WhatsApp New Feature: ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ಗಳಿಗೆ ಶುಭ ಸುದ್ದಿ: ನಿಮಗೆ ಸಿಗಲಿದೆ ವಿಶೇಷ ಪವರ್
WhatsApp Group Admin: ವಾಟ್ಸ್ಆ್ಯಪ್ ಇದೀಗ ಮತ್ತೊಂದ ಹೊಸ ಫೀಚರ್ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಇದರಲ್ಲಿ ಗ್ರೂಪ್ ಅಡ್ಮಿನ್‌ಗೆ ವಿಶೇಷ ಪವರ್ ದೊರೆಯಲಿದೆ.
ಇಂದು ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಬಹುತೇಕ ಜನರು ಉಪಯೋಗಿಸುತ್ತಿರುವ ಆ್ಯಪ್ ಎಂದರೆ ಅದು ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ (WhatsApp). ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಉಪಯೋಗಿಸುತ್ತಿದ್ದಾರೆ. ಈಗಂತು ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ. ವಾರಕ್ಕೊಂದು ನೂತನ ಆಯ್ಕೆಗಳನ್ನು ನೀಡುವ ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಹೊಸ ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ಇದರ ನಡುವೆ ವಾಟ್ಸ್ಆ್ಯಪ್ ಇದೀಗ ಮತ್ತೊಂದ ಹೊಸ ಫೀಚರ್ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಇದರಲ್ಲಿ ಗ್ರೂಪ್ ಅಡ್ಮಿನ್‌ಗೆ (Group Admin) ವಿಶೇಷ ಪವರ್ ದೊರೆಯಲಿದೆ.
WABetaInfo ಮಾಡಿರುವ ವರದಿಯ ಪ್ರಕಾರ, ಗ್ರೂಪ್ನಲ್ಲಿ ಬಂದ ಮೆಸೇಜ್ ಅನಗತ್ಯ ಅಥವಾ ನಿಯಮಕ್ಕೆ ವಿರುದ್ಧವಾಗಿದ್ದರೆ ಸದಸ್ಯ ಅದನ್ನು ಗ್ರೂಪ್ ಅಡ್ಮಿನ್‌ಗೆ ವರದಿ ಮಾಡಬಹುದು. ಅಷ್ಟೇ ಅಲ್ಲದೆ ಅಡ್ಮಿನ್ ಅನುಮತಿಸಿದರೆ ಆ ಮೆಸೇಜ್ ಅನ್ನು ಯಾವ ಸದಸ್ಯನಿಗೆ ಬೇಕಾದರೂ ಡಿಲೀಟ್ ಮಾಡಬಹುದು. ಸರಳವಾಗಿ ಹೇಳುವುದಾದರೆ, ಒಂದು ಗುಂಪಿನಿಂದ ನೀವು ಇಷ್ಟವಿಲ್ಲದ ಸಂದೇಶವನ್ನು ಸ್ವೀಕರಿಸಿದರೆ, ನೀವು ಆ ಸಂದೇಶದ ಕುರಿತು ಗ್ರೂಪ್ ಅಡ್ಮಿನ್‌ಗೆ ದೂರು ನೀಡಬಹುದು. ವರದಿ ಮಾಡಿದ ನಂತರ, ಗ್ರೂಪ್ ಅಡ್ಮಿನ್ ಆ ಸಂದೇಶವನ್ನ ಪರಿಶೀಲಿಸಿ ಡಿಲೀಟ್ ಮಾಡಬಹುದು ಅಥವಾ ಗ್ರೂಪ್ನಲ್ಲಿರುವ ಇತರೆ ಸದಸ್ಯರಿಗೆ ಡಿಲೀಟ್ ಮಾಡುವಂತಹ ಅವಕಾಶ ನೀಡಬಹುದು. ಈ ಮೂಲಕ ಗ್ರೂಪ್ನಲ್ಲಿ ಉತ್ತಮ ವಾತಾವರಣ ಸೃಷ್ಟಿಸುವುದು ವಾಟ್ಸ್ಆ್ಯಪ್ನ ಮುಖ್ಯ ಉದ್ದೇಶವಾಗಿದೆ.
Realme 11 Pro Plus: ಮೂರೇ ದಿನ ಬಾಕಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ 200MP ಕ್ಯಾಮೆರಾ ಸ್ಮಾರ್ಟ್‌ಫೋನ್
ಚಾಟ್ ಲಾಕ್ ಹಾಗೂ ಹೈಡ್ ಮಾಡುಬಹುದು:
ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ (Hide) ಮಾಡಬಹುದು ಎಂದು ಹೇಳಿದೆ. ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್ಗೆ ಹೋಗುತ್ತದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯ 2.23.8.2 ಅಪ್‌ಡೇಟ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ.
ವಾಟ್ಸ್ಆ್ಯಪ್ನಲ್ಲಿ ಇರಲ್ಲ ಸ್ಕ್ಯಾಮ್ ಕರೆಗಳ ಕಿರಿ ಕಿರಿ:
ವಾಟ್ಸ್ಆ್ಯಪ್ ಸದ್ಯದಲ್ಲೇ ತನ್ನ ಬಳಕೆದಾರರಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಮ್ಯೂಟ್ ಮಾಡುವ ಸೌಲಭ್ಯವನ್ನು ನೀಡಲಿದೆ. ಈ ಫೀಚರ್ ಆಯ್ದ ಬೀಟಾ ಟೆಸ್ಟರ್‌ಗಳಿಗೆ ಮಾತ್ರ ಲಭ್ಯವಿದೆ. ಕೆಲವೆ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಇದರ ಮೂಲಕ ನಿಮ್ಮ ಫೋನ್‌ಗಳಿಗೆ ವಾಟ್ಸ್ಆ್ಯಪ್ ಮೂಲಕ ಬರುವ ಅಪರಿಚಿತ ಕರೆಗಳನ್ನು ಸೈಲೆನ್ಸ್ ಮಾಡಬಹುದು. WABetaInfo ತಾಣದಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ ಈ ಫೀಚರ್ ವಾಟ್ಸ್ಆ್ಯಪ್ ಆಂಡ್ರಾಯ್ಡ್ 2.23.10.7 ಅಪ್‌ಡೇಟ್‌ನಲ್ಲಿ ದೊರಕಲಿದೆ. ಇದಕ್ಕಾಗಿ ಸೆಟ್ಟಿಂಗ್> ಪ್ರೈವೇಸಿ ಮೆನುಗೆ ಹೋಗಿ ಕ್ಲಿಕ್ ಮಾಡಬೇಕು. ಇದರಿಂದ ಸ್ಪ್ಯಾಮ್ ಕರೆಗಳನ್ನು ನಿಯಂತ್ರಿಸಲು ವಾಟ್ಸ್ಆ್ಯಪ್ ಬಳಕೆದಾರರಿಗೆ ಸಾಧ್ಯವಾಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ