆ ಬದಲಾಯಿಸಬೇಕಿಲ್ಲ: ಜಸ್ಟ್ ಹೀಗೆ ಮಾಡಿ

ಆ್ಯಪಲ್ ತನ್ನ ಬಹುನಿರೀಕ್ಷಿತ ವರ್ಚುವಲ್ ಮತ್ತು ವರ್ಧಿತ ರಿಯಾಲಿಟಿ ಹೆಡ್‌ಸೆಟ್ ಅನ್ನು ಈ ವರ್ಷದ ಡೆವಲಪರ್ ಸಮ್ಮೇಳನದಲ್ಲಿ ಬಿಡುಡಗೆ ಮಾಡಲಿದೆ. ಈ ಮಿಕ್ಸ್​ಡ್ ರಿಯಾಲಿಟಿ ಹೆಡ್‌ಸೆಟ್‌ಗೆ ‘ರಿಯಾಲಿಟಿ ಪ್ರೊ’ ಎಂದು ಹೆಸರಿಡಲಾಗಿದೆ. Apple AR/VR ರಿಯಾಲಿಟಿ ಪ್ರೊ ಹೆಡ್‌ಸೆಟ್ ಆ್ಯಪಲ್‌ನ xrOS ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗಿದೆ. ಇದು ಗೇಮಿಂಗ್ ಮತ್ತು ಉತ್ಪಾದಕತೆಗಾಗಿ ವಿನ್ಯಾಸಗೊಳಿಸಲಾಗಿದೆ. ರಿಯಾಲಿಟಿ ಪ್ರೊ ಅನ್ನು ಆ್ಯಪಲ್‌ನ M2 ಚಿಪ್‌ಸೆಟ್‌ನ ಸಾಲಿನಲ್ಲಿ SoC ಮೂಲಕ ಚಾಲಿತಗೊಳಿಸಬಹುದು. ದೇಹದ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಮುಖಭಾವಗಳನ್ನು ಓದಲು ಇದು ಕ್ಯಾಮೆರಾಗಳೊಂದಿಗೆ ಬಿಡುಗಡೆ ಆಗಲಿದೆ.

M2 ಚಿಪ್‌ಸೆಟ್‌ನೊಂದಿಗೆ ಹೊಸ ಮ್ಯಾಕ್‌ಬುಕ್:

ಆ್ಯಪಲ್ 15 ಇಂಚಿನ ಪರದೆಯೊಂದಿಗೆ ಅತಿದೊಡ್ಡ ಮ್ಯಾಕ್‌ಬುಕ್ ಏರ್ ಅನ್ನು ರಿಲೀಸ್ ಮಾಡಲಿದೆ ಎನ್ನಲಾಗಿದೆ. ಇದು M2 ಚಿಪ್‌ಸೆಟ್​ನೊಂದಿಗೆ ಕಾರ್ಯನಿರ್ವಹಿಸಲಿದೆ. ಕಳೆದ ವರ್ಷ ಬಿಡುಗಡೆ ಆದ 14-ಇಂಚಿನ ಮ್ಯಾಕ್‌ಬುಕ್ ಪ್ರೊನಲ್ಲಿ ಕೂಡ ಇದೇ ಚಿಪ್​ಸೆಟ್​ ಅನ್ನು ಬಳಸಲಾಗಿತ್ತು. ಕೆಲವು ವರದಿಗಳ ಪ್ರಕಾರ, ಆ್ಯಪಲ್ Mac 14.13 ಮತ್ತು Mac 14.14 ಎಂದು ಲೇಬಲ್ ಮಾಡಲಾದ ಎರಡು ಹೊಸ ಮ್ಯಾಕ್ ಡೆಸ್ಕ್‌ಟಾಪ್‌ಗಳನ್ನು ಪರೀಕ್ಷಿಸುತ್ತಿದೆ ಎಂದು ಹೇಳಲಾಗಿದೆ. ಇದು M2 ಅಲ್ಟ್ರಾ ಮತ್ತು M2 ಮ್ಯಾಕ್ಸ್ ಚಿಪ್‌ಗಳನ್ನು ಹೊಂದಿರುತ್ತದಂತೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

ಆ್ಯಪಲ್‌ ಈವೆಂಟ್ ವೆಬ್‌ಸೈಟ್‌ನಲ್ಲಿ ವೀಕ್ಷಕರು Apple WWDC 2022 ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ನೀವು ಆ್ಯಪಲ್‌ ಯೂಟ್ಯೂಬ್ ವೆಬ್‌ಸೈಟ್‌ನಲ್ಲಿ ಲೈವ್ ಫೀಡ್ ಅನ್ನು ಸಹ ವೀಕ್ಷಿಸಬಹುದು. ಪ್ರಧಾನ ಭಾಷಣವು ಜೂನ್ 5 ರಂದು ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:30ಕ್ಕೆ ಶುರುವಾಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್